ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೆ ಸಿಂಧಿಯಾ ಮತ್ತೆ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ

ರಾಷ್ಟ್ರೀಯ

ಅಂದು ರಾಜಕೀಯದಲ್ಲಿ ನಿಷ್ಠೆ, ಗೌರವ ಇತ್ತು. ಇಂದು ಮೊದಲು ನಡೆಯಲು ಕಲಿಸಿದವರ ಬೆರಳನ್ನೇ ಕಡಿಯಲು ಬಯಸುತ್ತಿದ್ದಾರೆ: ವಸುಂಧರಾ ರಾಜೇ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೆ ಸಿಂಧಿಯಾ ಮತ್ತೆ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ನೀಡಿದ್ದಾರೆ. ಸುಂದರ್‌ ಸಿಂಗ್‌ ಭಂಡಾರಿ ಚಾರಿಟೇಬಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಾಗವಹಿಸಿ, ನಿಷ್ಠೆ ಮತ್ತು ರಾಜಕೀಯ ಬೆಳವಣಿಗೆ ಕುರಿತು ಅವರು ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ಭಾರೀ ಅಲ್ಲೊಲ್ಲ ಕಲ್ಲೊಲ ಸೃಷ್ಟಿಸಿದೆ. ರಾಜಕೀಯದಲ್ಲಿ ಬಡ್ತಿ ಕೊಡುವ ವ್ಯಕ್ತಿಯನ್ನು ಗೌರವಿಸುತ್ತಿದ್ದ ನಿಷ್ಠೆಯ ಕಾಲವೊಂದಿತ್ತು. ಆದರೆ, ಈಗಿನ ಕಾಲದಲ್ಲಿ ಹಾಗಿಲ್ಲ. ಇಂದು ಜನರು ಮೊದಲು ನಡೆಯಲು ಕಲಿಸಿದವರ ಬೆರಳನ್ನೇ ಕಡಿಯಲು ಬಯಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಅಸ್ಸಾಂ ರಾಜ್ಯಪಾಲ ಹಾಗೂ ಮಾಜಿ ಸಚಿವ ಗುಲಾಬ್‌ ಚಂದ್‌ ಕಟಾರಿಯಾ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಟಾರಿಯಾ ಅವರು ವೇದಿಕೆಯಲ್ಲಿದ್ದ ಕೆಲವರೊಂದಿಗೆ ವಾಗ್ವಾದ ನಡೆಸಿದರು. ಜನಸಂಘದ ಸಂಸ್ಥಾಪಕ ಸದಸ್ಯ ಸುಂದರ್‌ ಸಿಂಗ್‌ ಭಂಡಾರಿಯವರ ಪುಣ್ಯತಿಥಿ ಮತ್ತು ಸಂಸ್ಥಾಪಕ ಡಾ. ಶ್ಯಾಮ ಪ್ರಸಾದ್‌ ಮುಖರ್ಜಿಯವರ ಹುತಾತ್ಮ ದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು