ಮೋಹನ್ ರಾಜ್ ಬಿಜೆಪಿ ಶಾಸಕರೊಬ್ಬರ ಆಪ್ತರು, ಮೋಹನ್ ರಾಜ್ ಹೆಸರು ಹೊರಗಡೆ ಬರುತ್ತಿದ್ದಂತೆ ಅವರ ಪೋನ್ ಸ್ವೀಚ್ ಆಫ್‌

ರಾಜ್ಯ

ಮೋಹನ್ ರಾಜ್ ಬಿಜೆಪಿ ಪಕ್ಷದೊಡನೆ ಗುರುತಿಸಿಕೊಂಡಿರುವ ವ್ಯಕ್ತಿ.

ದರ್ಶನ್ ಮನೆಯಲ್ಲಿ 70 ಲಕ್ಷ ರೂ. ವಶಪಡಿಸಿಕೊಂಡ ಹಣದಲ್ಲಿ 40 ಲಕ್ಷ ಹಣ ಕೊಟ್ಟದ್ದು ಮೋಹನ್ ರಾಜ್ ಎಂದು ಕಾಮಾಕ್ಷಿ ಪಾಳ್ಯ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ದರ್ಶನ್ ಗೆ ಹಣ ಕೊಟ್ಟಿರುವ ಮೋಹನ್ ರಾಜ್ ಶಾಸಕರೊಬ್ಬರ ಆಪ್ತರು ಎಂದು ತಿಳಿದು ಬಂದಿದೆ. ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್ ರಾಜ್ ಎಂಬುವವರು ಪೋನ್ ಸ್ವೀಚ್ ಆಫ್‌ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಮೋಹನ್ ರಾಜ್ ಕೂಡ ಬಿಜೆಪಿ ಪಕ್ಷದೊಡನೆ ಗುರುತಿಸಿಕೊಂಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸುತ್ತಿರುವ ಕಾಮಾಕ್ಷಿ ಪಾಳ್ಯ ಪೊಲೀಸರು, ಮೋಹನ್ ರಾಜ್ ಪೋನ್ ಸ್ವೀಚ್ ಆಫ್ ಆಗಿರುವುದರಿಂದ ಅವರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ. ವಿಚಾರಣ ವೇಳೆ ಬಂಧಿತರು ನೀಡಿದ ಮಾಹಿತಿ ಮೇರೆಗೆ ಮನೆಗೆ ಹೋಗಿ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡ 70 ಲಕ್ಷ ರೂ.ಗಳಲ್ಲಿ ಎಲ್ಲಿ ಎಲ್ಲಿ ಪಡೆದಿದ್ದರು ಎಂಬ ಮೂಲಗಳನ್ನು ಕೆದಕಿದಾಗ ಈ ವಿಷಯ ತಿಳಿದು ಬಂದಿದೆ.