ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಎಂಬಲ್ಲಿಯ ಘಾಲ್ಗುಣಿ ನದಿ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಂತೆ ದಾಳಿ ನಡೆಸಿ, ಆರೋಪಿಗಳಾದ ಶಾಫಿ ಅಹ್ಮದ್ (40) ತಂದೆ: ದಿ. ಅಜೀಜ್ ಖಾನ್, 13 ನೇ ಕ್ರಾಸ್, ಪಿ.ಹೆಚ್. ಕಾಲೋನಿ, ತುಮಕೂರು ಮತ್ತು ಮೊಹಮ್ಮದ್ ಸಮೀರ್ (20) ತಂದೆ: ಮೊಹಮ್ಮದ್ ರಫೀ, ಅಪೋಲೋ ಮೆಡಿಕಲ್ ರಸ್ತೆ, ಕೋತಿಪುರ, ತುಮಕೂರು ಎಂಬವರನ್ನು ಬಂಧಿಸಿ, ಅವರ ಬಳಿಯಿದ್ದ ಸುಮಾರು 12 ಗ್ರಾಂ ಎಂ.ಡಿ.ಎಂ, ಹಾಗೂ 275 ಗ್ರಾಂ ಗಾಂಜಾ (ಮಾದಕ ವಸ್ತುವಿನ ಒಟ್ಟು ಮೌಲ್ಯ 80ಸಾವಿರ) ಎರಡು ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 177/2025 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಆರೋಪಿಗಳು ಗಾಂಜಾ ಮತ್ತು ಎಂ.ಡಿ.ಎಂ ನ್ನು ಬೆಂಗಳೂರಿನಲ್ಲಿ ನಿಗ್ರೋ ಗಳ ಬಳಿ ಖರೀದಿಸಿರುವುದಾಗಿ ತಿಳಿಸಿರುತ್ತಾರೆ.
ಆರೋಪಿ ಶಾಫಿ ಅಹ್ಮದ್ ಎಂಬಾತನ ಮೇಲೆ ರಾಜ್ಯದ ವಿವಿದ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಆತ ಹಲವು ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಆತನಿಗೆ ಬಾಡಿ ವಾರಂಟ್ ಹಾಗೂ ಪ್ರೊಕ್ಲಮೇಶನ್ ಜ್ಯಾರಿಗೊಳಿಸಿರುತ್ತದೆ.
ಪಣಂಬೂರು ಉಪ- ವಿಭಾಗದ ಎಸಿಪಿ ಶ್ರೀಕಾಂತ್ ಕೆ. ರವರ ನೇತ್ರತ್ವದಲ್ಲಿ ಕಾವೂರು ಇನ್ಪೆಕ್ಟರ್ ರಾಘವೇಂದ್ರ ಬೈಂದೂರ್, ಮಲ್ಲಿಕಾರ್ಜುನ್, ಪಿ.ಎಸ್.ಐ, ಕಾವೂರು ಹಾಗೂ ಎ.ಎಸ್.ಐ ಚಂದ್ರಶೇಖರ್, ಸಿಬ್ಬಂದಿಗಳಾದ ರೆಜಿ ಎಂ, ಹಾಲೇಶ್ ನಾಯ್ಕ್, ರಿಯಾಜ್ ಈ ಪತ್ತೆ ಕಾರ್ಯಾಚರಣೆಯಲ್ಲಿ ಬಾಗವಹಿಸಿದ್ದರು
