ಉಪ್ಪಿನಂಗಡಿ ಸಮೀಪದ ರಾಮನಗದಲ್ಲಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ‘ಯಕ್ಷ ತೆಲಿಕೆ’ ಕಲಾವಿದರ ತಂಡ ನೆಕ್ಕಿಲಾಡಿ ತಲುಪುತ್ತಿದ್ದಂತೆ ಟಯರ್ ಪಂಕ್ಚರ್ ಆಗಿದೆ. ಟಯರ್ ಬದಲಾಯಿಸಲು ಕಾರಿನಲ್ಲಿದ್ದವರು ಒದ್ದಾಡುತ್ತಿದ್ದಾಗ ಅದೇ ರಸ್ತೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಠಾಣೆಯ ಸಿಬ್ಬಂದಿಗಳಾದ ಮೋಹನ್ ಮತ್ತು ಗಜೇಂದ್ರ ಅವರು ತಮ್ಮ ವಾಹನದಲ್ಲಿ ಬಂದು ವಿಚಾರಿಸಿದ್ದಾರೆ.
ಕಾರಿನ ಪ್ರಯಾಣಿಕರು ಟಯರ್ ಬದಲಾಯಿಸಲು ಕಷ್ಟಪಡುವುದನ್ನು ಗಮನಿಸಿದ ಸಮವಸ್ತ್ರಧಾರಿ ಸಿಬ್ಬಂದಿಗಳು ತಾವೇ ಮುಂದೆ ಬಂದು ಜಾಕ್ ಮೂಲಕ ಟಯರ್ ಬದಲಾಯಿಸಿ ಕೊಟ್ಟು ಹೃದಯವಂತಿಕೆ ಮೆರೆದಿದ್ದಾರೆ.
ತಮ್ಮ ಕರ್ತವ್ಯದ ನಡುವೆಯೂ ರಸ್ತೆಯಲ್ಲಿ ಪಂಕ್ಚರಾಗಿ ಬಾಕಿಯಾಗಿದ್ದ ವಾಹನದ ಚಕ್ರವನ್ನು ಬದಲಾಯಿಸಿ ಕೊಟ್ಟು ಮಾನವಿಯತೆ ಮೆರೆದ ಸಿಬ್ಬಂದಿಗಳ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಚಲನಚಿತ್ರ, ನಾಟಕಗಳಲ್ಲಿ ಪೊಲೀಸರನ್ನು ಅವಮಾನ ಮಾಡುತ್ತಾ ತೀಟೆ ತೀರಿಸುವ ಕೆಲವೊಂದು ವಿಶಿಷ್ಟ ಮಾನಸಿಕ ರೋಗಿಗಳು ತುಂಬಿರುವ ಇಂದಿನ ಕಾಲದಲ್ಲಿ ಇಂತಹ ಹೃದಯವಂತ ಪೊಲೀಸರ ಮಾನವೀಯ ಕಾರ್ಯವನ್ನೂ ಶ್ಲಾಘಿಸುವುದು ಪ್ರಜ್ಞಾವಂತರ ಜವಾಬ್ದಾರಿಯಲ್ಲವೇ.?
