ಕೋಮು ದ್ವೇಷಿಗಳ, ಮತೀಯವಾದಿ ಗೂಂಡಾಗಳ ನಟ್ಟು ಬೋಲ್ಟ್ ಟೈಟ್ ಮಾಡಿದ ಅಧಿಕಾರಿಗೆ ತೋಡಿದರಾ… ಖೆಡ್ಡಾ.!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಡಕ್, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದು ಪೊಲೀಸ್ ಅಧಿಕಾರಿ ಆಗಿರಲಿ, ಸರಕಾರಿ ಅಧಿಕಾರಿ ಆಗಿರಲಿ ಇಲ್ಲಿ ಪ್ರಾಮಾಣಿಕ ಸೇವೆ ಮಾಡುವವರನ್ನು ಹೇಗಾದರೂ ಸಿಲುಕಿಸಿ ಮಜಾ ಕಾಣುವ ದುಷ್ಠ ಕೂಟ ಸಕ್ರೀಯವಾಗಿದೆ. ಆದರೆ ಅಡ್ಜೆಸ್ಟ್ ಮೆಂಟ್ ಅಧಿಕಾರಿಗಳಿಗೆ ಮಾತ್ರ ಇಲ್ಲಿ ಬೆಲೆ, ನೆಲೆ ಎಲ್ಲಾ ಇರುವುದು.
ಒಬ್ಬ ಮಹಿಳೆ ಜೊತೆಗೆ ಕೈ ಹಿಡಿದು ಕುಣಿಯುವುದು, ಕಾಂಪೌಂಡ್ ಹಾರುವುದು, ಠಾಣೆಯಲ್ಲಿ ಇರುವುದು ಹೀಗೇ… ಇದನ್ನೇ ಇಟ್ಕೊಂಡು ನಿನ್ನೆಯಿಂದ ಕೆಲವು ಮಾಧ್ಯಮಗಳು, ಫೇಸ್ಬುಕ್ ಫೇಜ್ ಅನ್ನೇ so called media ಮಾಡ್ಕೊಂಡಿರೋ ವಸೂಲಿ ವೀರರು, ಲಬೋ..ಲಬೋ.. ಎಂದು ಬೊಬ್ಬೆ ಹಾಕಿದ್ದೇ ಹಾಕಿದ್ದು. ಸಂತ್ರಸ್ತೆ ಪರ ಬೊಗಸೆ ಕಣ್ಣೀರು ಹಾಕಿ ತಾವು ಮಾತ್ರ ಸಾಚಾ ರೀತಿ ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ಎಸಿ ರೂಮಲ್ಲಿ ಕೂತು ಗಂಟೆಗಟ್ಟಲೆ ಆ್ಯಂಕರ್ ಗಳು ತೆಪೆ ಹಚ್ಚಿದ್ದೇ ಹಚ್ಚಿದ್ದು, ಆದರೆ ಸತ್ಯಾಸತ್ಯಯತೆಯನ್ನು ಹೊರಗೆಳೆಯುವ ಕೆಲಸವನ್ನು ಮಾಡದೆ, ಸಿಕ್ಕಿದ ಸಮಯ ಎಂದು ವಾಮಾಗೊಚರವಾಗಿ ನಿಂದಿಸಿದ್ದೇ ನಿಂದಿಸಿದ್ದು, ಇದು ಈಗಿನ ಕೆಲವು ಮಾದ್ಯಮ ವೀರರ ಪರಾಕ್ರಮದ ನಾ..ಮುಂದು, ತಾ.. ಮುಂದು ಎಂಬ ನಮ್ಮಲ್ಲಿ ಮಾತ್ರ, ಎಂಬ ಹಸಿ ಹಸಿ ಪೊಂಗಿ.! ವರ್ಷದ ಹಿಂದೆ ನಡೆದ ಘಟನೆ ಎಂದು ಹೇಳಿ ಮಹಿಳೆಯೊಬ್ಬಳು ಎದ್ದು ಬಂದಿರುವುದು, ಇದರ ಹಿಂದೆ ಬೇರೆಯದ್ದೇ ವಾಸನೆ ಕೇಳಿ ಬರತೊಡಗಿದೆ. ದುಷ್ಟ ಕೂಟಗಳು ನಡೆಸಿರುವ ಸಂಚು ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಈ ಪ್ರಕರಣದ ಹಿಂದೆ ಇರೋದು ಅಕ್ಕ-ತಂಗಿಯರ ಗಲಾಟೆ ಮತ್ತು ಲಂಗ್ಡನೊಬ್ಬನ ಕಿತಾಪತಿಯಂತೆ.! ಬಾಲಕನೊಬ್ಬನನ್ನು ಕಾನೂನು ಪ್ರಕಾರ ರಕ್ಷಣೆ ಮಾಡಲು ಹೋಗಿ ಅದರಿಂದ ಸಮಸ್ಯೆ ಎದುರಿಸಿರುವ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಅನ್ನುವುದು ಮೂಡಬಿದ್ರೆಯ ಜನರಿಗೆ ತಿಳಿದಿದೆ. ನೂರಾರು ಹೆಣ್ಣುಮಕ್ಕಳ ಶೋಷಣೆ, ಬೆದರಿಕೆ ಇದಕ್ಕೆಲ್ಲ ಆಧಾರಗಳಿಲ್ಲ ತನಿಖೆ ನಡೆಯುತ್ತೆ ಎಂದು ಉನ್ನತ ಅಧಿಕಾರಿಗಳೇ ಹೇಳಿದ್ದಾರೆ.

ಇನ್ನು ಮೂಡಬಿದ್ರೆಯಲ್ಲಿ ಸಂದೇಶ್ ಪಿಜಿ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಳ್ಳುತ್ತಿದ್ದಂತೆ ಸಿಂಗಂ ರೀತಿ ಮೆರೆದಾಡಿದರು. ಪುಚ್ಚಮೊಗರಿನಲ್ಲಿ ಬಾವುಟ ವಿವಾದ ತಾರಕಕ್ಕೇರಿ ಕೋಮು ಗಲಭೆಗಳಿಗೆ ಸಾಧ್ಯತೆ ಇದ್ದಾಗ ಅಂತಹ ವಿವಾದವನ್ನೇ ತನ್ನ ಸಿಂಗಂ ಸ್ಟೈಲಿನಲ್ಲಿ ಪರಿಹರಿಸಿದ್ದರು. ಕೋಮು ದ್ವೇಷಿಗಳು, ಮತೀಯವಾದಿ ಗೂಂಡಾಗಳು ಸೈಲೆಂಟ್ ಆಗಿ ಬಿಲ ಸೇರಿಕೊಂಡಿದ್ದರು. ಸಾಲು ಹಾಕ್ಕೊಂಡು ಎಂಎಲ್ ಎ, ಎಂಪಿ ಹೆಸರು ಹೇಳ್ಕೊಂಡು ಮಾಡಬಾರದ್ದು ಮಾಡ್ತಾ ಇದ್ದ ಮರಿಪುಡಾರಿಗಳ ಬಾಲ ಕತ್ತರಿಸಿದ್ದರು. ದ್ವೇಷ ಚಟುವಟಿಕೆಯಲ್ಲಿಯೇ ಮಾಗಿದ್ದ ದರೆಗುಡ್ಡೆಗೆ ಜೈಲಿನ ಕಂಬಿ ತೋರಿಸಿದ್ದರು. ಅಕ್ರಮ ಗೋಸಾಗಾಟ, ಕಸಾಯಿಖಾನೆ, ಧೋ ನಂಬ್ರ ದಂಧೆಕೋರರು ಬೀಗ ಜಡಿದು ಊರು ಬಿಟ್ಟಿದ್ದಾರೆ. ಹಫ್ತಾ ವಸೂಲಿ, ಬೆದರಿಕೆ ಮಾಡ್ತಾ ದಿನ ಸಾಗಿಸ್ತಾ ಇದ್ದ ಅಬ್ಬೇಪಾರಿಗಳ ನಟ್ಟು ಬೋಲ್ಟು ಟೈಟ್ ಆಗಿದೆ. ಹತ್ತಾರು ವರ್ಷ ಹಳೇ ಕ್ರಿಮಿನಲ್ ಗಳನ್ನು ಹುಡುಕಿ ಜೈಲಿನ ದಾರಿ ತೋರಿಸಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ನಡೆಯಲಿದ್ದ ಅಪ್ರಾಪ್ತ ಬಾಲಕಿಯರ ಗ್ಯಾಂಗ್ ರೇಪ್ ತಪ್ಪಿಸಿ ಮೂಡಬಿದ್ರೆ ಜನರಿಂದ ಶಹಾಬ್ಬಾಸ್ ಪಡ್ಕೊಂಡಿದ್ದಾರೆ. ಇವರ ಕರ್ತವ್ಯ ನಿಷ್ಠೆಗೆ ಇತ್ತೀಚೆಗೆ ಮುಖ್ಯಮಂತ್ರಿ ಪದಕ ಕೂಡ ಲಬಿಸಿದೆ. ಪ್ರಭಾವಿ ನಾಯಕರ ಅಶ್ಲೀಲ ದಂಧೆಯನ್ನು ಬಯಲಿಗೆ ಎಳೆದಿದ್ದರು. ಈ ಎಲ್ಲಾ ಶಕುನಿಗಳು ಒಟ್ಟು ಸೇರಿ ಸಂದೇಶ್ ಗೆ ತೋಡಿಯೇ ಬಿಟ್ಟರು ಖೆಡ್ಡಾ. ಮೂಡಬಿದ್ರೆ ಪರಿಸರದಲ್ಲಿ ಒಳ್ಳೆಯ ಆಫೀಸರ್ಸ್ ಆಗಿ ಗುರುತಿಸಿಕೊಂಡಿದ್ದ ಸಂದೇಶ್ ಅವರ ಕಾರ್ಯ ವೈಖರಿಗೆ ಬೇಸತ್ತ ದುಷ್ಟ ಕೂಟಗಳು ಇಂತಹ ಸಂಚು ಹೆಣೆದಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ.
ಮಂಚಕ್ಕೆ ಕರೆದರು, ಹಾಸಿಗೆ ಹಾಸಿದರು ಎನ್ನುವವರು ಮಂಚಕ್ಕೇರುವ ಮುನ್ನ ಮೌನಕ್ಕೆ ಜಾರಿದ್ದೇಕೆ.? ವರುಷಗಳು ಉರುಳಿದ ನಂತರ ಮತ್ತೆ ಹಾಸಿಗೆಯ, ಮಂಚದ ನೆನಪಾಯಿತೇ.? ಅಥವಾ ಬ್ಲಾಕ್ ಮೈಲ್ ತಂತ್ರವೇ.! ಅಷ್ಟು ಮರ್ಯಾದಸ್ಥರಾಗಿದ್ದರೆ ಹಾಸಿಗೆಯಲ್ಲಿ ಹೇಸಿಗೆ ಮಾಡುವ ಮುನ್ನವೇ ಎಚ್ಚರವಹಿಸಬೇಕಿತ್ತು. ಇದೀಗ ಪ್ರತಿಕಾರಕ್ಕಾಗಿ ಲಬೋ.. ಲಭೋ.. ಅನ್ನುವುದರಲ್ಲಿ ಅರ್ಥವಿಲ್ಲ. ಸರಕಾರಿ ಅಧಿಕಾರಿಗಳು ಯಾವಾಗಲು ಸ್ವಲ್ಪ ಎಚ್ಚರಿಕೆ, ಮುಂಜಾಗ್ರತೆಯಿಂದಿರಬೇಕು. ತನ್ನ ಸುತ್ತಮುತ್ತಲಿನಲ್ಲಿರುವವರನ್ನು ಗಮನಿಸುತ್ತಿರಬೇಕು. ಎಲ್ಲವನ್ನು ಬಿಚ್ಚಿಡಬಾರದು. ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕು. ಉತ್ತಮ ಅಧಿಕಾರಿಗಳ ಪರ ನಾಗರಿಕ ಸಮಾಜ ನಿಂತು ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ನೀಡಿದ ದೂರಿನ ಕುರಿತಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸಿಪಿ ಉತ್ತರ (ACP North) ವಲಯ ಅವರಿಗೆ ಸೂಚಿಸಲಾಗಿದೆ. ಈವರೆಗೆ ಯಾವುದೇ ಮಹಿಳೆಯು ಅವರ ವಿರುದ್ಧ ಲೈಂಗಿಕ ಕಿರುಕುಳದ ದೂರನ್ನು ನೀಡಿರುವುದಿಲ್ಲ.
