ಅರಣ್ಯ ಇಲಾಖೆಯ ಉಕ್ಕುಡ ವಲಯ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿನ ದೂಪದ ಮರಗಳಿಂದ ಅಕ್ರಮವಾಗಿ ಹಾಲುಮಡ್ಡಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಂಬಳೆಬೆಟ್ಟು ಬಳಿ ವಶಕ್ಕೆ ಪಡೆದು ಬಂಧಿಸಿದೆ.
ಬಂಟ್ವಾಳ ತಾಲೂಕು ಕೆದಿಲ ಪಾಟ್ರಕೋಡಿಯ ಉಮ್ಮರ್ ಫಾರೂಕ್(44), ಮಹಮ್ಮದ್ ಹಸೈನಾರ್ (30), ತಾಳಿಪಡ್ಪು ಉಮ್ಮರ್ ಫಾರೂಕ್(26), ಅಲಿ ಹೈದರ್ ಎಂ.ಕೆ.ಎಂಬವರನ್ನು ಬಂಧಿಸಿ ಆಟೋರಿಕ್ಷಾ ಸಹಿತ 1.05ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ.ನೇತೃತ್ವದಲ್ಲಿ ದಾಳಿ ನಡೆದಿದೆ. ಉಪ ವಲಯ ಅರಣ್ಯಾಧಿಕಾರಿ ವೀರಣ್ಣ ಪ್ರಕಾಶ್, ಗೌರೀಶ್, ಅರಣ್ಯ ಪಾಲಕ ಸತೀಶ್, ಚಾಲಕರಾದ ರಾಜೇಶ್, ತೇಜ ಪ್ರಸಾದ್, ಸಿಬ್ಬಂದಿ ವಿನೋದ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
