ಕೆ.ಎಂ ಇಬ್ರಾಹಿಂ ಮಾಸ್ಟರ್ ಎಂಬ ಸಮುದಾಯದ ದ್ವನಿ; ಸರ್ವದರ್ಮೀಯರ ದೋತಕ– ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ರಾಜಕೀಯ ಪಯಣ

ಕರಾವಳಿ

ಕೆ.ಎಂ ಇಬ್ರಾಹಿಂ ಮಾಸ್ಟರನ್ನು ಚಿವುಟಿದ ಬಂಟ್ವಾಳದ ಜಾತ್ಯತೀತ ಎಂಬ ಹಣೆಪಟ್ಟಿಯ ನಾಯಕ ಯಾರು? ಎಂಬ ಪ್ರಶ್ನೆಗಳು ಇನ್ನೂ ಚರ್ಚೆಯಾಗುತ್ತಿವೆ

ಕೆ.ಎಂ.ಇಬ್ರಾಹಿಂ ಮಾಸ್ಟರ್ ಎಂಬ ಸಮುದಾಯದ ದ್ವನಿ, ಸರ್ವದರ್ಮೀಯರ ಪ್ರೀತಿಯ ದೋತಕ ಎಂದೇ ಗುರುತಿಸಿಕೊಂಡ ನಾಯಕತ್ವ ವಿಟ್ಲ ಪ್ರದೇಶದಲ್ಲಿ ವಿಶಿಷ್ಟ ಗುರುತು ಮೂಡಿಸಿತು. ಧರ್ಮ, ಜಾತಿ, ವರ್ಗ ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಅವರಲ್ಲಿತ್ತು. ಅವರ ಸೌಹಾರ್ದ ರಾಜಕೀಯವೇ ಜನಮನ ಗೆದ್ದ ಪ್ರಮುಖ ಅಸ್ತ್ರವಾಗಿತ್ತು.

ವಿಟ್ಲ ಪೇಟೆಯ ಪರಿವರ್ತನೆಗೆ ಚಾಲನೆ
ವಿಟ್ಲ ಪೇಟೆಯೆಂಬ ಇಕ್ಕಟ್ಟಿನ ರಸ್ತೆಯನ್ನು ಖಾಸಗೀತ್ವದ ಕಾಲಘಟ್ಟದಲ್ಲಿ ಜೈನ, ಬಳ್ಳಾಲ್, ವಿಟ್ಲ ಅರಮನೆಯ ಮುಖ್ಯಸ್ಥರನ್ನು ಮನವೊಲಿಸಿ ರಸ್ತೆ ಅಗಲೀಕರಣ ಮಾಡಿಸಿದುದು ಅವರ ಚಾಕಚಕ್ಯತೆಗೆ ಸಾಕ್ಷಿ. ನೀರು ಸರಬರಾಜು, ಚರಂಡಿ ವ್ಯವಸ್ಥೆ ಮತ್ತು ವಿಟ್ಲದಲ್ಲಿ ಸುಸಜ್ಜಿತ ಸರಕಾರಿ ಬಸ್ಸು ನಿಲ್ದಾಣಕ್ಕೆ ಜಾಗ ಮೀಸಲಿಟ್ಟ ಕ್ರಮಗಳು ದೂರದೃಷ್ಟಿಯ ಆಡಳಿತದ ಉದಾಹರಣೆಗಳಾಗಿವೆ.

ಸೌಹಾರ್ದ ಇತ್ಯರ್ಥ ಆಡಳಿತದ ಮಾದರಿ ಆರಂಭ
ಜಿಲ್ಲೆಯಲ್ಲಿ ಸೌಹಾರ್ದ ಮತ್ತು ಅಭಿವೃದ್ಧಿಯ ಇತ್ಯರ್ಥಗಳು ಆರಂಭವಾಗಿದ್ದು ಅವರ ಆಡಳಿತ ಕಾಲದಲ್ಲೇ ಎಂಬ ವಿಶ್ಲೇಷಣೆ ಮುಖಂಡರಿಂದ ಕೇಳಿಬರುತ್ತದೆ. ಇವರ ಸೌಹಾರ್ದ ವೈಖರಿ ಇತರರಿಗೆ ಮುನ್ನುಡಿಯಾಗಿದ್ದು, ಸಮನ್ವಯದ ಮೂಲಕ ಸಮಸ್ಯೆ ಪರಿಹಾರ ಮಾಡುವ ಶೈಲಿ ಅವರಿಗೆ ವಿಶಿಷ್ಟ ಸ್ಥಾನ ನೀಡಿತು.

