ಹಿಂದೂ, ಹಿಂದುತ್ವ ಎನ್ನುತ್ತಲೇ ಹಿಂದುಳಿದವರನ್ನು ಹಿಂದಕ್ಕೆ ತಳ್ಳುವ ಹುನ್ನಾರವನ್ನು ಯುವ ಸಮುದಾಯ ಅರಿಯಬೇಕು.

ರಾಷ್ಟ್ರೀಯ

ಹಿಂದುಳಿದ ವರ್ಗದ ಯುವಕರ ಕೈಗೆ ತ್ರಿಶೂಲ, ತಲವಾರು, ಕೇಸರಿ ಶಾಲು ಕೊಟ್ಟು ಬೆಂಕಿ ಹಚ್ಚುವ ಕೆಲಸಕ್ಕೆ ಬಳಸಲಾಗುತ್ತಿದೆ.!

ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕರಿಗೆ ಅನ್ಯಾಯವಾಗುತ್ತಿದೆ. ಪಕ್ಷಕ್ಕಾಗಿ ದುಡಿದವರನ್ನೇ ದೂರ ತಳ್ಳಲಾಗಿದೆ. ಬಿಜೆಪಿ ಪಕ್ಷವು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ನಾಯಕರಾದ ಈಶ್ವರಪ್ಪ ಅವರನ್ನು ಅವಮಾನಿಸಿದರೆ, ಅತ್ತ ದೆಹಲಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿರುವ ಕೇಜ್ರಿವಾಲ್ ಅವರನ್ನೂ ಬಿಜೆಪಿ ಸರ್ಕಾರ ಜೈಲಿಗಟ್ಟಿದೆ. ಈ ಮೂಲಕ ಹಿಂದುಳಿದ ವರ್ಗದವರ ವಿರುದ್ಧ ನಿರಂತರ ದೌರ್ಜನ್ಯ ನಡೆಯುತ್ತಿದೆ.

ಹಿಂದುಳಿದ ವರ್ಗದವರು ರಾಜಕೀಯ ಶಕ್ತಿಯಾಗಿ ಬೆಳೆಯುವುದು ಬಿಜೆಪಿಗೆ ಇಷ್ಟವಿಲ್ಲ, ಹಿಂದುಳಿದ ವರ್ಗದ ಯುವಕರ ಕೈಗೆ ತ್ರಿಶೂಲ, ತಲವಾರು, ಕೇಸರಿ ಶಾಲು ಕೊಟ್ಟು ಬೆಂಕಿ ಹಚ್ಚುವ ಕೆಲಸಕ್ಕೆ ಬಳಸಿ, ಅವರ ಮೇಲೆ ಕೇಸ್ ಹಾಕಿಸಿ ಮೂಲೆಗೆ ತಳ್ಳಲು ಬಳಸುವ ಆಯುಧಗಳು ಮಾತ್ರ. ಈ ಸತ್ಯವನ್ನು ಸ್ವತಃ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹಿಂದೂ, ಹಿಂದುತ್ವ ಎನ್ನುತ್ತಲೇ ಹಿಂದುಳಿದವರನ್ನು ಹಿಂದಕ್ಕೆ ತಳ್ಳುವ ಹುನ್ನಾರವನ್ನು ಯುವ ಸಮುದಾಯ ಅರಿಯಬೇಕು.

