ಕನ್ನಡ ಇಂಗ್ಲಿಷ್ ನಿಘಂಟನ್ನು ರಚಿಸಿ, ನಿಮ್ಮಂತಹ ಡಾಕ್ಟರೇಟ್‌ಗಳಿಗೆ ಇಂಗ್ಲೀಷ್ ಕಲಿಯಲು ಕಾರಣವಾದವರು ಕಿಟ್ಟೆಲರು ಇವರು ಕ್ರಿಶ್ಚಿಯನ್ ಸಮುದಾಯದವರು.

ಕರಾವಳಿ

ಧರ್ಮದ್ವೇಶಿ, ಮಾನ್ಯ ಡಾ.ಅರುಣ್ ಉಳ್ಳಾಲ್ ರವರಿಗೊಂದು ಬಹಿರಂಗ ಪತ್ರ….

✍️. ಮನೋಜ್ ವಾಮಂಜೂರು

ವಿಧ್ಯೆ ಕಲಿತ ನಂತರ ಸಂತ ಸೆಬೆಸ್ಟಿಯನ್ ಕಾಲೇಜಿನಲ್ಲಿ ದುಡಿದಿದ್ದೀರಿ…. ಸಂತ ಆಗ್ನೆಸ್ ಕಾಲೇಜಿನಲ್ಲೂ ದುಡಿದಿದ್ದೀರಿ ಆಗ ನಿಮಗೆ ಈ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಭೇದಗಳು ಇರಲಿಲ್ಲವೇ ಅಥವಾ ಅದು ಕ್ರಿಶ್ಚಿಯನ್ ಸಂಸ್ಥೆ ಎಂದು ನಿಮಗೆ ತಿಳಿದಿರಲಿಲ್ಲವೇ ಎಂಬ ಇನ್ನೊಂದು ಪ್ರಶ್ನೆಯು ನನ್ನಲ್ಲಿದೆ

ಕಿಟ್ಟೆಲ್ಲರು ಬರೆದ ಕನ್ನಡ ಇಂಗ್ಲಿಷ್ ನಿಘಂಟಿನ ಛಾಯೆ ಇರುವ ಒಂದು ನಿಘಂಟು ಮನೆಯಲ್ಲಿದ್ದರೂ ಕೂಡ ಅದನ್ನು ಪಕ್ಕಕ್ಕೆ ಇಟ್ಟು ಬಿಡಿ ಯಾಕೆಂದರೆ ಆಗಿನ ಕಾಲಕ್ಕೆ ಅಂತರಾಷ್ಟ್ರೀಯ ಮಾಧ್ಯಮವಾಗಿದ್ದ ಇಂಗ್ಲೀಷ್ ಭಾಷೆಯನ್ನು ಈ ನೆಲದ ಜನ ಕಲಿತುಕೊಳ್ಳಲು ಪೂರಕವಾಗುವಂತೆ ಒಂದು ನಿಘಂಟನ್ನು ಒದಗಿಸಿಕೊಟ್ಟು ನಿಮ್ಮಂತಹ ಅದೆಷ್ಟೋ ಡಾಕ್ಟರೇಟ್ ಗಳಿಗೆ ಕಾರಣವಾದವರು ಕಿಟ್ಟೆಲರು ಇವರು ಕ್ರಿಶ್ಚಿಯನ್ ಸಮುದಾಯದವರು. ಆ ನಿಘಂಟು ಬರುವ ಕಾಲಕ್ಕೆ ನೀವು ಹೇಳುವ ಸನಾತನ ಧರ್ಮದ ಜನಿವಾರ ಧಾರಿಗಳು ಇಲ್ಲಿನ ಅತೀ ದೊಡ್ಡ ಸಂಖ್ಯೆಯ ಬಿಲ್ಲವ ಸಮುದಾಯವನ್ನೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ತಳ ಸಮುದಾಯದವರು ದೇವಾಲಯದ ಅಂಗಳಗಳನ್ನು ಬಿಡಿ ಅದಕ್ಕೆ ಅವರ ನೆರಳುಗಳು ಕೂಡ ತಾಕದಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕೆ ಒಂದು ಸಣ್ಣ ನಿದರ್ಶನವನ್ನು ಹೇಳಬಲ್ಲೆ

