BIG EXCLUSIVE’ ಫೆಬ್ರವರಿ 25 ಕ್ಕೆ ವಿಚಾರ ಗೊತ್ತಾಗುತ್ತೆ’.. ವಾಟ್ಸಾಪ್ ಸಂದೇಶ ರವಾನಿಸಿದ್ದ ದಿಗಂತ್..ಅವತ್ತೆ ನಿಗೂಢ ನಾಪತ್ತೆ..!

ಕರಾವಳಿ

ಲಿಂಗ ಪರಿವರ್ತನೆ ಜಾಲಕ್ಕೆ ಸಿಲುಕಿದನಾ ದಿಗಂತ್..? ಬಗೆದಷ್ಟು ಬಿಚ್ಚಿಡುತ್ತಿದೆ ನಿಗೂಢ ನಾಪತ್ತೆ ಪ್ರಕರಣ

ಕರಾವಳಿಯಲ್ಲಿ ಪಿಯುಸಿ ವಿದ್ಯಾರ್ಥಿ ದಿಗಂತ್ ದಿಢೀರ್ ನಾಪತ್ತೆ ಪ್ರಕರಣ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ. ವಿಧಾನಸಭಾ ಅಧಿವೇಶನದಲ್ಲೂ ದಿಗಂತ್ ನಾಪತ್ತೆ ಪ್ರಕರಣ ಚರ್ಚೆಗೆ ಬಂದಿದೆ. ಇಂದಿಗೆ ವಾರ ಕಳೆದರೂ ದಿಗಂತ್ ಎಲ್ಲಿದ್ದಾನೆ ಅನ್ನುವ ಸಣ್ಣ ಕ್ಲೂ ಯಾರಿಗೂ ಸಿಕ್ಕಿಲ್ಲ. ಪೊಲೀಸ್ ಇಲಾಖೆ ಏಳು ತಂಡ ರಚನೆ ಮಾಡಿ ತನಿಖೆಗೆ ಇಳಿದಿದೆ. ಆದರೂ ದಿಗಂತ್ ಪತ್ತೆಯೇ ಇಲ್ಲ. ಅಷ್ಟಕ್ಕೂ ದಿಗಂತ್ ನಾಪತ್ತೆ ಹಿಂದೆ ರೋಚಕ ಸಂಗತಿ ಏನಾದರೂ ಇದೆಯಾ..? ಗಾಂಜಾ, ಡ್ರಗ್ಸ್ ಮಾಫಿಯಾ ಕಿಡ್ನ್ಯಾಪ್ ಮಾಡಿದೆಯಾ..? ಎಲ್ಲದಕ್ಕೂ ಉತ್ತರ ಪೊಲೀಸ್ ಇಲಾಖೆಯ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

ಫರಂಗಿಪೇಟೆ ಅಮ್ಮೆಮ್ಮಾರ್ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ನಗರದ ಕಪಿತಾನಿಯೋ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಫೆಬ್ರವರಿ 25 ರಂದು ಕಾಲೇಜಿಗೆ ತೆರಳಿ ಪರೀಕ್ಷಾ ಹಾಲ್ ಟಿಕೆಟ್ ಪಡೆದು ಮನೆಗೆ ಬಂದು ಸಂಜೆ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟವ ಮನೆಗೆ ಬರಲೇ ಇಲ್ಲ. ದಿಗಂತ್ ನಾಪತ್ತೆ ಸುದ್ದಿ ಫರಂಗಿಪೇಟೆಯಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ದಿಗಂತ್ ರ ಬಿಳಿ ಬಣ್ಣದ ಚಪ್ಪಲಿ ರಕ್ತದ ಕಲೆ ಮೆತ್ತಿಕೊಂಡು ರೈಲ್ವೇ ಟ್ರ್ಯಾಕ್ ಬಳಿ ಸಿಕ್ಕಿದ್ದು, ದಿಗಂತ್ ಹೊರಟಿದ್ದ ಸಂದರ್ಭ ಕ್ವಾಲಿಸ್ ಕಾರೊಂದು ಸಂಚರಿಸಿದ ಕುರುಹು ದೊರೆತ್ತಿದ್ದು, ಇದು ಪಕ್ಕಾ ಕಿಡ್ನ್ಯಾಪ್ ಪ್ರಕರಣ, ಇದರ ಹಿಂದೆ ಗಾಂಜಾ, ಡ್ರಗ್ಸ್ ಮಾಫಿಯಾದ ಕೈವಾಡವಿದೆ ಅನ್ನುವ ಸುದ್ದಿ ಏರಿಯದಾದ್ಯಂತ ಹರಡಿತ್ತು. ಫರಂಗಿಪೇಟೆ ಸೂಕ್ಷ್ಮ ಪ್ರದೇಶ. ಮುಸ್ಲಿಂ ಬಾಹುಳ್ಯ ಇರುವ ಪ್ರದೇಶ. ದಿಗಂತ್ ಕಿಡ್ನ್ಯಾಪ್ ಹಿಂದೆ ಅನ್ಯಮತೀಯರ ಕೈವಾಡ ಇರುವುದಾಗಿ ಹಿಂದೂ ಸಂಘಟನೆಗಳು ಎಂಟ್ರಿಯಾಗಿ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಬಿಜೆಪಿಯ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮುಸ್ಲಿಂ ಬಾಂಧವರು ಕೂಡ ವ್ಯಾಪಾರ ವಹಿವಾಟು ಬಂದ್ ನಡೆಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದರು.