ಸುಮತಿ ನಾಯಕ್ ಮತ್ತು ಅವರ ಸಹೋದರಿಯ ನಡುವೆ ಒಂದಷ್ಟು ವಿವಾದವಿದ್ದು, ಈ ವಿವಾದದಲ್ಲಿ ಇನ್ಸ್‌ಪೆಕ್ಟರ್ ಅವರು ಎದುರು ಪಾರ್ಟಿಗೆ (ಮತ್ತೊಂದು ತಂಡಕ್ಕೆ) ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅವರು ದೂರಿದ್ದಾರೆ. ಈ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿದೆ ಮತ್ತು ಈ ಪ್ರಕರಣ ಸಂಬಂಧಿಸಿದ ಇನ್ಸ್‌ಪೆಕ್ಟರ್ ಅವರು ಅಪ್ರಾಪ್ತ ಮಗನ ಪಾಲನೆಯನ್ನು ತಾಯಿಗೆ ಒಪ್ಪಿಸಿದ್ದಾರೆ. ಆದ್ದರಿಂದ, ಇನ್ಸ್‌ಪೆಕ್ಟರ್ ಮಾಡಿದ್ದು ಕಾನೂನುಬದ್ಧವಾಗಿ ಸರಿಯಾಗಿರುವುದರಿಂದ ಈ ವಿಷಯದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬರುವುದಿಲ್ಲ. ಯಾರಾದರೂ ಸಂತ್ರಸ್ತರು ದೂರು ನೀಡಲು ಇಚ್ಛಿಸಿದರೆ, ಅವರು ದೂರು ನೀಡಲು ಮುಕ್ತರಾಗಿದ್ದಾರೆ ಮತ್ತು ಅದರ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು.
ಅಲ್ಲದೆ, ಸಂಬಂಧವಿಲ್ಲದ ವ್ಯಕ್ತಿಯ ದೂರಿನ ಮೇರೆಗೆ, ಯಾವುದೇ ಮೂರನೇ ವ್ಯಕ್ತಿಯಾದ (ಸಂಬಂಧಪಡದ) ಮಹಿಳೆಯ ವೈಯಕ್ತಿಕ ಸಂಬಂಧಗಳ ಬಗ್ಗೆ ವಿಚಾರಣೆ ನಡೆಸುವುದು ಕಷ್ಟವಾಗುತ್ತದೆ. ಏನೇ ಇರಲಿ, ವಿಚಾರಣೆಯ ಸಮಯದಲ್ಲಿ ಸತ್ಯಾಸತ್ಯತೆಗಳು ಹೊರಬರಲಿವೆ ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸುಮತಿ ನಾಯಕ್ ಅವರು ಕಚೇರಿಗೆ ಬಂದಾಗ ತೋರಿಸಿದ ವಿಡಿಯೋವನ್ನು ಮಾತ್ರ ನಾನು ನೋಡಿದ್ದೇನೆ. ಅದರಲ್ಲಿ ಇನ್ಸ್‌ಪೆಕ್ಟರ್ ಗೋಡೆಯನ್ನು ಹಾರಿ ಹೋಗುತ್ತಿರುವುದು ಕಂಡುಬಂದಿದೆ. ಆದರೆ, ಆ ಮನೆಯ ಮಾಲೀಕರಿಂದ ಯಾವುದೇ ದೂರು ಬಾರದ ಹಿನ್ನೆಲೆಯಲ್ಲಿ, ಆ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆಡಿಯೋಗಳ ಬಗ್ಗೆ ನನಗೆ ಈವರೆಗೆ ಮಾಹಿತಿ ಇರಲಿಲ್ಲ, ಅವು ಹೊಸ ವಿಚಾರಗಳಾಗಿವೆ. ಎಸಿಪಿ (ACP) ಅವರ ತನಿಖಾ ವರದಿಯಲ್ಲಿ ಏನೆಲ್ಲಾ ಅಂಶಗಳು ಹೊರಬರಲಿವೆ ಎಂಬುದನ್ನು ಕಾದು ನೋಡೋಣ.” ಎಂದು ಪೊಲೀಸ್ ಕಮೀಷನರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
