ರಾಜ್ಯ ಶಿಕ್ಷಣ ನೀತಿ (SEP) ಕುರಿತು ಇಂದು ಮುಸ್ಲಿಂ ಮುಖಂಡರ ಸಮಾಲೋಚನಾ ಸಭೆ

ರಾಜ್ಯ

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಗಾಂಧಿನಗರ, ಫ್ರೀಡಂ ಪಾರ್ಕ್ ಹಿಂಭಾಗ, ಬೆಂಗಳೂರು. ಜುಲೈ 6 ರಂದು ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ನಡೆಯಲಿದೆ

ಕರ್ನಾಟಕ ಸರ್ಕಾರ ರೂಪಿಸುತ್ತಿರುವ ರಾಜ್ಯ ಶಿಕ್ಷಣ ನೀತಿಗಳ ನಿರೂಪಣೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಗಳ ಮಕ್ಕಳು ಶಿಕ್ಷಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಕುರಿತು ಚರ್ಚಿಸಲು ಸಮುದಾಯದ ಪ್ರತಿನಿದಿಗಳೊಂದಿಗೆ ಚರ್ಚಿಸಲು ಇದೇ ಜುಲೈ 6 ರಂದು ಸಮಾಲೋಚನಾ ಸಭೆ ನಡೆಯಲಿದೆ ಎಂದು ಖಾಸಿಂ ಸಾಬ್. ಎ ಮತ್ತು ಸಂಶೋಧಕರಾದ ಡಾ. ಆರ್. ವಿ. ಚಂದ್ರಶೇಖರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ನೀತಿ SEP ಯನ್ನು ರೂಪಿಸಿ, ಜಾರಿಗೊಳಿಸಲು ಸಿದ್ದವಾಗಿದೆ. ಇದರ ಭಾಗವಾಗಿ ಕರ್ನಾಟಕ ರಾಜ್ಯದ ಎಲ್ಲಾ ಸಮುದಾಯಗಳ ಶೈಕ್ಷಣಿಕ ಸವಾಲು, ಸಮಸ್ಯೆ, ತೊಂದರೆ, ಹಿಂದುಳಿದ, ಪ್ರಾತಿನಿದಿತ್ವ, ಭಾಗವಹಿಸುವಿಕೆಯಲ್ಲಿನ ಎಲ್ಲಾ ಸವಾಲು-ಸಮಸ್ಯೆ ಮತ್ತು ಅವಕಾಶಗಳನ್ನು ಪಟ್ಟಿಮಾಡಿ ಅವುಗಳ ಪರಿಹಾರಗಳ ಜೊತೆಗೆ ಇವುಗಳನ್ನು ಈ ರಾಜ್ಯ ಶಿಕ್ಷಣ ನೀತಿಯಲ್ಲಿ ಸೇರ್ಪಡೆಗೊಳಿಸಲು ಈಗಾಗಲೇ sc, st, obc ವಿಶೇಷವಾಗಿ ಶೋಷಿತರ /ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಜೊತೆ ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯ ಶಿಕ್ಷಣ ನೀತಿ -ನಿರೂಪಣಾ ಸಮಿತಿ ಯು ಈಗಾಗಲೇ ಹಲವಾರು ಸಭೆಗಳನ್ನು ನಡೆಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ(NEP)ಯು ಕೇವಲ ಭಾರತದಲ್ಲಿರುವಂತಹ ಮೇಲ್ಜಾತಿಗಳು ಈಗಾಗಲೇ ಶಿಕ್ಷಣವನ್ನು ಪಡೆದು ಮುಂದುವರಿದಿರುವ ಉಳ್ಳವರ ಪರವಾಗಿ ರೂಪಿಸಲಾಗಿತ್ತು. ಶೋಷಿತರ ಅಂದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರನ್ನು ಅಲಕ್ಷ್ಯ ಮಾಡಲಾಗಿತ್ತು. ಅದರಲ್ಲಿ ಯಾವುದೇ ರೀತಿಯ ಶೋಷಿತ ಸಮುದಾಯಗಳ ಭಾಗವಹಿಸುವಿಕೆ ಇರಲಿಲ್ಲ. ಅಲ್ಲದೆ ಈ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯಗಳನ್ನು ಕಲಿಸಲು ಹೆಚ್ಚು ಆಸಕ್ತಿಯನ್ನು ಹೊಂದಿರಲಿಲ್ಲ.

ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳು ತಮಗೆ ರಾಷ್ಟ್ರೀಯ ಶಿಕ್ಷಣ ನೀತಿ – National Education Policy (NEP) ಬೇಡ ಎಂದು ರಾಜ್ಯಗಳ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಿವೆ.

ಅದರ ಮುಂದು ಮುಂದುವರೆದ ಭಾಗವಾಗಿ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಶಿಕ್ಷಣ ನೀತಿ(SEP)ಯನ್ನು ರೂಪಿಸಲು ಒಂದು ಸಮಿತಿಯನ್ನು ರೂಪಿಸಿದೆ ಆ ಸಮಿತಿಯು ರಾಜ್ಯದ ಎಲ್ಲಾ ಸಮುದಾಯಗಳ ಅಭಿಪ್ರಾಯ ಗಳನ್ನು ಸಮಗ್ರವಾದ ಅಧ್ಯಯನ ಕೈಗೊಂಡು ರಾಜ್ಯದಲ್ಲಿ ಶಿಕ್ಷಣ ನೀತಿಯನ್ನು ರೂಪಿಸುತ್ತಿದೆ ಅದರಲ್ಲಿ ವಿವಿಧ ಗುಂಪುಗಳಿಗೆ ಇಲ್ಲಿಯವರೆಗೆ ಆಗಿರುವ ಶಿಕ್ಷಣದ ಅಸಮಾನತೆಗಳನ್ನು ಕುರಿತು ಮಾಹಿತಿ ಸಂಗ್ರಹಿಸಲು ಸಮುದಾಯಗಳೊಂದಿಗೆ ಅಭಿಪ್ರಾಯಗಳ ಸಂಗ್ರಹ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಹಾಗೆಯೇ, ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದ, ಶೋಷಿತ, ಅವಕಾಶ ವಂಚಿತ, OBC ವರ್ಗಗಳ ಒಳಗಿನ, ಧಾರ್ಮಿಕ ಅಲ್ಪಸಂಖ್ಯಾತರಾದ, ವಿಶೇಷವಾಗಿ ಶೈಕ್ಷಣಿಕವಾಗಿ ಅತಿಹಿಂದುಳಿದ ಮುಸ್ಲಿಂ ಸಮುದಾಯದ ಶೈಕ್ಷಣಿಕ ಸಮಸ್ಯೆ ಹಾಗು ಸವಾಲುಗಳನ್ನು ಚರ್ಚಿಸಲು ಮುಸ್ಲಿಂ ಪ್ರತಿನಿದಿಗಳ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

ಈ ಸಭೆಯು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಗಾಂಧಿನಗರ, ಫ್ರೀಡಂ ಪಾರ್ಕ್ ಹಿಂಭಾಗ, ಬೆಂಗಳೂರು. ಇಲ್ಲಿ ಜುಲೈ 6 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿದೆ

ಕರ್ನಾಟಕ ಸರಕಾರದ SEP ನಿರೂಪಣೆ ಸಮಿತಿಯ ಮುಖಂಡರು ಉಪಸ್ಥಿತರಿರುವ ಈ ಸಭೆಯಲ್ಲಿ ಕರ್ನಾಟಕ ರಾಜ್ಯದ ಮುಸ್ಲಿಂ ಸಮುದಾಯಗಳ ಪ್ರತಿನಿದಿಗಳು / ಮುಖಂಡರು ಈ ಸಭೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.