2020 ರಲ್ಲಿ ನಡೆದಿದ್ದ ಬಜ್ಪೆ ಕೀರ್ತಿ ಎಂಬ 20 ವರ್ಷದ ಹಿಂದೂ ಯುವಕನ ಹತ್ಯೆಯಲ್ಲೂ ಜೈಲುಪಾಲಾಗಿದ್ದ
ಮಂಗಳೂರಿನಲ್ಲಿ ಮತ್ತೊಂದು ಹೆಣ ಬಿದ್ದಿದೆ. ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಘಪರಿವಾರದ ಸಂಘಟನೆಗಳು ಇಂದು ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಜಿಲ್ಲಾ ಬಂದ್ ಗೆ ಕರೆಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸರು ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಹತ್ಯೆಯಾದ ಯುವಕ ಬಂಟ್ವಾಳ ಕಾರಿಂಜೆ ನಿವಾಸಿ ಸುಹಾಸ್ ಶೆಟ್ಟಿ. ಈತ 2022 ರಲ್ಲಿ ಜರುಗಿದ್ದ ಸುರತ್ಕಲ್ ಫಾಝಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ. ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ಪೇಟೆಯಲ್ಲಿದ್ದ ಫಾಝಿಲ್ ಎಂಬಾತನನ್ನು ಸುಹಾಸ್ ಶೆಟ್ಟಿ ಗ್ಯಾಂಗ್ ತಲವಾರು ದಾಳಿ ನಡೆಸಿ ಹತ್ಯೆ ಮಾಡಿತ್ತು. ಜನನಿಬಿಡ ಪ್ರದೇಶದಲ್ಲಿ ರಾತ್ರಿ ಒಂಭತ್ತು ಗಂಟೆಯ ಹೊತ್ತಿಗೆ ಫಾಝಿಲ್ ನನ್ನು ಸುಹಾಸ್ ತಂಡ ಕೊಲೆಗೈದರೆ, ಇದೀಗ ಪಾಝಿಲ್ ಹತ್ಯೆಯ ಪ್ರಮುಖ ಆರೋಪಿ ಸುಹಾಸ್ ನನ್ನು ರಾತ್ರಿ ಒಂಭತ್ತರ ವೇಳೆ ಬಜಪೆಯ ಕಿನ್ನಿಪದವು ಜಂಕ್ಷನ್ ಬಳಿ ಜನನಿಬಿಡ ಪ್ರದೇಶದಲ್ಲಿ ಕೊಂದು ಪರಾರಿಯಾಗಿದೆ. ಮೇಲ್ನೋಟಕ್ಕೆ ಈ ಹತ್ಯೆ ಫಾಝಿಲ್ ಹತ್ಯೆಗೆ ಪ್ರತೀಕಾರ ಎಂಬಂತೆ ಕಂಡುಬರುತ್ತಿದೆ.

ಈ ನಡುವೆ ಕೊಲೆಯಾದ ಸುಹಾಸ್ ಶೆಟ್ಟಿ ಹಿಂದೂ ಕಾರ್ಯಕರ್ತ ಎಂಬುದಾಗಿ ಮಾಧ್ಯಮಗಳಲ್ಲಿ ಸುದ್ಧಿಯಾಗುತ್ತಿದೆ. ಪೊಲೀಸ್ ಕಮಿಷನರ್ ಸುಹಾಸ್ ಶೆಟ್ಟಿ ಎರಡು ಕೊಲೆ ಕೃತ್ಯ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತನು ರೌಡಿ ಶೀಟರ್ ಎಂದು ತಿಳಿಸಿದ್ದಾರೆ. ಈ ನಡುವೆ ಸುಹಾಸ್ ಶೆಟ್ಟಿ ಇಪ್ಪತ್ತರ ಹರೆಯದ ಹಿಂದೂ ಯುವಕನ ಕೊಲೆಯಲ್ಲಿ ಭಾಗಿಯಾಗಿದ್ದ ಎಂಬ ಸಂಗತಿ ಹೊರಬರುತ್ತಿದೆ. 2020 ಮೇ 31 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ದೇವರ ಗುಡ್ಡೆ ಎಂಬಲ್ಲಿ ಎರಡು ಗುಂಪುಗಳ ನಡುವೆ ನಡೆದಿದ್ದ ಹೊಡೆದಾಟದಲ್ಲಿ ಸುಹಾಸ್ ಶೆಟ್ಟಿ ಆತನ ಸ್ನೇಹಿತ ಗುಂಪು ಇಪ್ಪತ್ತರ ಪ್ರಾಯದ ಕೀರ್ತಿ ಎಂಬಾತನ ಮೇಲೆ ಮರದ ದೊಣ್ಣೆ, ಕಬ್ಬಿಣದ ಸರಳು, ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಓರ್ವ ಹಿಂದೂ ಯುವಕನನ್ನೇ ಕೊಂದು ಜೈಲು ಸೇರಿದ್ದ ಸುಹಾಸ್ ಶೆಟ್ಟಿ.
