ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ಸ್ ಆರೋಪಿಯ ಬಂಧನ

ಕರಾವಳಿ

2026 ನೇ ಜನವರಿ ತಿಂಗಳಿನಲ್ಲಿ ಮಂಗಳೂರು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಕಿರಾತ್ (ಕುರಾನ್ ಸ್ಫಟಿಸುವ) ಸ್ಪರ್ದೆಯ ವಿಡಿಯೋ ಸಾಮಾಜಿಕ ಜಾಲತಾಣವಾದ ಉದಯವಾಣಿ ಫೇಸ್ ಬುಕ್ ಪುಟದಲ್ಲಿ ಪ್ರಸಾರವಾಗುತ್ತಿದ್ದಾಗ ಗಣೇಶ್ ಪ್ರಸಾದ್ ಎಂಬಾತನು ತನ್ನ ಅಕೌಂಟ್ ನಲ್ಲಿ” ಮಕ್ಕಳ ತಲೆಯನ್ನು ಬ್ರೈನ್ ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂದು ಪ್ರಚೋದನಕಾರಿಯಾಗಿ ಕಮೆಂಟ್ ಹಾಕಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣಾ ಅ.ಕ್ರ. 15/2026ರಂತೆ ಪ್ರಕರಣ ದಾಖಲಾಗಿ ತನಿಖೆಯ ನಡೆಯುತ್ತಿತ್ತು.

ತನಿಖೆಯ ಸಮಯದಲ್ಲಿ ಗಣೇಶ್ ಪ್ರಸಾದ್ ಎಂಬ ಫೇಸ್ ಬುಕ್ ಖಾತೆಯಿಂದ ಕೋಮು ಪ್ರಚೋದಕ ಕಮೆಂಟ್ ಗಳನ್ನು ಹಾಕಿದ ವ್ಯಕ್ತಿಯು ಕಾಸರಗೋಡು ಜಿಲ್ಲೆ, ಮಂಜೇಶ್ವರದ ಗಣೇಶ್ ಪ್ರಸಾದ್, ಎಸ್.ಎನ್ ಕಬನುರಾಯ ಎಂದು ತನಿಖೆಯಲ್ಲಿ ಕಂಡು ಬಂದಿದ್ದು, ದಿನಾಂಕ 27-03-2026 ರಂದು ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ದಸ್ತಗಿರಿ ಮಾಡಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.