ಅಂದಿನ ಯುವ ಕಾಂಗ್ರೆಸ್ ಪಡೆ – ಒಗ್ಗಟ್ಟಿನ ಶಕ್ತಿ
20 ದಶಕದಲ್ಲಿ ಅವರೊಂದಿಗಿದ್ದ ಯುವ ಕಾಂಗ್ರೆಸ್ ಪಡೆ ಜಿಲ್ಲೆಗೆ ಮಾದರಿಯಾಗಿತ್ತು. ರಾಜೇಶ್ ಬಾಳೆಕಲ್ಲು, ರಮನಾಥ ವಿಟ್ಲ, ಸೀತಾರಾಮ ಶೆಟ್ಟಿ, ಬೊಂಡಾಲ ಜಗ್ಗನ್ನಾಥ ಶೆಟ್ಟಿ, ಪದ್ಮನಾಭ ರೈ, ಗಣೇಶ್ ಶೆಟ್ಟಿ ಗೋಳ್ತಮಜಲು, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಅಮ್ಮುಂಜೆ ಚಂದ್ರಶೇಖರ್ ಭಂಡಾರಿ, ಮಹಮ್ಮದ್ ಸಾಲೆ, ಅಶ್ರಪ್, ಹನೀಪ್ ಹಾಜಿ, ರಪೀಕ್ ಹಾಜಿ ಬಿ.ಸಿರೋಡ್, ಚಿತ್ತರಂಜನ್ ಶೆಟ್ಟಿ, ಉಮ್ಮರ್ ಮಂಚಿ, ಚಂದ್ರಹಾಸ್ ಶೆಟ್ಟಿ ಬೊಳಂತೂರು, ಇಬ್ರಾಹಿಂ ಮಂಚಿ, ಕೆ.‌ಪಿ ಅಬ್ದುಲ್ ರಹಿಮಾನ್ ಕನ್ಯಾನ, ಚಂದ್ರಹಾಸ ಕರ್ಕೇರ ಸೇರಿದಂತೆ ಆ ಒಗ್ಗಟ್ಟಿನ ತಂಡ ವಿಟ್ಲ ಕ್ಷೇತ್ರದ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿ ಕೆಲಸ ಮಾಡಿತ್ತು.

ಕಾಂಗ್ರೆಸ್ ಹೋರಾಟಗಳ ಫಲ ಇಂದಿನ ಬಂಟ್ವಾಳ ಕಾಂಗ್ರೇಸಿಗೆ ಬಲ
ಅಂದಿನ ಕಾಂಗ್ರೆಸ್ ಹೋರಾಟಗಳೇ ಅಭಿವೃದ್ಧಿಗಳೇ ಈ ಭಾಗದಲ್ಲಿ ಇಂದು ಕಾಂಗ್ರೆಸ್ ಉಸಿರಾಗಿರಲು ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಜನಪರ ಚಳವಳಿಗಳು, ನೆಲಮಟ್ಟದ ಕಾರ್ಯಗಳು ಮತ್ತು ನಿರಂತರ ಹೋರಾಟಗಳು ಪಕ್ಷವನ್ನು ಗಟ್ಟಿಗೊಳಿಸಿದವು. ಇದಕ್ಕೆ ಇಬ್ರಾಹಿಂ ಮಾಸ್ಟರ್ ಅವರ ಮಾರ್ಗದರ್ಶನವೇ ಬೆನ್ನೆಲುಬಾಗಿತ್ತು.

