ಕಸಬಾ ಬೆಂಗ್ರೆ ಪ್ರಾಥಮಿಕ ಶಾಲೆಯ ಆವರಣಗೋಡೆಯ ಸಮಸ್ಯೆ ಮತ್ತು ಕೊಠಡಿಗಳ ದುರಸ್ತಿಗೆ ಶೀಘ್ರ ಪರಿಹಾರ ಕಲ್ಪಿಸಿಕೊಡಲು ಡಿವೈಎಪ್ಐ ಬೇಂಗ್ರೆ ಘಟಕದಿಂದ ಮನವಿ

ಕರಾವಳಿ

ಕಸಬಾ ಬೆಂಗ್ರೆ: DYFI ಬೆಂಗ್ರೆ ಗ್ರಾಮ ಸಮಿತಿ ಮಂಗಳೂರು ತಾಲೂಕಿನ ಬೆಂಗ್ರೆ ಕಸಬಾ ಸರಕಾರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆಯ ಕುರಿತು ಕಳೆದ ಮೂರು ವರ್ಷಗಳಿಂದ ಶಾಲೆಯ ಆವರಣಗೋಡೆಯ ಸಮಸ್ಯೆ ಕುರಿತು ಶಾಲಾ ಸಮಿತಿಯಿಂದ ಸಂಭಂದಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಮನವಿಗಳನ್ನು ನೀಡಿದರು ಯಾವುದೇ ಕಾಮಗಾರಿ ಪ್ರಾರಂಭವಾಗಿರುವುದಿಲ್ಲ. ಕಳೆದ ಎರಡು ವರ್ಷಗಳಿಂದ ಆವರಣಗೋಡೆಯ ಭಾಗಗಳು ಬೀಳುತಿದ್ದು ಮೊನ್ನೆ ಶನಿವಾರ ಮತ್ತೆ ಮಕ್ಕಳಿರದ ಸಂಜೆ ಸಂಧರ್ಭದಲ್ಲಿ ಗೋಡೆ ಭಾಗ ಬಿದ್ದಿದೆ. ಅಪಾಯ ಸ್ಥಿತಿಯಲ್ಲಿರುವ ಆವರಣಗೋಡೆಯ ಪುನರ್ನಿರ್ಮಾಣ ಶಾಲಾ ತರಗತಿ ದುರಸ್ತಿ ಸಮಸ್ಯೆಗೆ ಸಂಭಂದಿಸಿ ಜನವರಿ 11-2024 ರಂದು DYFI ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಸಮಸ್ಯೆ ಪರಿಹರಿಸಲು ಒತ್ತಾಯಿಸಿದ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಿದ್ದರು.

DDPi ಹಾಗೂ ಶಾಲೆಯ ಕಾಮಗಾರಿ ಕೆಲಸಕ್ಕೆ ಸಂಭಂದಿಸಿದ ಕಾರ್ಯನಿರ್ವಾಹಕರನ್ನು ಬೇಟಿ ಮಾಡಿ ಚರ್ಚಿಸಿ, ಅದರಂತೆ ಕಾರ್ಯ ನಿರ್ವಾಹಕರು ನೂತನ ಕಾಮಗಾರಿ ಅಂದಾಜು ವೆಚ್ಚಗಳನ್ನು ಸಿದ್ದಪಡಿಸಿ ಇಲಾಖೆಗೆ ಸಲ್ಲಿಸಿತ್ತು. ಪ್ರಸ್ತುತ ಮತ್ತೆ ಆವರಣಗೋಡೆಯ ಒಂದು ಭಾಗ ಬಿದ್ದ ಕಾರಣ ಇತರ ಭಾಗಗಳು ಅಪಾಯ ಸ್ಥಿತಿಯಲ್ಲಿರುವ ವಿಚಾರಗಳನ್ನು ತಿಳಿಸಿ ಚರ್ಚಿಸಿ, ಶಾಲಾ ಆವರಣಗೋಡೆ ಮತ್ತು ಕೊಠಡಿಗಳ ದುರಸ್ತಿಗಳ ಮತ್ತು ಇತರ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿ ಎಸ್ಟಿಮೇಶನ್ ರಾಜ್ಯ ಸಮಿತಿಗೆ ಈಗಾಗಲೇ ಕಲಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿದರು.

ಮನವಿಯನ್ನು ಸ್ವೀಕರಿಸಿ ಮತ್ತೊಮ್ಮೆ ಶೀಘ್ರ ಪರಿಹರಿಸುವಂತೆ ರಾಜ್ಯದ ಶಿಕ್ಷಣ ಸಂಭಂದಿಸಿದ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗದೆ ಪ್ರಾರಂಭವಾಗಬೇಕೆಂದು ವಾರದೊಳಗೆ ಕೆಲಸಕಾರ್ಯಕ್ಕೆ ಸಂಬಂಧಿಸಿದ ವಿಚಾರ ಸ್ಪಷ್ಟ ಪಡಿಸುವಂತೆ ತಿಳಿಸಲಾಯಿತು.
ಇಲ್ಲದಿದ್ದರೆ ಕಚೇರಿ ಎದುರು ಪ್ರತಿಭಟನೆ ಮಾಡುವ ಬಗ್ಗೆ ಎಚ್ಚರಿಕೆಯನ್ನು DYFI ಬೆಂಗ್ರೆ ಘಟಕದಿಂದ ನೀಡಲಾಯಿತು.

ಈ ಸಂಧರ್ಭದಲ್ಲಿ DYFI ರಾಜ್ಯ ಉಪಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್, ದ.ಕ ಜಿಲ್ಲಾ ಸಹ ಕಾರ್ಯದರ್ಶಿ ಅಬ್ದುಲ್ ತೈಯೂಬ್, SDMC ಅಧ್ಯಕ್ಷರಾದ ಪಿ ಜಿ ರಫೀಕ್,11ನೇ DYFI ಘಟಕ ಅಧ್ಯಕ್ಷರಾದ ಝುಬೈರ್, ನಾಸಿರ್, ಬಾಸ್, ಯಹಿಯಾ ಬಿಲಾಲ್, ರಫೀಕ್, ಮುಹಾಝ್, ಫಯಾಝ್ ಮುಂತಾದವರು ಉಪಸ್ಥಿತರಿದ್ದರು.