ರಾಜ್ಯದಲ್ಲಿ ವೋಟ್ ಚೋರಿ ಪ್ರಕರಣ ಸದ್ದು ಬಾರಿ ಮಾಡುತ್ತಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ ಬಳಿಕ ರಾಜ್ಯ ಎಸ್‌ಐಟಿ ತಂಡ ಅಖಾಡಕ್ಕೆ ಇಳಿದಿದೆ. ಪ್ರಕರಣ ಈಗ ಬಿಜೆಪಿ ಬುಡಕ್ಕೆ ಬರುತ್ತಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಮತಗಳ್ಳತನ ಆರೋಪ ಪ್ರಕರಣವನ್ನು ಕರ್ನಾಟಕ ಸರ್ಕಾರ ಸೀರಿಯಸ್ ಆಗಿ ಪರಿಗಣಿಸಿದೆ. ಮತಗಳ್ಳತನ ಪ್ರಕರಣದ ತನಿಖೆಗೆ ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿದೆ. ಇದೀಗ ಈ ಕೇಸ್ ಬಿಜೆಪಿ ಮಾಜಿ ಶಾಸಕನ ಮನೆಯ ಅಂಗಳಕ್ಕೆ ಬಂದು ನಿಂತಿದೆ. ಕಲಬುರಗಿ ಜಿಲ್ಲೆಯ ಆಳಂದದ ಮಾಜಿ ಶಾಸಕ, ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ವಿಚಾರಕ್ಕೆ ಸಂಬಂಧಪಟ್ಟಂತೆ ಬಗೆದಷ್ಟು ಕರಾಳತೆ ಬಯಲಾಗುತ್ತಿದೆ. ಇದೀಗ ಬಿಜೆಪಿಯ ಸುಭಾಷ್ ಗುತ್ತೇದಾರ್ ಒಡೆತನದ ಅಪ್ನಾ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಮತದಾರರ ವೋಟರ್ ಲಿಸ್ಟ್ ಪತ್ತೆಯಾಗಿದೆ ಎಂದು ಎಸ್‌ಐಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಪ್ನಾ ಬಾರ್ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ, ದಾಳಿಯ ವೇಳೆ ಬಾರ್ ನಲ್ಲಿ ವೋಟರ್ ಲಿಸ್ಟ್ ಗಳು ಪತ್ತೆಯಾಗಿವೆ. ಅಲ್ಲದೆ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿದ್ದ ವಿಚಾರವಾಗಿ ಕೂಡಿಸುವ ಹಣವನ್ನು ಆಳಂದ ಠಾಣೆ ಪೋಲಿಸಿರುವ ವಶಕ್ಕೆ ಪಡೆದುಕೊಂಡಿದ್ದು, ಚಾಲಕ ವಿಶಾಲ್ ಪರಾರಿಯಾಗಿದ್ದಾನೆ. ಆತನ ಹುಡುಕಾಟಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ.

ಇದೀಗ SIT ತನಿಖೆಯಲ್ಲಿ ಸ್ಫೋಟಕ ಅಂಶಗಳು ಬಯಲಾಗಿದ್ದು, ಕಾಲ್ ಸೆಂಟರ್ ಮೂಲಕ ಮತಗಳ್ಳತನ ಮಾಡುತಿದ್ದರು ಎಂಬ ಆರೋಪ ಕೇಳಿಬಂದಿದೆ. ಎಸ್‌ಐಟಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಬೆಚ್ಚಿ ಬೀಳಿಸುವ ಅಂಶಗಳು ಪತ್ತೆಯಾಗಿವೆ. ಫಾರ್ಮ್ ನಂಬರ್ 7 ಬಳಕೆ ಮಾಡಿ ವೋಟರ್ ಡಿಲೀಟ್ ಮಾಡುತ್ತಿದ್ದರು. ಅಧಿಕಾರಿಗಳ ದಾಳಿಯ ವೇಳೆ ಕಾಲು ಸೆಂಟರ್‌ನ ಮೂಲ ಪತ್ತೆಯಾಗಿದೆ. ಎಸ್ ಐ ಟಿ ಅಧಿಕಾರಿಗಳು ದಾಳಿ ಮಾಡಿದ್ದಾಗ ಅಕ್ರಮ್, ಅಶ್ಪಾಕ್, ಅಸ್ಲಾಂ ಸೇರಿದಂತೆ ಒಟ್ಟು ನಾಲ್ವರನ್ನು ಇದಕ್ಕೆ ಸಂಬಂಧಪಟ್ಟಂತೆ ಬಂಧಿಸಿದ್ದಾರೆ. ರೇಡ್ ಆಗುತ್ತೆ ಅಂತ ಗೊತ್ತಾದ ತಕ್ಷಣವೇ ಬಾರ್ ನಲ್ಲಿಯೇ ಮತದಾರರ ಪಟ್ಟಿ ಡಿಲೀಟ್ ಗೆ ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ವೋಟ್ ಚೋರರಿಂದ 7 ಬಾರಿ ಬಾರ್ ನಲ್ಲಿ ಮೀಟಿಂಗ್ ನಡೆಸಲಾಗಿದೆ. ಸೆಪ್ಟೆಂಬರ್ 18ರಂದು ಕರ್ನಾಟಕದಲ್ಲಿ ಮತ್ತೆ ಮತಗಳ್ಳತನದ ಬಾಂಬ್ ಸ್ಫೋಟವಾಗಿತ್ತು.
