ಬಂಟ್ವಾಳ: ಅಕ್ರಮವಾಗಿ ಪಡಿತರ ದಾಸ್ತಾನು ಪ್ರಕರಣ: ಆಹಾರ ನಿರೀಕ್ಷಕರ ಮತ್ತು ಪೊಲೀಸರ ಜಂಟಿ ದಾಳಿ: 64 ಗೋಣಿ ಚೀಲ ಅಕ್ಕಿ, ಇತರ ಸೊತ್ತು ವಶ; ಪ್ರಕರಣ ದಾಖಲು

ಕರಾವಳಿ

ಬಂಟ್ವಾಳ: ಗೊಳ್ತಮಜಲು ಗ್ರಾಮದ ಪಟ್ಟೆಕೋಡಿ ಎಂಬಲ್ಲಿರುವ ಅಂಗಡಿ ಕಟ್ಟಡವೊಂದರಲ್ಲಿ, ಪಡಿತರ ಅಕ್ಕಿಯನ್ನು ಆಕ್ರಮವಾಗಿ ದಾಸ್ತಾನು ಇಡಲಾಗಿರುವ ಬಗ್ಗೆ ಮಾಹಿತಿ ಮೇರೆಗೆ, ಬಂಟ್ವಾಳ ತಾಲೂಕು ಕಛೇರಿಯ ಆಹಾರ ನಿರೀಕ್ಷಕರು ಹಾಗೂ ಬಂಟ್ವಾಳ ನಗರ ಠಾಣಾ ಪೊಲೀಸರ ಸಹಕಾರದೊಂದಿಗೆ ಜಂಟಿ ದಾಳಿ ನಡೆಸಿ, ಬಂಟ್ವಾಳ, ಗೋಳ್ತಮಜಲು ನಿವಾಸಿ ಉಮ್ಮರಬ್ಬ ಎಂಬವರು, ಕಟ್ಟಡವೊಂದರಲ್ಲಿ 64 ಗೋಣಿ ಚೀಲಗಳಲ್ಲಿ 58,288/-ರೂ. ಮೌಲ್ಯದ 2103.35 ಕೆ.ಜಿ ಬೆಳ್ತಿಗೆ ಅಕ್ಕಿ ಮತ್ತು 467.10 ಕೆ.ಜಿ ಕುಚ್ಚಲಕ್ಕಿಯನ್ನು ಆಕ್ರಮವಾಗಿ ಸಂಗ್ರಹಿಸಿಟ್ಟಿು, ಕೆಎ.19.ಡಿ.3896 ಎಂಬ ಆಟೋರಿಕ್ಷಾದಲ್ಲಿ ಸಾಗಾಟ ಮಾಡಲು ಸಿದ್ದತೆ ನಡೆಸಿರುವುದು ಕಂಡು ಬಂದಿರುತ್ತದೆ.

ಈ ಕೃತ್ಯದಲ್ಲಿ ಆರೋಪಿಗಳ ಜೊತೆಗೆ ಬಂಟ್ವಾಳ, ಗೋಳ್ತಮಜಲು ನಿವಾಸಿ ರಫೀಕ್ ಎಂಬಾತನೂ ಭಾಗಿಯಾಗಿದ್ದು, ಸ್ಥಳದಲ್ಲಿದ್ದ ಅಕ್ಕಿಯ ಗೋಣಿ ಚೀಲಗಳನ್ನು, ಸಾಗಾಟ ಮಾಡಲು ಬಳಸಿದ ಆಟೋರಿಕ್ಷಾ, ತೂಕದ ಯಂತ್ರ, ಖಾಲಿ ಗೋಣಿ ಚೀಲಗಳು ಸೇರಿದಂತೆ ಇತರೆ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡು, ಆರೋಪಿಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.