ಕೃಷ್ಣಾಪುರ, ಕಾಟಿಪಳ್ಳ ವಾರ್ಡ್ ಗಳಲ್ಲಿ ನೀರಿಗೆ ಆಹಾಕಾರ; ಸಂಜೆಯ ಹೊತ್ತಿಗೆ ನೀರು ಪೂರೈಸುವ ಭರವಸೆ, ಇಲ್ಲದಿದ್ದರೆ ಪಾಲಿಕೆ ಮುಂಭಾಗ ಖಾಲಿ ಕೊಡಗಳ ಸಹಿತ ಧರಣಿ: ಮುನೀರ್ ಕಾಟಿಪಳ್ಳ

ಕರಾವಳಿ

ಸುರತ್ಕಲ್ ವಲಯದ ಕೃಷ್ಣಾಪುರ, ಕಾಟಿಪಳ್ಳ ವಾರ್ಡ್ ಗಳಿಗೆ ಸತತ ಐದು ದಿನಗಳಿಂದ ನಗರ ಪಾಲಿಕೆ ಕುಡಿಯುವ ನೀರು ಪೂರೈಸದೆ ಬೇಜವಾಬ್ದಾರಿ ಮೆರೆದ ಕಾರಣ ಬಹಿರಂಗಗೊಂಡಿದೆ. ಜಲಸಿರಿ ಯೋಜನೆಯ ಗುತ್ತಿಗೆದಾರರು ನಿರ್ಲಕ್ಷ್ಯದಿಂದ ಕಾಮಗಾರಿ ನಡೆಸಿ ಬಿರು ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ ಜಾಲದ ಪ್ರಧಾನ ಕೊಳವೆಯೊಂದನ್ನು ಒಡೆದು ಹಾಕಿದೆ. ನಗರ ಪಾಲಿಕೆ ಅಧಿಕಾರಿಗಳೂ ಈ ಕುರಿತು ಜಲಸಿರಿ ಗುತ್ತಿಗೆದಾರರಿಗೆ ಸರಿಯಾದ ಎಚ್ಚರಿಕೆ ಕೊಟ್ಟು ತಕ್ಷಣವೇ ಕೊಳವೆ ರಿಪೇರಿಗೆ ಕ್ರಮ ಕೈಗೊಳ್ಳದಿರುವುದರಿಂದ ಈ ಭಾಗದ ಜನ ಕುಡಿಯುವ ನೀರಿನ ಪೂರೈಕೆ ಇಲ್ಲದೆ ತತ್ತರಿಸುವಂತಾಗಿದೆ. ಕನಿಷ್ಟ ಟ್ಯಾಂಕರ್ ಗಳ ಮೂಲಕವೂ ನೀರು ಪೂರೈಸದ ಈ ಅಧಿಕಾರಿಗಳ ಮೇಲೆ ಸರಿಯಾದ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಳ್ಳಬೇಕು. ಜಲಸಿರಿ, ಕೆಯುಐಡಿಎಫ್ ಸಿ ಗುತ್ತಿಗೆದಾರರ ನಿರ್ಲಕ್ಷ್ಯದ ಕಾಮಗಾರಿಗಳ ಮೇಲೂ ಕ್ರಮಗಳು ಆಗಬೇಕು.

ಬೆಳಗ್ಗೆಯಿಂದ ಸತತವಾಗಿ ಬೆನ್ನು ಹತ್ತಿದ ಪರಿಣಾಮ ಕೊಳವೆ ರಿಪೇರಿ ಮುಗಿಸಿ ಸಂಜೆಯ ಹೊತ್ತಿಗೆ ನೀರು ಪೂರೈಸುವ ಭರವಸೆ ದೊರಕಿದೆ. ಇಲ್ಲದಿದ್ದರೆ ನಾಳೆ ಪಾಲಿಕೆ ಮುಂಭಾಗ ಖಾಲಿ ಕೊಡಗಳ ಸಹಿತ ಧರಣಿ ಆಯೋಜಿಸಲಾಗುವುದು.

ಪಾಲಿಕೆಯ ಸುರತ್ಕಲ್ ವಲಯದ ಇಂಜಿನಿಯರ್ ಗಳು, ಆಧಿಕಾರಿಗಳು ದಪ್ಪ ಚರ್ಮದವರು. ಜನರೊಂದಿಗೆ ದುರಹಂಕಾರದಿಂದ ವರ್ತಿಸುವ ಇವರ ನಡವಳಿಕೆ ಹಲವು ಭಾರಿ ಗಮನಕ್ಕೆ ಬಂದಿದೆ. ಇನ್ನು ಕಾಟಿಪಳ್ಳ, ಕೃಷ್ಣಾಪುರ ಭಾಗದ ಕಾರ್ಪೊರೇಟರ್ ಗಳು ಬಪ್ಪನಾಡಿನ ಡೋಲು ಗುದ್ದಲು ಮಾತ್ರ ಲಾಯಕ್ಕು. ಈ ಭಾಗದ ಖಾಸಗಿ ಭಾವಿಗಳಿಂದ ಬರಗಾಲದ ಈ ಕಾಲದಲ್ಲೂ mrpl, hpcl ಗಳಿಗೆ ಅಕ್ರಮವಾಗಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಆಗುತ್ತಿದ್ದರೂ ಇವರದ್ದು ಮೌನ ವೃತ, ಅಥವಾ ಭ್ರಷ್ಟ ಅಧಿಕಾರಿಗಳು, ಅಕ್ರಮ ನೀರು ಸರಬರಾಜು ದಂಧೆಯವರ ಜೊತೆಗೆ “ಗೆಳೆತನ”