ಜುಲೈ 16 ರಂದು ನರ್ಸ್ ನಿಮಿಷಾ ಪ್ರಿಯ ಗಲ್ಲುಗೇರಿಸುವ ಕುರಿತು ಮಾಹಿತಿ; ನರ್ಸ್ ನಿಮಿಷಾ ಪ್ರಿಯ ಯೆಮೆನ್‌ ಪ್ರಜೆಯನ್ನು ಕೊಲೆ ಮಾಡಿರುವ ಆರೋಪ

ಅಂತಾರಾಷ್ಟ್ರೀಯ

ನರ್ಸ್‌ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ ಫಿಕ್ಸ್‌ ಆಗಿದೆ. ಜುಲೈ 16 ರಂದು ನಿಮಿಷಾ ಪ್ರಿಯ ಗಲ್ಲುಗೇರಿಸುವ ಕುರಿತು ಜೈಲು ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ. ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರು 2017ರಲ್ಲಿ ಯೆಮೆನ್‌ನಲ್ಲಿ ಯೆಮೆನ್ ಪ್ರಜೆಯಾದ ತಲಾಲ್ ಅಬ್ದು ಮೆಹ್ದಿ ಅವರನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ನಿಮಿಷಾ ಮೆಹ್ದಿ ಸಹಕಾರದೊಂದಿಗೆ ಓಮನ್‌ನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಆದರೆ ಮೆಹ್ದಿ ತನ್ನ ಪಾಸ್‌ಪೋರ್ಟ್ ವಶಕ್ಕೆ ತೆಗೆದುಕೊಂಡು ಹಣಕಾಸಿನ ಕಿರುಕುಳ ನೀಡುತ್ತಿದ್ದರು. ಪಾಸ್‌ಪೋರ್ಟ್‌ ವಾಪಾಸ್‌ ಪಡೆಯುವ ಹಿನ್ನೆಲೆಯಲ್ಲಿ ಮೆಹ್ದಿಗೆ ನಿದ್ರೆ ಮಾತ್ರೆ ನೀಡಿದ್ದರು. ಆದರೆ ನಿಮಿಷ ಪ್ರಿಯ ನೀಡಿದ್ದ ಮಾತ್ರೆಯ ಪ್ರಮಾಣ ಹೆಚ್ಚಾಗಿದ್ದರಿಂದಾಗಿ ಮೆಹ್ದಿ ಸಾವನ್ನಪ್ಪಿದ್ದರು. ನಂತರ ದೇಹವನ್ನು ವಿಲೇವಾತಿ ಮಾಡಲು ಪ್ರಯತ್ನಿಸುವ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನರ್ಸ್ ನಿಮಿಷಾ ಪ್ರಿಯಾ ಅವರ ಶಿಕ್ಷೆಯನ್ನು ಈ ತಿಂಗಳ 16 ರಂದು ನಡೆಸಲಾಗುವುದು ಎಂದು ವರದಿಯಾಗಿದೆ. ಜೈಲು ಅಧಿಕಾರಿಗಳಿಗೆ ಈ ಸಂಬಂಧ ಆದೇಶ ದೊರೆತಿದೆ ಎನ್ನಲಾಗಿದೆ. ಯೆಮೆನ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯಿಂದ ಈ ಆದೇಶ ಬಂದಿದೆ.ಯೆಮೆನ್ ಪ್ರಜೆಯನ್ನು ಕೊಂದ ಪ್ರಕರಣದಲ್ಲಿ ಮಲಯಾಳಿ ಮೂಲದ ನಿಮಿಷಾ ಪ್ರಿಯಾ ಜೈಲಿನಲ್ಲಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಈ ವಿಷಯವನ್ನು ದೃಢಪಡಿಸಿದೆ ಎಂದು ಯೆಮೆನ್‌ನಲ್ಲಿ ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸುತ್ತಿರುವ ಸ್ಯಾಮ್ಯುಯೆಲ್ ಜಾನ್ ತಿಳಿಸಿದ್ದಾರೆ.ಮರಣದಂಡನೆಯನ್ನು ರದ್ದುಗೊಳಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಜೈಲಿಗೆ ಆದೇಶ ಬಂದಿದೆ ಎನ್ನಲಾಗಿದೆ.