ಡಾ. ಭರತ್ ಶೆಟ್ರೆ.. ತಾವೊಬ್ಬ ಪೆದ್ದ ಶಾಸಕ.! ಕಾವೂರು ಪ್ರತಿಭಟನಾ ಸಭೆಯಲ್ಲಿ ಇನಾಯತ್ ಆಲಿ ಠಕ್ಕರ್

ಕರಾವಳಿ

ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜಯಷೋಷ ‘ನಾನೂ ಹಿಂದೂ’

ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಅಸಂಬದ್ಧ ಪದ ಬಳಕೆ ಮಾಡಿರುವ ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ ವಿರುದ್ಧ ಸುರತ್ಕಲ್, ಗುರುಪುರ ಬ್ಲಾಕ್ ವತಿಯಿಂದ ಇನಾಯತ್ ಆಲಿ ನೇತೃತ್ವದಲ್ಲಿ ಕಾವೂರಿನಲ್ಲಿ ಇಂದು ಸಂಜೆ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರತ್ ಶೆಟ್ಟಿ ವಿರುದ್ಧ ಧಿಕ್ಕಾರ ಕೂಗಿ ಬಂಧಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಇನಾಯತ್ ಆಲಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸುವ ಭರತ್ ಶೆಟ್ಟಿ ಹೇಳಿಕೆಗೆ ಠಕ್ಕರ್ ಕೊಟ್ಟರು. ಅನಂತ್ ಕುಮಾರ್ ಹೆಗ್ಡೆ, ಈಶ್ವರಪ್ಪ, ಪ್ರತಾಪ್ ಸಿಂಹ ರಂತೆ ನಾಲಿಗೆ ಹರಿಯಬಿಡಲು ಆರಂಭಿಸಿದ ಭರತ್ ಶೆಟ್ಟಿ ಯನ್ನು ಬಿಜೆಪಿಯೇ ಮೂಲೆಗುಂಪು ಮಾಡುವ ದಿನ ದೂರವಿಲ್ಲ. ಉತ್ತರದ ಮತದಾರರು ಮನೆಗೆ ಕಳುಹಿಸುವ ಕೆಲಸ ಮಾಡಲಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದರು.

ಕೋವಿಡ್ ಸಮಯದಲ್ಲಿ ಪಚ್ಚನಾಡಿಯಲ್ಲಿ ಹಿಂದೂ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಶಾಸಕ ಭರತ್ ಶೆಟ್ಟಿ ಇದೀಗ ಸಮಸ್ತ ಹಿಂದೂ ಬಾಂಧವರು ಎನ್ನುತ್ತಾ ರಂಗಕ್ಕಿಳಿದಿದ್ದಾರೆ. ಅವರು ಆಡಿರುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದರು.

ರಾಹುಲ್ ಗಾಂಧಿ ಕೆನ್ನೆಗೆ ಬಾರಿಸುವ ಮುನ್ನ ರಾಷ್ಟ್ರೀಯ ಹೆದ್ದಾರಿ, ಮೂಲಭೂತ ಸೌಕರ್ಯ ವನ್ನು ಕ್ಷೇತ್ರದ ಜನರಿಗೆ ಮೊದಲು ತಲುಪಿಸಲಿ. ಇಲ್ಲವಾದರೆ ಜನರೇ ಇವರ ಕೆನ್ನೆಗೆ ಬಾರಿಸುವುದು ಸತ್ಯ.

ಒಂದರ್ಥದಲ್ಲಿ ಇವರು ಡೆಂಟಲ್ ಡಾಕ್ಟ್ರಾ.. ಮೆಂಟಲ್ ಪೇಷಂಟಾ ಎಂದು ಭರತ್ ಶೆಟ್ಟಿ ವಿರುದ್ಧ ಇನಾಯತ್ ಆಲಿ ಠಕ್ಕರ್ ಕೊಟ್ಟರು.

ಪ್ರತಿಭಟನಾ ಸಭೆಯಲ್ಲಿ ಎಂ.ಜಿ.ಹೆಗ್ಡೆ, ಪುರುಷೋತ್ತಮ ಚಿತ್ರಾಪುರ, ಶಾಲೆಟ್ ಪಿಂಟೋ ಸಭೆ ಉದ್ದೇಶಿಸಿ ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ಹಿಂದೂ ಕಾಂಗ್ರೆಸ್ ಕಾರ್ಯಕರ್ತರು ‘ನಾನೂ ಹಿಂದೂ’ ಜಯಘೋಷ ಆಕರ್ಷಿಸಿತು.

ಪ್ರತಿಭಟನಾಕಾರರು ಬಿಜೆಪಿ ಶಾಸಕ ಭರತ್ ಶೆಟ್ಟಿ ಕಚೇರಿ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ತಡೆದು ನಾಯಕರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

ಭರವಸೆಯ ನಾಯಕ ಇನಾಯತ್ ಆಲಿ ನೇತೃತ್ವದಲ್ಲಿ ಕಾವೂರಿನಲ್ಲಿ ಇವತ್ತು ಜರುಗಿದ ಪ್ರತಿಭಟನೆ ಬಿಜೆಪಿಗೆ ದೊಡ್ಡ ಎಚ್ಚರಿಕೆ ಕೊಡುವಂತಿತ್ತು.