ಬೆಂಗಳೂರಿನೊಳಗೆ ಪರ್ಯಾಯ ವ್ಯವಸ್ಥೆ ಸಾಧ್ಯವಿಲ್ಲವೇ.?

ರಾಜ್ಯ

ರಾಜಧಾನಿ ಬೆಂಗಳೂರಿನ ರಸ್ತೆಗಳು ಮತ್ತು ವಾಹನ ಸಂಚಾರದಟ್ಟನೆ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದು, ಈ ಸಮಸ್ಯೆಗಳೆಲ್ಲ ಬಗೆಹರಿಯಬೇಕೆಂದರೆ ನಗರದೊಳಗೆ ನಡುವಿನಲ್ಲಿ ಸರ್ಕಾರಿ ಆಡಳಿತ ಇಲಾಖೆಗಳು ಸೇರಿದಂತೆ ಆರೋಗ್ಯ, ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ನಂತಹ ಮಹತ್ವಪೂರ್ಣ ಕ್ಷೇತ್ರಗಳಿಗೆ ಮಾತ್ರ ಅವಕಾಶ ನೀಡುವುದರ ಮೂಲಕ ಬೆಂಗಳೂರಿನ ಕೇವಲ ಎರಡು ಮೂರು ಕಡೆ ಗಡಿಯಲ್ಲಿರುವ infosys, itpl & wipro ಮಾತ್ರವಲ್ಲದೆ ನಗರದೊಳಗಿನ ಎಲ್ಲಾ ಐಟಿ, ಬಿಟಿ ಟೆಕ್ ಪಾರ್ಕ್ ಸೇರಿದಂತೆ ಎಂಎನ್‌ಸಿ ಕಂಪನಿಗಳು, ಇತರೆ ಕೈಗಾರಿಕೆಗಳನ್ನು ಬೆಂಗಳೂರಿನ ಅಷ್ಟದಿಕ್ಕುಗಳ ಗಡಿ ಭಾಗಗಳಿಗೆ ಅಥವಾ ಇತರ ನಗರಗಳಿಗೆ ಸ್ಥಳಾಂತರಿಸುವುದು, ಸಾಧ್ಯವಾದರೆ ಕೆಲವನ್ನು ಸ್ಥಗಿತಗೊಳಿಸುವುದರಿಂದ ಹೆಚ್ಚಿನ ಕಂಪನಿಗಳ ಉದ್ಯೋಗಿಗಳು ತನ್ನಿಂತಾನೇ ಗಡಿ ಭಾಗಗಳಲ್ಲಿ ವಾಸ ಮಾಡಲು ಹೊಂದಿಕೊಳ್ಳಬಹುದು. ಅದೇ ರೀತಿ ಮೊದಲು ಪ್ರಾಯೋಗಿಕವಾಗಿ.

ಬೆಂಗಳೂರಿನಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದರೆ ಒಳ್ಳೆಯದು.ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಆಗುತ್ತಿರುವ ಜನಸಂಖ್ಯೆಯ ಹೆಚ್ಚಳವನ್ನು ನೋಡಿದರೆ ಮೊದಲು ಎಲ್ಲಾ ಕಂಪನಿಗಳನ್ನು ನಗರದ ಗಡಿಭಾಗಗಳಿಗೆ ಸ್ಥಳಾಂತರಿಸುವುದರ ಜತೆಗೆ ಮುಂದಿನ ಭವಿಷ್ಯದ ದೃಷ್ಟಿಯಿಂದ ವಸತಿ ಸೇರಿದಂತೆ ವಾಣಿಜ್ಯ ಸಂಕೀರ್ಣಗಳಿರುವಂಥ ಕಿರಿದಾದ ಮತ್ತು ಪ್ರಸಕ್ತ ಹಿರಿದಾಗಿರುವ ರಸ್ತೆಗಳನ್ನೂ ಸಹ 20 ರಿಂದ 30 ಅಡಿಗಳಷ್ಟು ಮತ್ತಷ್ಟು ಅಗಲಗೊಳಿಸುವುದು ಸೂಕ್ತ ಎಂದು ಹೇಳಬಹುದು. ಆ ಮೂಲಕ ಬೆಂಗಳೂರಿನೊಳಗೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿ ಸಂಚರಿಸುವವರಿಗೆ ನೆಮ್ಮದಿ ಸಿಗಬಹುದು.

ಇಲ್ಲದಿದ್ದರೆ ಬೆಂಗಳೂರಿನಲ್ಲಿ ಹಗಲು ರಾತ್ರಿ ಎನ್ನದೆ ನೀರಿನಂತೆ ಹರಿಯುವ ವಾಹನ ಸಂಚಾರದ ಕಾರಣ ಹದಗೆಡುತ್ತಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ಸರಿಯಾದ ಸಮಯಾವಕಾಶ ಸಿಗದಿರುವುದು, ಒಂದುವೇಳೆ ದುರಸ್ತಿಗೊಂಡರೂ ಸಹ ಎಂದಿನಂತೆ ವಾಹನ ಸಂಚಾರ ಕಾರಣ ಆ ರಸ್ತೆಗಳು ಸರಿಯಾಗಿ ಪುನಶ್ಚೇತನಗೊಳ್ಳದೆ ಒಂದೇ ವಾರದಲ್ಲಿ ಪುನಃ ಬಿರುಕು ಬಿಡುವುದು, ವಾಹನ ಸಂಚಾರದಟ್ಟನೆಯಂಥ ಎಲ್ಲಾ ಕಾರಣಗಳಿಂದಾಗಿ ನಗರದೊಳಗೆ ತಮ್ಮ ದೈನಂದಿನ ಕೆಲಸಕ್ಕಾಗಿ ಸಂಚರಿಸುವ ಇತರೆ ಉದ್ಯೋಗಿಗಳು, ಉದ್ಯಮಿಗಳು ಮಾತ್ರವಲ್ಲವೇ ಆರೋಗ್ಯ, ಶೈಕ್ಷಣಿಕ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿ ಸಂಚರಿಸುವವರಿಗೂ ಸಹ ತೊಂದರೆಯಾಗುವ ಮೂಲಕ ಒಟ್ಟಾರೆಯಾಗಿ ಯಾರಿಗೂ ಸಹ ಬೆಂಗಳೂರಿನ ರಸ್ತೆಗಳಲ್ಲಿ ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗುವುದಿಲ್ಲ ಎಂದನಿಸುತ್ತದೆ.

✍️. ಹನೀಫ್ ಕೆ.ಎ