ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಖಂಡಿಗ-ಸುರಿಬೈಲು ಸಂಪರ್ಕದ ಕಾಂಕ್ರೀಟ್ ರಸ್ತೆ ಕುಸಿತವಾಗಿದೆ. ಪ್ರತಿನಿತ್ಯ ನೂರಾರು ಸಾರ್ವಜನಿಕ ವಾಹನಗಳು, ಶಾಲಾ ಮಕ್ಕಳ ವಾಹನಗಳು ಮಂಚಿ, ಸುರಿಬೈಲು ಕಡೆಗೆ ಇದೇ ರಸ್ತೆ ಮೂಲಕ ಸಾಗುತ್ತಿದ್ದುವು. ಮೂರು ವರ್ಷಗಳ ಹಿಂದಷ್ಟೇ ಕಾಂಕ್ರಿಟೀಕರಣ ಮಾಡಿದ್ದ ಸುರಿಬೈಲು-ಖಂಡಿಗ ಏಕೈಕ ಸಂಪರ್ಕ ರಸ್ತೆ ಕುಸಿತವಾಗಿದೆ. ಇದರಿಂದಾಗಿ ಇನ್ಮುಂದೆ ಇಲ್ಲಿನ ಶಾಲಾ ಮಕ್ಕಳು, ಸಾರ್ವಜನಿಕರು ನಾಲ್ಕು ಕಿಲೋ ಮೀಟರ್ ಸುತ್ತು ಬಳಸಿ ಮಂಚಿ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ.

ರಸ್ತೆ ಕುಸಿಯುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲಾಗುತ್ತಿದ್ದು ಮೋರಿ ನಿರ್ಮಾಣದ ಸಂದರ್ಭ ನಡೆದ ಕಳಪೆ ಕಾಮಗಾರಿಯೇ ರಸ್ತೆ ಕುಸಿತಕ್ಕೆ ಕಾರಣವೆಂದು ಜನ ಆರೋಪಿಸುತ್ತಿದ್ದಾರೆ.