ಆದರೆ ಇದೀಗ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ದಿಗಂತ್ ಕಿಡ್ನ್ಯಾಪ್ ಆಗಿಲ್ಲ, ಆತ ಸ್ವಯಂ ಪ್ರೇರಣೆಯಿಂದ ನಾಪತ್ತೆಯಾಗಿದ್ದಾನೆ ಅನ್ನುವ ಮಾಹಿತಿ ಹೊರಬರುತ್ತಿದೆ. ಆತ ‘ಫೆಬ್ರವರಿ 25 ರ ನಂತರ ಗೊತ್ತಾಗುತ್ತೆ’ ಅನ್ನುವ ವಾಟ್ಸಾಪ್ ಸಂದೇಶ ರವಾನಿಸಿರುವುದು, ಇದರ ಹಿಂದೆ ಕಿಡ್ನ್ಯಾಪ್ ಗ್ಯಾಂಗ್ ಕೈವಾಡ ಇಲ್ಲ ಅನ್ನುವ ಅಂಶ ದೃಢಪಟ್ಟಿದೆ. ಹಾಗಾದರೆ ದಿಗಂತ್ ನಾಪತ್ತೆ ಹಿಂದಿನ ರಹಸ್ಯವಾದರೂ ಏನು.?

ಸ್ಥಳೀಯರು ಹಾಗೂ ಆತನ ಆತ್ಮೀಯರ ಪ್ರಕಾರ ದಿಗಂತ್ ಹೆಚ್ಚಿನ ಜನರೊಂದಿಗೆ ಬೆರೆಯುತ್ತಿರಲಿಲ್ಲವಂತೆ. ಆತನೂ ಲವ್ವೊಂದರಲ್ಲಿ ಬಿದ್ದಿದ್ದ ಅನ್ನುವವರಿದ್ದಾರೆ. ಆದರೆ ಅದು ಏಕಮುಖವಾದ ಲವ್ ಆಗಿತ್ತು ಅನ್ನುವ ಸುದ್ದಿ. ಪಂಜಾಬ್ ಮೂಲದ ವಿದ್ಯಾರ್ಥಿನಿಗೆ ‘ಫೆಬ್ರವರಿ 25 ರ ನಂತರ ವಿಚಾರ ಗೊತ್ತಾಗುತ್ತೆ’ ಅನ್ನುವ ಸಂದೇಶ ರವಾನಿಸಿದ್ದಾನಂತೆ. ಪೊಲೀಸರು ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯನ್ನು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಇನ್ನೊಂದು ಮೂಲದ ಪ್ರಕಾರ ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋಗಿರಬಹುದೇ ಅನ್ನುವ ಸಂಶಯ ಮೂಡುತ್ತದೆ. ಆದರೆ ಅದು ಆಗಿದ್ದರೆ ಈಗ ಪ್ರಕರಣ ವ್ಯಾಪಕವಾಗಿ ಸುದ್ಧಿಯಾಗಿರುವುದರಿಂದ ಕುಟುಂಬಸ್ಥರನ್ನು ಆತ ಸಂಪರ್ಕಿಸುತ್ತಿದ್ದ. ಈ ಮ್ಯಾಟರ್ ಆಗಿರಲು ಸಾಧ್ಯವಿಲ್ಲ ಅನ್ನಲಾಗುತ್ತಿದೆ.

ಆದರೆ ಇದೀಗ ದಿಗಂತ್ ನಾಪತ್ತೆ ಹಿಂದೆ ಭಯಾನಕ ಸತ್ಯವೊಂದು ಕೇಳಿ ಬರುತ್ತಿದ್ದು, ಈತ ಲಿಂಗ ಪರಿವರ್ತನೆ ಜಾಲಕ್ಕೆ ಸಿಲುಕಿ ಪರಾರಿಯಾಗಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗಿದೆ. ದಿಗಂತ್ ಹೆಚ್ಚಾಗಿ ಸ್ನೇಹಿತರೊಂದಿಗೆ ಬೆರೆಯುತ್ತಾ ಇಲ್ಲದಿದ್ದುದು, ಇಂತಹ ಮನಸ್ಥಿತಿಯವರೇ ಇಂತಹ ಜಾಲಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಕಳೆದ ವರ್ಷ ಬಿಸಿರೋಡಿನ ಯುವಕನೊಬ್ಬ ನಾಪತ್ತೆಯಾಗಿ ಕೆಲವು ದಿನಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿದ್ದ. ಆಗ ಆತ ಲಿಂಗ ಪರಿವರ್ತನೆ ಮಾಡಿ ಹೆಣ್ಣಾಗಿ ಬದಲಾಗಿದ್ದ. ‘ಜಲ್ಸಾ’ ಆಗಲು ಹೋಗಿದ್ದ. ಅದು ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಯುವಕನ ತಂದೆಯ ಊರು ಅಮ್ಮೆಮ್ಮಾರ್ ಆಗಿತ್ತು. ಇದೀಗ ನಾಪತ್ತೆಯಾಗಿರುವ ದಿಗಂತ್ ನ ಊರಾಗಿತ್ತು. ದಿಗಂತ್ ಕೂಡ ಈ ಜಾಲಕ್ಕೆ ಸಿಲುಕಿರಬಹುದಾ.? ಅನ್ನುವ ಬಲವಾದ ಸಂಶಯ ಇದೀಗ ಕೇಳಿ ಬರುತ್ತಿದೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಿ ಇಂತಹ ಜಾಲವನ್ನು ಭೇದಿಸುವ ಅಗತ್ಯವಿದೆ. ದಿಗಂತ್ ನಾಪತ್ತೆ ಹಿಂದಿನ ಹಕೀಕತ್ತು ಬಯಲು ಮಾಡಬೇಕಿದೆ.