ರಾಜ್ಯವೇ ಬೆಚ್ಚಿ ಬೀಳಿಸುವ ಹೀನಾತಿ ಕೃತ್ಯ. ಅಪ್ರಾಪ್ತೆಯೊಂದಿಗಿನ ಲೈಂಗಿಕ ಸುಖಕ್ಕೆ ಇಪ್ಪತ್ತು ಲಕ್ಷಕ್ಕೆ ಡಿಮ್ಯಾಂಡ್. ಇಡೀ ಪ್ರಕರಣವನ್ನು ಬೇಧಿಸುವಲ್ಲಿ ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು ಗುಪ್ತ ಕಾರ್ಯಾಚರಣೆ ನಡೆಸಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಂತ ಪಿಂಪ್ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮಹಿಳೆ ಮತ್ತು ಪುರುಷರೊಬ್ಬರನ್ನು ಘಟನೆ ಸಂಬಂಧ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಮೂಲದ ಶೋಭಾ, ತುಳಸಿಕುಮಾರ್ ಎಂಬವರನ್ನು ಬಂಧಿಸಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಈ ಕೃತ್ಯವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಗ್ಯಾಂಗ್ ಇದಾಗಿದೆ. ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಇವರ ಟಾರ್ಗೆಟ್ ಆಗಿದ್ದಾರೆ. ವಾಟ್ಸ್ ಆಪ್ ನಲ್ಲಿ ಬಾಲಕಿಯರ ವೀಡಿಯೋ ತೋರಿಸಿ ಈ ಗ್ಯಾಂಗ್ ನ ಸದಸ್ಯರು ದುಡ್ಡಿನ ಆಫರ್ ಮಾಡುತ್ತಿದ್ದು, 12-13 ವರ್ಷದ ಬಾಲಕಿಯರನ್ನು ತೋರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿ ವ್ಯವಹಾರ ಕುದುರಿಸುತ್ತಿದ್ದರಂತೆ.
ಋತುಮತಿಯಾದ ಬಾಲಕಿಯರ ಜೊತೆ ಮೊದಲ ಲೈಂಗಿಕ ಸಂಪರ್ಕ ಬೆಳೆಸಿದರೆ ಹಲವು ಮಾನಸಿಕ ಖಾಯಿಲೆಗಳು ಗುಣವಾಗುತ್ತದೆ ಎಂಬ ಮೂಢ ನಂಬಿಕೆ ಈ ದಂಧೆಗೆ ಸಹಕಾರಿಯಾಗಿದೆ ಎನ್ನುವುದು ವಿಷಾಧನೀಯ. ಇಂತಹ ಸಮಸ್ಯೆ ಎದುರಿಸುತ್ತಿರುವ ಪುರುಷರನ್ನು ಪತ್ತೆ ಹಚ್ಚಿ ಋತುಮತಿಯಾದ ಬಾಲಕಿಯರನ್ನು ಸರಬರಾಜು ಮಾಡುವ ದೊಡ್ಡ ರಾಕೆಟ್ ಇರುವುದು ಸಹ ಬೆಳಕಿಗೆ ಬಂದಿದೆ.
