ಬೆಂಗಳೂರಿನ ಮಾದನಾಯಕನ ಹಳ್ಳಿಯ ಅಪಾರ್ಟ್ಮೆಂಟಲ್ಲಿ ನೇಣಿಗೆ ಶರಣು.
ಚಿತ್ರ ನಿರ್ದೇಶಕ, ಮಠ ಸಿನಿಮಾ ಖ್ಯಾತಿಯ ಗುರುಪ್ರಸಾದ್ ಫ್ಯಾನಿಗೆ ನೇಣು ಬಿಗಿದು ಮಾದನಾಯಕನ ಹಳ್ಳಿಯ ಅಪಾರ್ಟ್ ಮೆಂಟಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬಿಗಿದು ಕೊಂಡು ತೀರಾ ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ, ರಂಗನಾಯಕ ಸಿನಿಮಾ ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಗುರುಪ್ರಸಾದ್ ನಿರ್ದೇಶನ ಮಾಡಿ ಪ್ರಖ್ಯಾತಿಗಳಿಸಿದ್ದರು. ಹಲವು
ರಿಯಾಲಿಟಿ ಶೋಗಳಲ್ಲೂ ಜಡ್ಜ್ ಆಗಿ ಪ್ರಸಿದ್ಧರಾಗಿದ್ದ ಗುರುಪ್ರಸಾದ್ ಸಾವು ಚಿತ್ರರಂಗದ ಆತಂಕಕ್ಕೆ ಕಾರಣವಾಗಿದೆ. ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣವೆಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮಾದನಾಯಕನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದು ತನಿಖೆ ಕೈಗೊಂಡಿದ್ದಾರೆ.