ಅಭಿವೃದ್ಧಿಯ ಹರಿಕಾರ – ರಸ್ತೆಗಳ ನಿರ್ಮಾತೃ
ಅಭಿವೃದ್ಧಿಯ ಹರಿಕಾರ, ಸಂಪರ್ಕ ರಸ್ತೆಯ ಜಣಕ, ಸರ್ವ ಋತು ರಸ್ತೆಗಳ ನಿರ್ಮಾತೃ ಎಂಬ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅನುದಾನಗಳ ಕೊರತೆಯ ನಡುವೆಯೂ ಮುಖ್ಯಮಂತ್ರಿ ಗಳ ಮೂಲಕ ಸರಕಾರದಿಂದ ಸುರತ್ಕಲ್-ಕಬಕ ರಸ್ತೆ ಮೆಲ್ದರ್ಜೇ, ಸುಬ್ರಹ್ಮಣ್ಯ-ಪುಣಚ-ಆನೇಕಲ್ ರಸ್ತೆಗಳನ್ನು ಮೇಲ್ದರ್ಜೆಗೆರಿಸಿ ಸದನದಲ್ಲಿ ಸಾದನೆಗಳ ವೀರ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲೇ ಪ್ರಥಮ ಎಂಬಂತೆ ಹಕ್ಕು ಪತ್ರ ವಿತರಣೆಯಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಮಲೆನಾಡು ಪ್ರದೇಶದಲ್ಲಿ ಪ್ರಥಮನೆಂಬ ಹೆಗ್ಗಳಿಕೆ ಕರಾವಳಿಗೆ ತಂದದ್ದೇ ಅವರು.
ಬ್ರಾಹ್ಮಣ ಸಮುದಾಯ ಅಂದು ಕಾಂಗ್ರೆಸ್ ಬೆಂಬಲಿಸಲು ಕಾರಣೀಕರ್ತರು, ಬ್ರಾಹ್ಮಣರ ನೆಚ್ಚಿನ MLA ಇಂದು ವಿಟ್ಲ, ಕನ್ಯಾನ, ಕರೋಪಾಡಿ‌, ಕೊಳ್ನಾಡು ಸೇರಿದಂತೆ ಆ ಸಮುದಾಯದ ಮತದಾರರು ಕಾಂಗ್ರೆಸ್ ಪರವಾಗಿದ್ದರೆ ಅದಕ್ಕೆ ಕಾರಣ ಕೆ.ಎಂ. .. ನಂತರ ದಿನಗಳಲ್ಲಿ ಆ ಸಮುದಾಯವನ್ನು ಹಿಡಿದುಟ್ಟುಕೊಳ್ಳುವಲ್ಲಿ ಆಶೋಕ್ ರೈ ಬಿಟ್ಟರೆ ಜಿಲ್ಲೆಯಲ್ಲಿ ಯಾವ ಮುಖಂಡರು ಆಶಕ್ತಿ ತೋರಿಸಿಲ್ಲ

ಸೋಲಿನ ಪ್ರಶ್ನೆ ಮತ್ತು ಧರ್ಮದ ಸಂದೇಶ
ನೆನಪಿರಲಿ: ಅಲ್ಪಸಂಖ್ಯಾತ ಮುಸ್ಲಿಂ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಗುಂಡೂರಾವ್, ಎಸ್.ಎಂ.ಕೃಷ್ಣ ಅವರ ಆಪ್ತ ಶುಂಠಿಕೊಪ್ಪ ಕೆ.ಎಂ.ಇಬ್ರಾಹಿಂ ಮಾಸ್ಟರ್ ಸೋಲಿಗೆ ಕಾರಣ ಯಾರು?

ಅವರನ್ನು ಚಿವುಟಿದ ಬಂಟ್ವಾಳದ ಜಾತ್ಯತೀತ ಕೈ ಯಾರು? ಎಂಬ ಪ್ರಶ್ನೆಗಳು ಇನ್ನೂ ಚರ್ಚೆಯಾಗುತ್ತಿವೆ. ಈ ಸ್ಥಳದಲ್ಲಿ ಅನ್ಯಾಯ ಮಾಡಿದವರಿಗೆ ಭಗವಂತ ಮುಂದಿನ ದಿನಗಳಲ್ಲಿ ಉತ್ತರ ಕೊಡುವನು ಎಂಬ ನಂಬಿಕೆಯನ್ನು ಭಗವದ್ಗೀತೆ ಸಾರುತ್ತದೆ: ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ… ಧರ್ಮ ಸಂಸ್ತಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಸತ್ಯ ಮತ್ತು ಧರ್ಮದ ಜಯ ಅನಿವಾರ್ಯವೆಂಬ ಸಂದೇಶವನ್ನು ಇದು ಒತ್ತಿಹೇಳುತ್ತದೆ.