ಮಂಗಳೂರು: ಸೂರಲ್ಪಾಡಿ ಮಲ್ಹರುಲ್ ಅವಾಕಿಫ್ ಜುಮಾ ಮಸ್ಜಿದ್ ಸುರಲ್ಪಾಡಿ ಇದರ ಮಾಜಿ ಅಧ್ಯಕ್ಷರು, ಮಸೀದಿಯ ದೀರ್ಘ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ ಕೆ. ಶೇಖ್ ಅಬ್ಬಾಸ್ ಇಂದು ನಿಧನರಾಗಿದ್ದಾರೆ. ಸ್ಥಳೀಯವಾಗಿ ಬಾವಾಕ ಎಂದೇ ಚಿರಪರಿಚಿತರಾಗಿದ್ದರು.
ಸೂರಲ್ಪಾಡಿ ಮಸೀದಿ ಅಭಿವೃದ್ಧಿ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇಖ್ ಅಬ್ಬಾಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಚಿರ ಯುವಕರಂತೆ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು.
ಅವರಿಗೆ ಆರು ಗಂಡು, ಒಂದು ಹೆಣ್ಣು ಮಕ್ಕಳಲ್ಲಿ ಖ್ಯಾತ ಮೂಳೆ ತಜ್ಞ ಡಾ| ಇಂತಿಕಾಬ್ ಆಲಂ, ಸಿವಿಲ್ ಇಂಜಿನಿಯರ್ ರಿಯಾಝ್ ಆಲಂ ಇವರ ಪುತ್ರರಾಗಿದ್ದಾರೆ. ಶೇಖ್ ಅಬ್ಬಾಸ್ ರವರ ನಿಧನ ಸಮುದಾಯಕ್ಕೆ ತುಂಬಲಾರದ ನಷ್ವವಾಗಿದೆ. ಶ್ರೀಯುತರ ನಿಧನಕ್ಕೆ ಮಲ್ಹರುಲ್ ಅವಾಕೀಪ್ ಜುಮಾ ಮಸೀದಿಯ ಅಧ್ಯಕ್ಷರು ಹಾಗೂ ಆಡಳಿತ ಕಮಿಟಿ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
