ನಟ ದರ್ಶನ್‌ಗೆ ರಾಜಾತೀಥ್ಯ ನೀಡಲು ಜೈಲಲ್ಲಿ ಎರಡು ರೌಡಿ ಗ್ಯಾಂಗ್ ಗಳ ಮದ್ಯೆ ಪೈಪೋಟಿ.!

ರಾಜ್ಯ

ಪರಪ್ಪನ ಅಗ್ರಹಾರದ ಜೈಲಲ್ಲಿ ಮುದ್ದೆ ಮುರಿಯುತ್ತಿರುವ ಆರೋಪಿ ದರ್ಶನ್‌ಗೆ ರಾಜಾತೀಥ್ಯ ನೀಡಲು ಎರಡು ರೌಡಿ ಗ್ಯಾಂಗ್ ಗಳ ಮದ್ಯೆ ಪೈಪೋಟಿ ಶುರುವಾಗಿದೆ. ಆರೋಪಿ ದರ್ಶನ್‌ರನ್ನು ನಾವು ನೋಡಿ ಕೊಡ್ತೀವಿ.. ಅಂತಾ ಈ ಎರಡು ರೌಡಿ ಗ್ಯಾಂಗ್‌ಗಳು ಕಾಂಪಿಟೇಷನ್‌ಗೆ ಇಳಿದಿದೆಯಂತೆ. ವಿಲ್ಸನ್ ಗಾರ್ಡನ್ ನಾಗ ಮತ್ತು ನಟೋರಿಯಸ್ ರೌಡಿ ಸೈಕಲ್ ರವಿ ಗ್ಯಾಂಗ್‌ ನಡುವೆ ಈ ಪೈಪೋಟಿ ಶುರುವಾಗಿದೆ.

ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲೇ ಇರುವ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಜೈಲು ಆತಿಥ್ಯ ವಹಿಸಿಕೊಳ್ಳಲು ಮುಂದಾದರೆ ಇತ್ತ ಸೈಕಲ್ ರವಿ ಹೊರಗಡೆ ಇದ್ದು, ಅಲ್ಲಿಯೇ ಇರುವ ರವಿ ಹುಡುಗರು, ತಾವು ದರ್ಶನ್ ನ ನೋಡಿಕೊಳ್ತಿವಿ ಅಂತಾ ಪೈಪೋಟಿಗೆ ಇಳಿದಿದ್ದಾರಂತೆ. ಇನ್ನು ಇದಕ್ಕಾಗಿ ರವಿಯ ಬಂಟ ಹಳೇ ಕೇಸಲ್ಲಿ ಜೈಲು ಸೇರೋ ಸಾಧ್ಯತೆ ಕೂಡ ಇದೆ ಅಂತ ಹೇಳಲಾಗುತ್ತಿದೆ.

ಈ ಹಿಂದೆ 2011ರಲ್ಲಿ ದರ್ಶನ್ ಪತ್ನಿ ಮೇಲಿನ ಹಲ್ಲೆ ಕೇಸಿನಲ್ಲಿ ಜೈಲು ಪಾಲಾಗಿದ್ದಾಗ, ಇದೇ ಸೈಕಲ್ ರವಿ ಅಂದು ನಟ ದರ್ಶನ್‌ಗೆ ಜೈಲಿನಲ್ಲಿ ಆತಿಥ್ಯ ನೀಡಿದ್ದ. ಅದೇ ರೀತಿ ಈಗಲೂ ತಾನೇ ನೋಡಿಕೊಳ್ಳುತ್ತೇನೆ ಎಂದು ಸೈಕಲ್ ರವಿ ಗ್ಯಾಂಗ್ ಮುಂದಾಗಿದೆಯಂತೆ. ಆದರೆ ವಿಲ್ಸನ್ ಗಾರ್ಡನ್ ನಾಗ ಜೈಲಲ್ಲಿದ್ದು, ನಾನಿದ್ದೀನಿ, ನಿಮಗೆ ಏನೆಲ್ಲಾ ಅತಿಥ್ಯ ಬೇಕು ಆ ಜವಾಬ್ದಾರಿ ನನ್ನದು ಅಂತಾ ಮುಂದೆ ಬಂದಿದ್ದಾನಂತೆ ಎಂಬ ಮಾಹಿತಿಗಳು ಲಭ್ಯವಾಗಿದೆ.