ಉತ್ತರದ ಧ್ರುವ ಕುಮಾರ ಇನಾಯತ್ ಅಲಿ ಖದರ್ರು .!

ಕರಾವಳಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಗಳೂರು ಉತ್ತರದ 15 ಮಂದಿಗೆ 14.17ಲಕ್ಷ ರೂ. ವಿತರಣೆ

ವಿವಿಧ ರೋಗಗಳಿಂದ ಬಳಲುತ್ತಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 15 ಮಂದಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು 14,17,049 ರೂ ಸಹಾಯಧನ ದೊರೆತಿದೆ.

ರಿಝನ್ ಕೋಯ (ರೂ.5,00,000), ಯಶವಂತ್ ಕಾಟಿಪಳ್ಳ (ರೂ.2,00,000), ಮಹಮ್ಮದ್ ಕುಂಞಿ (ರೂ.1,75,000), ರಮ್ಲತ್ ಬಾನು ವಾಮಂಜೂರು (ರೂ.1,50,000), ಅಪ್ಸ ಅದ್ಯಪಾಡಿ (ರೂ‌.94,600), ಆಸಿಯಾತ್ ಫರ್ಹಾನ (ರೂ.67,449), ಝೀನತ್ ಕೃಷ್ಣಾಪುರ (ರೂ.52,000), ಗಿರಿಯಪ್ಪ ಪಡುಪೆರಾರ (ರೂ.40,000), ಅಝ್ವೀನಾ (ರೂ.40,000), ಅಬ್ದುಲ್ ರಶೀದ್ ಮರಕಡ (ರೂ.35,000), ಸೆಫಿಯ ಅರ್ಕುಳ (ರೂ.24,000), ಕೆ. ಹುಸೇನ್ ತಿರುವೈಲ್ (ರೂ‌.12,000), ಸಾಹಿರಾ ಬಾನು (ರೂ.12,000), ಅಬ್ದುಲ್ ಹಮೀದ್ ಮರಕಡ (ರೂ.10,000), ಸೈಫುಲ್ಲ ಗುರುಪುರ (ರೂ.5,000) ಇವರಿಗೆ ಚಿಕಿತ್ಸೆಗೆ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಗೊಂಡ ಸಹಾಯ ಧನ ನೇರವಾಗಿ ಅರ್ಜಿದಾರರ ಖಾತೆಗೆ ಪಾವತಿಯಾಗಿದೆ.

ಒಂದು ಕಡೆ ಇಲ್ಲಿನ ಶಾಸಕರು ಬೆಂಕಿಯುಗುಳುವ ಕೆಲಸ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿದ್ದರೆ, ಇನ್ನೊಂದು ಕಡೆ ಜನರ ನಾಡಿಮಿಡಿತ ಅರಿತಿರುವ ಇನಾಯತ್ ಆಲಿ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಅಶಕ್ತರು, ರೋಗಿಗಳ ಪಾಲಿಗೆ ಆಪದ್ಭಾಂಧವರಾಗಿದ್ದಾರೆ. ಉತ್ತರದ ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡು ಉತ್ತರದ ಧ್ರುವ ಕುಮಾರರಾಗಿದ್ದಾರೆ.