ಚುನಾವಣೆ ಸಂದರ್ಭ ಮಾತ್ರ ಹಿಂದುಳಿದ ಸಮಾಜದ ಬಗ್ಗೆ, ನಾರಾಯಣ ಗುರುಗಳ ಬಗ್ಗೆ ಬಿಜೆಪಿಗೆ ನೆನಪು ಬರುತ್ತದೆ. ಗಣರಾಜ್ಯೋತ್ಸವ ಪರೇಡ್ ನಿಂದ ನಾರಾಯಣ ಗುರುಗಳ ಟ್ಯಾಬ್ಲೋ ರಿಜೆಕ್ಟ್ ಅಯಿತು. 10ನೇ ತರಗತಿ ಸಮಾಜ ವಿಜ್ಞಾನದಿಂದ ನಾರಾಯಣ ಗುರುಗಳ ಪಾಠ ತೆಗೆಯುವ ಕೆಲಸ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅಪಮಾನ ಮಾಡಿದ್ದು ಮಾತ್ರ ಅಲ್ಲ ಇಡೀ ಸಮಾಜಕ್ಕೆ ಅವಮಾನ ಮಾಡುತ್ತಾ ಬಂದರು. ಇದೀಗ ಬ್ರಹ್ಮಶ್ರೀ ನಾರಾಯಣ ಗುರುಗಳ ಕ್ಷೇತ್ರದಲ್ಲಿ ಕೆಲಸ ಮಾಡಿದ ವ್ಯಕ್ತಿ ಚುನಾವಣೆಗೆ ನಿಂತಾಗ ಎಲ್ಲಿ ಬಿಲ್ಲವ ಸಮಾಜ ಕೈ ಬಿಡುತೊ ಅನ್ನುವ ಆತಂಕ ಎದುರಾದಾಗ ನಾರಾಯಣ ಗುರುಗಳಿಗೆ ಗೌರವ ಕೊಡುವ ನೆಪದಲ್ಲಿ ಸಮಾಜಕ್ಕೆ ಮತ್ತೊಮ್ಮೆ ಮಂಕು ಬೂದಿ ಎರೆಚುವ ಕೆಲಸ ಮಾಡುತ್ತಿದ್ದಾರೆ. ಕೋಟಿ ಚೆನ್ನಯ್ಯರು ಪುಂಡರು ಎಂದು ಹೇಳಿದ ವ್ಯಕ್ತಿ ಇವತ್ತಿಗೂ ಬಿಜೆಪಿಯಲ್ಲಿ ಇದ್ದಾರೆ. ಬಿಲ್ಲವ ಸಮಾಜದ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿಗೆ ನೇರವಾಗಿ ಬಿಜೆಪಿ ಬೆಂಬಲ ನೀಡುತ್ತಿದೆ.

ಯಾವ ನೈತಿಕತೆಯಿಂದ ಬಿಜೆಪಿಯವರು ಕೋಟಿ ಚೆನ್ನಯ್ಯರ, ನಾರಾಯಣ ಗುರುಗಳ ಫೋಟೊಗಳನ್ನು ಬಳಕೆ ಮಾಡುತ್ತಿದ್ದಾರೆ.? ಅವಕಾಶ ಇದ್ದಾಗ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರು ಇಡದೆ ಇದೀಗ ಹೆಸರು ಇಡುತ್ತೇವೆ ಎಂದು ನಾಟಕವಾಡುತ್ತಿದ್ದಾರೆ. ಮತ್ತೆ ಸಮಾಜದ ದಾರಿ ತಪ್ಪಿಸಲು ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆಯ ಎಂಬ ನಾಟಕ ನಡೆಯುತ್ತಿದೆ. ಬಿಲ್ಲವ ಸಮಾಜವನ್ನು ಬಿಜೆಪಿ ತುಳಿಯುತ್ತಾ ಬರುತ್ತಿದೆ ಅನ್ನುವ ಸತ್ಯವನ್ನು ಬಿಲ್ಲವ ಮುಖಂಡರೇ ಹೇಳುತ್ತಿದ್ದಾರೆ. ಇನ್ನಾದರೂ ಬಿಲ್ಲವರು ಎಚ್ಚೆತ್ತು ಕೆೊಳ್ಳದಿದ್ದಲ್ಲಿ ರಾಜಕೀಯವಾಗಿ ಬಿಲ್ಲವರು ಅಧೋಗತಿಗೆ ತಲ್ಲಲ್ಪಡುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಕೆಲವರ್ಗದ ಜನರು ಒಗ್ಗಟ್ಟಾಗಿ ಎಚ್ಚರಿಕೆಯ ಹೆಜ್ಜೆಯನ್ನಿಬೇಕಾಗಿದೆ.