ಭಾರತ ಸರ್ಕಾರದ ಮಹತ್ವದ ಜನಗಣತಿ ಯೋಜನೆ ನಾಳೆಯಿಂದ ಚಾಲನೆ; ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಲು ಅವಕಾಶ

ರಾಷ್ಟ್ರೀಯ

ಭಾರತ ಸರ್ಕಾರದ ಮಹತ್ವದ ಯೋಜನೆಗಳಾದ ಜನಗಣತಿ ಪ್ರಕ್ರಿಯೆಗೆ ನಾಳೆಯಿಂದ ಚಾಲನೆ ದೊರೆಯಲಿದೆ.
ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಲು ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಜನಗಣತಿ ಮಾಡುವವರು ಮನೆಗೆ ಬಂದಾಗ ಅವರಿಗೆ ಕೇವಲ ರೆಫರೆನ್ಸ್ ನಂಬರ್ ನೀಡುವ ಮೂಲಕ ಜವಾಬ್ದಾರಿಯನ್ನು ಪೂರ್ಣಗೊಳಿಸಬಹುದಾಗಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು https://test.census.gov.in/se/ ಜಾಲತಾಣಕ್ಕೆ ಲಾಗಿನ್ ಆಗಿ ಸೆನ್ಸಸ್ ನಲ್ಲಿ ಭಾಗವಹಿಸಬಹುದಾಗಿದೆ.

ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ OTP ಬಳಸಿ ಲಾಗಿನ್ ಆಗಿ, ಅಲ್ಲಿ ಕಾಣಿಸುವ ‘ಸ್ವಯಂ ಗಣತಿ’ ಐಕಾನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿ ಸಲ್ಲಿಸಿ ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರತಿಯೊಬ್ಬರ ಶಿಕ್ಷಣ, ಉದ್ಯೋಗ ಮತ್ತು ಕುಟುಂಬದ ಇತರೆ ಮಾಹಿತಿಯನ್ನು ಸಲ್ಲಿಸಬಹುದಾಗಿದೆ.
ಸ್ವಯಂ ಗಣತಿಗೆ ಏಪ್ರಿಲ್ 15 ರವರೆಗೆ ಮಾತ್ರ ಕಾಲಾವಕಾಶವಿರುತ್ತದೆ. ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಜಾರಿಗೆ ತರಲಾದ ಈ ಯೋಜನೆ ಸಮಯ ಉಳಿತಾಯ ಮಾಡುವುದಲ್ಲದೆ, ನಿಖರವಾದ ಮಾಹಿತಿ ಸಂಗ್ರಹಕ್ಕೆ ಸಹಕಾರಿಯಾಗಲಿದೆ.

ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ 2027ರ ಪ್ರಕ್ರಿಯೆ ಏಪ್ರಿಲ್ 1, 2026 ರಿಂದ (ಮನೆಗಳ ಪಟ್ಟಿ) ಆರಂಭವಾಗಲಿದೆ. 11,718 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಮೊಬೈಲ್ ಆ್ಯಪ್ ಮತ್ತು ಪೋರ್ಟಲ್ ಮೂಲಕ ನಾಗರಿಕರು ಸ್ವಯಂ ಮಾಹಿತಿ (Self-enumeration) ದಾಖಲಿಸಬಹುದು. ಇದು 16 ಭಾಷೆಗಳಲ್ಲಿ ಲಭ್ಯವಿದ್ದು, 2026 ರ ಸೆಪ್ಟೆಂಬರ್ ವರೆಗೆ ಮನೆಗಳ ಗಣತಿ, ನಂತರ ಜನಸಂಖ್ಯೆ ಗಣತಿ ನಡೆಯಲಿದೆ. ಮೊದಲ ಹಂತ (ಏಪ್ರಿಲ್-ಸೆಪ್ಟೆಂಬರ್ 2026) ಮನೆಗಳ ಗಣತಿ; ಎರಡನೇ ಹಂತ (ಫೆಬ್ರವರಿ 2027) ಜನಸಂಖ್ಯೆ ಗಣತಿ.