200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿ, ಸನ್ಯಾಸತ್ವ ಸ್ವೀಕರಿಸಿದ ಗುಜರಾತ್ ದಂಪತಿ

ರಾಷ್ಟ್ರೀಯ

ಗುಜರಾತ್ ಉಧ್ಯಮಿ ಸಬರ್ಕಾಂತ ಜಿಲ್ಲೆಯ ಹಿಮತ್‌ನಗರ ನಿವಾಸಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ಮುಂದಾಗಿದ್ದು, ಇದಕ್ಕಾಗಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಏಪ್ರಿಲ್ 22 ರಂದು ಹಿಮತ್‌ನಗರದಲ್ಲಿ 35 ಜನರು ಸನ್ಯಾಸ ಸ್ವೀಕರಿಸಲಿದ್ದಾರೆ.

ಹಿಂದಿನ ಕಾಲದಲ್ಲಿ ಹೆಚ್ಚಾಗಿ ಅವಿದ್ಯಾವಂತರು ಮಾತ್ರ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸೇರಿದಂತೆ ಸಾಕಷ್ಟು ಜನರು ಸನ್ಯಾಸತ್ವದ ಕಡೆಗೆ ವಾಲುತ್ತಿದ್ದಾರೆ. ತಮ್ಮ 200 ಕೋಟಿ ರೂ. ಆಸ್ತಿಯನ್ನು ದಾನ ಮಾಡುವ ಮೂಲಕ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ ಗುಜರಾತ್ ಉಧ್ಯಮಿ. ಸಬರ್ಕಾಂತ ಜಿಲ್ಲೆಯ ಹಿಮತ್‌ನಗರ ನಿವಾಸಿ ಉದ್ಯಮಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ಮುಂದಾಗಿದ್ದು, ಇದಕ್ಕಾಗಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ವಿಚಿತ್ರವೆಂದರೆ ಎರಡು ವರ್ಷಗಳ ಹಿಂದಷ್ಟೇ ದಂಪತಿಯ ಮಗ ಮತ್ತು ಮಗಳು ಐಷಾರಾಮಿ ಜೀವನವನ್ನು ತ್ಯಜಿಸಿ ದೀಕ್ಷೆ ತೆಗೆದುಕೊಂಡಿದ್ದಾರೆ. ಇದೀಗ ತಂದೆ-ತಾಯಿ ಕೂಡ ದೀಕ್ಷೆ ಪಡೆದುಕೊಂಡಿದ್ದಾರೆ.

ಭವೇಶ್ ಭಂಡಾರಿ ಅವರು ಜೈನ ಸಮುದಾಯದ ಸನ್ಯಾಸಿಗಳು ಮತ್ತು ಗುರುಗಳನ್ನು ಆರಾಧಿಸುತ್ತಾರೆ. ಅವರ ಮಗ ಮತ್ತು ಮಗಳು ಎರಡು ವರ್ಷಗಳ ಹಿಂದೆ ಸನ್ಯಾಸ ತೆಗೆದುಕೊಂಡಿದ್ದಾರೆ. 2022 ರಲ್ಲಿ ಅವರ ದೀಕ್ಷಾ ನಂತರ, ಭಾವೇಶ್ ಭಾಯ್ ಮತ್ತು ಅವರ ಪತ್ನಿ ಈಗ ಲೌಕಿಕ ಜೀವನವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಭವೇಶ್ ಭಾಯ್ ಭಂಡಾರಿ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ಎಲ್ಲಾ ಸೌಕರ್ಯಗಳೊಂದಿಗೆ ಬೆಳೆದವರು. ಆದರೆ ಈಗ 200 ಕೋಟಿ ರೂ. ಅಧಿಕ ಮೌಲ್ಯದ ಸಂಪತ್ತನ್ನು ತ್ಯಜಿಸಿ ಸನ್ಯಾಸತ್ವ ಮಾರ್ಗದಲ್ಲಿ ನಡೆಯಲು ನಿರ್ಧರಿಸಿದ್ದಾರೆ