ನಾಲ್ಕು ರಾಜ್ಯಗಳ ಚುನಾವಣೆಯ ಸ್ಟಾರ್ ಕ್ಯಾಂಪೈನ್ ಪಟ್ಟಿಯಿಂದ ಸಿದ್ದರಾಮಯ್ಯ ಔಟ್..?

ರಾಜ್ಯ

ಸಿದ್ದರಾಮಯ್ಯ ರಿಂದ ಹೈಕಮಾಂಡ್ ಅಂತರ ಕಾಯ್ದುಕೊಳ್ಳಲು ಆರಂಭಿಸಿದೆಯಾ.?

ಅಹಿಂದ ನಾಯಕ, ತನ್ನದೇ ಆದ ವರ್ಚಸ್ಸಿನಿಂದ ರಾಜಕಾರಣದಲ್ಲಿ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ರಿಗೆ ಮುಡಾ ಹಗರಣ ಸಂಕಷ್ಟ ತಂದುಕೊಡುತ್ತಿದೆಯಾ ಅನ್ನುವ ಚರ್ಚೆಗಳು ಇದೀಗ ಆರಂಭವಾಗಿದೆ.

ಹರ್ಯಾಣ, ಜಮ್ಮು ಕಾಶ್ಮೀರ ಸೇರಿದಂತೆ ಉತ್ತರ ಭಾರತದ 4 ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ಸ್ಟಾರ್ ಕ್ಯಾಂಪೈನರ್ ಆಗಿ ಈ ಹಿಂದೆ ಸಿದ್ದರಾಮಯ್ಯ ರನ್ನು ಬಳಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿತ್ತು. ಕರ್ನಾಟಕದ ಐದು ಗ್ಯಾರಂಟಿಗಳ ಮೋಡೆಲ್ ಗಳನ್ನು ಚುನಾವಣೆಗಳಲ್ಲಿ ಅಸ್ತ್ರವನ್ನಾಗಿ ಬಳಸಿ ಕಾಂಗ್ರೆಸ್ ಗೆ ಲಾಭ ತಂದುಕೊಡುವ ಉದ್ದೇಶದಿಂದ ಸಿದ್ದರಾಮಯ್ಯ ರನ್ನು ಕರೆಸಿಕೊಳ್ಳುವ ಪ್ಲ್ಯಾನ್ ನಡೆದಿತ್ತು. ಆದರೆ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರ ಹೆಸರು ಥಳಕು ಹಾಕಿಕೊಂಡಿರುವ ಕಾರಣ, ಅವರ ಮೇಲೆ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿರುವುದರಿಂದ ಸಿದ್ದರಾಮಯ್ಯ ರನ್ನು ಪ್ರಚಾರಕ್ಕೆ ಬಳಸಿಕೊಂಡರೆ ಬಿಜೆಪಿ ಅದನ್ನು ದೊಡ್ಡ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇರುವುದರಿಂದ ಹೈಕಮಾಂಡ್ ಅಂತರ ಕಾಯ್ದುಕೊಳ್ಳಲು ಆರಂಭಿಸಿದೆ ಅನ್ನುವುದು ಮೂಲಗಳಿಂದ ತಿಳಿದು ಬಂದಿದೆ. ಈವರೆಗೂ ಒಗ್ಗಟ್ಟು ಪ್ರದರ್ಶಿಸಿದ ನಾಯಕರು ದಿನಕಳೆದಂತೆ ಅಂತರ ಕಾಯ್ದುಕೊಳ್ಳಲು ಆರಂಭಿಸಿರುವ ಕಾರಣ ಮುಖ್ಯಮಂತ್ರಿ ಹುದ್ದೆ ಎಷ್ಟು ಸೇಫಾಗಿರಬಹುದು ಅನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ. ರಾಜಕಾರಣ ತಿಳಿದ ಮಂದಿ ಇವತ್ತು ಇದ್ದ ಹಾಗೆ ನಾಳೆ ಇರಲ್ಲ. ಪಕ್ಷಕ್ಕೆ ಡ್ಯಾಮೇಜ್ ಆಗಲು ಆರಂಭಿಸಿದಾಗ ಎಂತಹ ಮಾಸ್ ಲೀಡರ್ ಗಳನ್ನೇ ದೂರ ಇಟ್ಟಂತಹ ಉದಾಹರಣೆ ಇವೆ. ಸಿದ್ದರಾಮಯ್ಯ ಕೂಡ ದಿನಕಳೆದಂತೆ ಒಬ್ಬಂಟಿಯಾಗುತ್ತಾರಾ ಅನ್ನುವ ಅನುಮಾನಗಳು ಕಾಡತೊಡಗಿದೆ.