ಮಂಗಳೂರಿನ ಕದ್ರಿ ದೇವಾಲಯದಲ್ಲಿ ಆಡಳಿತ ಮಂಡಳಿಯ ಎರಡು ಬಣಗಳ ನಡುವೆ ವಾಗ್ವಾದ ಏರ್ಪಟ್ಟು ಪ್ರಕರಣದ ವಿಲೇವಾರಿಗಾಗಿ ಎರಡು ಬಣಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ಬಿಲ್ಲವ ಸಮುದಾಯದ ನ್ಯಾಯಾಧೀಶರೊಬ್ಬರು ಕದ್ರಿ ದೇವಾಲಯದ ಒಳಹೊಕ್ಕು ಪರಾಮರ್ಶಿಸಿ ನ್ಯಾಯ ನೀಡುವುದಾಗಿ ಎರಡು ಬಣಗಳಿಗೆ ತಿಳಿಸುತ್ತಾರೆ. ಈ ಎರಡು ಬಣಗಳು ಅನಿವಾರ್ಯವಾಗಿ ಒಪ್ಪಿಕೊಂಡಾಗ ನ್ಯಾಯಾಧೀಶರು ದೇವಳದ ಒಳಹೊಕ್ಕು ಎಲ್ಲವನ್ನು ಕೂಲಂಕುಶವಾಗಿ ಗಮನಿಸಿ ತೀರ್ಪು ನೀಡುತ್ತಾರೆ. ಅವರು ನ್ಯಾಯಾಧೀಶರಾಗಿದ್ದರು ಕೂಡ ಬಿಲ್ಲವ ಸಮುದಾಯದವರಾಗಿದ್ದು ದೇವಳವನ್ನು ಹೊಕ್ಕರು ಎಂಬ ಒಂದೇ ಒಂದು ಕಾರಣಕ್ಕೆ ದೇವಾಲಯವನ್ನು ಶುದ್ಧೀಕರಣಗೊಳಿಸಲಾಗುತ್ತೆ. ಮುಂದಕ್ಕೆ ಇಂತಹದೇ ಅನೇಕ ತೆರೆನಾದ ಸನಾತನ ಧರ್ಮದ ಅಸಮಾನತೆಗಳಿಂದ ರೋಸಿ ಹೋದ ಜನತೆ ಕುದ್ರೋಳಿಯನ್ನು ಸ್ಥಾಪಿಸಿರುವುದು. ಈ ಎಲ್ಲಾ ಅಸಮಾನತೆಗಳ,ಅಸ್ಪೃಶ್ಯತೆಗಳ ಘೋರ ಮುಖಗಳ ನಡುವೆ ಇಲ್ಲಿನ ತಳ ಸಮುದಾಯವನ್ನು ನೋಡಿಕೊಳ್ಳುವ ರೀತಿ ಬದಲಾದದ್ದು ಶಿಕ್ಷಣದಿಂದ ಆ ಶಿಕ್ಷಣಕ್ಕೂ ಕೂಡ ಅದರದೇ ಆದ ಸೌಹಾರ್ದ ಇತಿಹಾಸವಿದೆ.

ಮಂಗಳೂರಿನಲ್ಲಿ ಮೊದಲು 1838 ರಲ್ಲಿ ಕ್ರಿಶ್ಚಿಯನ್ ಮಿಶನರಿಯೊಂದು ಬಿಇಎಂ ಶಾಲೆಯನ್ನು ಸ್ಥಾಪಿಸಿತು. ನಂತರದಲ್ಲಿ 1880 ರಲ್ಲಿ ಸ್ಥಾಪನೆಯದ ಸಂತ ಅಲೋಶಿಯಸ್ ಕಾಲೇಜು ಸ್ಥಾಪನೆಯಾಯಿತು. ಈ ಮಧ್ಯೆ ಸರ್ವಧರ್ಮೀಯರ ಫಲವಾಗಿ 1866 ರಲ್ಲಿ ಸರ್ಕಾರಿ ವಿವಿ ಕಾಲೇಜ್ ಸ್ಥಾಪನೆಯಾದದ್ದು 1928 ರಲ್ಲಿ ಬದ್ರಿಯಾ ಕಾಲೇಜು ಹೀಗೆ ಅನೇಕ ಕ್ರಿಶ್ಚಿಯನ್ ಮುಸ್ಲಿಂ ಶಾಲಾ, ಕಾಲೇಜುಗಳು ಧಾರ್ಮಿಕತೆಯ ಬೇದವನ್ನು ಬದಿಗಿರಿಸಿ ಶಿಕ್ಷಣವನ್ನು ನೀಡಿವೆ. ನಿಮ್ಮ ಈ ಧರ್ಮ ಸಂಸ್ಕಾರದ ಪಾಠಗಳ ನಡುವೆ ಜನರು ನಿದ್ರಿಸುತ್ತಿರುವಾಗ 2020ರಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾರ್ಪೊರೇಷನ್ ಬ್ಯಾಂಕ್ ಅನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾರವಾಡಿಗಳಿಗೆ ಮಾರಾಟ ಮಾಡಿತ್ತಲ್ಲ ಆ ಬ್ಯಾಂಕಿನ ಇತಿಹಾಸವಾದರೂ ತಿಳಿದಿದೆಯಾ ನಿಮಗೆ ಅದು 1906ರಲ್ಲಿ ಅಬ್ದುಲ್ಲ ಹಾಜಿಯವರು ಸ್ಥಾಪಿಸಿದ ಬ್ಯಾಂಕ್. ಇನ್ನು ದೇಶದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಎಂದು ಎಲ್ಲೆಲ್ಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವಲ್ಲ ಆ ಪತ್ರಿಕೆಯನ್ನು ಆರಂಭಿಸಿರುವುದು ಮೊಗ್ಲಿಂಗ್ ಎಂಬುದನ್ನಾದರೂ ತಿಳಿದುಕೊಂಡಿರುವಿರೇ..

