ಬ್ಯಾರಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಮಾಸಿಕ ‘ ಬ್ಯಾರಿವಾರ್ತೆ’ ತನ್ನ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ‘ಬ್ಯಾರಿ ಲೇಖನ ಸ್ಪರ್ದೆ – 2026’ರ ಫಲಿತಾಶವನ್ನು ಇಂದು 16-2-2026ನೇ ಸೋಮವಾರ ರಾತ್ರೆ 8.30ಕ್ಕೆ ಪ್ರಕಟಿಸಲಿದೆ ಎಂದು ತಿಳಿಸಲಾಗಿದೆ.
ಈ ಸ್ಪರ್ದೆಗೆ ರಾಜ್ಯದ ವಿವಿಧ ಜಿಲ್ಲೆಗಳ ಸಹಿತ ವಿದೇಶಗಳಿಂದಲೂ 149 ಲೇಖನಗಳು ಬಂದಿದ್ದು ಇದೊಂದು ದಾಖಲೆಯಾಗಿದೆ.
ಈ ಸ್ಪರ್ದೆಯ ಫಲಿತಾಂಶವನ್ನು ವಿನೂತನ ಶೈಲಿಯಲ್ಲಿ ಪ್ರಟಿಸಲು ಉದ್ದೇಶಿಸಲಾಗಿದೆ. ಫಲಿತಾಂಶವನ್ನು ಒಂದು ವಿಶೇಷ ವಿಡಿಯೊ ಮೂಲಕ ‘Bearyinfo’ ಯೂಟ್ಯೂಬ್ ಚಾನೆಲ್‌ನಲ್ಲಿ 16-8-2026 ಸೋಮವಾರ ರಾತ್ರೆ 8.30ಕ್ಕೆ ಸರಿಯಾಗಿ ಪ್ರಸಾರ ಮಾಡಲಾಗುವುದು.
ಬ್ಯಾರಿವಾರ್ತೆಯ ಹತ್ತು ವರ್ಷದ ಸಾಧನೆಯ ಈ ವಿಡಿಯೊವನ್ನು ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಲ್ಲಿ ವೀಕ್ಷಿಸ ಬೇಕು, ವಿಜೇತರನ್ನು ಅಭಿನಂದಿಸಬೇಕು ಮತ್ತು ಬ್ಯಾರಿವಾರ್ತೆಯೊಂದಿಗೆ ಸಹಕರಿಸಬೇಕು ಎಂದು ಸಂಪಾದಕ ಬಶೀರ್ ಬೈಕಂಪಾಡಿ ವಿನಂತಿಸಿದ್ದಾರೆ.