ಹಿಂದಿನ ಸ್ಥಿತಿ ಹಾಗಿರಲಿ ನೀವು ವಿದ್ಯೆ ಕಲಿತದ್ದು ಯಾವ ಶಾಲೆ, ಕಾಲೇಜುಗಳಲ್ಲಿ ಎಂಬ ಪ್ರಶ್ನೆ ನನ್ನಲ್ಲೂ ಇದೆ. ವಿಧ್ಯೆ ಕಲಿತ ನಂತರ ಸಂತ ಸೆಬೆಸ್ಟಿಯನ್ ಕಾಲೇಜಿನಲ್ಲಿ ದುಡಿದಿದ್ದೀರಿ…. ಸಂತ ಆಗ್ನೆಸ್ ಕಾಲೇಜಿನಲ್ಲೂ ದುಡಿದಿದ್ದೀರಿ ಆಗ ನಿಮಗೆ ಈ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಭೇದಗಳು ಇರಲಿಲ್ಲವೇ ಅಥವಾ ಅದು ಕ್ರಿಶ್ಚಿಯನ್ ಸಂಸ್ಥೆ ಎಂದು ನಿಮಗೆ ತಿಳಿದಿರಲಿಲ್ಲವೇ ಎಂಬ ಇನ್ನೊಂದು ಪ್ರಶ್ನೆಯು ನನ್ನಲ್ಲಿದೆ.

ಸದ್ಯಕ್ಕೆ ಮುಂದಿನ ತಲೆಮಾರಿಗೆ ಬೇಕಾಗಿರುವುದು ಧರ್ಮ ಸಂಸ್ಕಾರದ ಪಾಠಗಳಲ್ಲ ಬದುಕನ್ನು ಗೌರವದಿಂದ ಕೊಂಡಯುವ ಉದ್ಯೋಗದ ಪಾಠಗಳು, ಇಂದಿನ ನಿರುದ್ಯೋಗಕ್ಕೆ ಕಾರಣರಾದವರು ಯಾರು ಎಂಬ ಪಾಠಗಳು, ಮಾಡಲಿಕ್ಕೆ ಸಾಧ್ಯವಾಗುವುದಾದರೆ ಇಂತಹ ಪಾಠಗಳನ್ನು ಮಾಡಿ. ನಾರಾಯಣ ಗುರು ಪ್ರಶಸ್ತಿಯನ್ನು ಪಡೆದ ನಿಮಗೆ ನಿಮ್ಮ ಸನಾತನ ಧರ್ಮ ಸಂಸ್ಕಾರ ದಿಂದ ನಾರಾಯಣ ಗುರು ಚಳುವಳಿಯ ಜೊತೆಗಿದ್ದ ಡಾಕ್ಟರ್ ಪಲ್ಪುರವರು ಶಿಕ್ಷಣ ಪಡೆಯಲು ಎಷ್ಟು ಕಷ್ಟಪಟ್ಟಿದ್ದಾರೆ ಎಂಬ ಅರಿವಾದರೂ ಇದೆಯಾ?