ಮಂಗಳೂರು: ಪ್ರಸಿದ್ಧ ನ್ಯಾಯವಾದಿ ಯು. ಮುಹಮ್ಮದ್ ಆಲಿ ವಿಧಿವಶ

ಕರಾವಳಿ

ಮಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿ ಪ್ರಸಿದ್ಧರಾಗಿದ್ದ ಯು. ಮುಹಮ್ಮದ್ ಆಲಿ ಇಂದು ಮುಂಜಾನೆ ಹೊಸದಿಲ್ಲಿಯಲ್ಲಿ ವಿಧಿವಶರಾಗಿದ್ದಾರೆ.

ಜಡ್ಜ್ ಉಳ್ಳಾಲ ಹಮ್ಮಬ್ಬ ರವರ ಸುಪುತ್ರರಾಗಿರುವ ಮುಹಮ್ಮದ್ ಆಲಿ ನ್ಯಾಯವಾದಿ ಜೊತೆಗೆ ಸಾಮಾಜಿಕ ಸೇವೆ ಹಾಗೂ ರಾಜಕೀಯ ವಲಯದಲ್ಲೂ ಗುರುತಿಸಿಕೊಂಡಿದ್ದರು. ಮುಸ್ಲಿಂ ಲೀಗ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಮುಹಮ್ಮದ್ ಆಲಿ ಚುನಾವಣೆಯಲ್ಲೂ ಕೂಡ ಸ್ಪರ್ಧಿಸಿದ್ದರು.

ಮಂಗಳೂರಿನ ಪ್ರಸಿದ್ಧ ನ್ಯಾಯವಾದಿಯಾಗಿದ್ದ ಮುಹಮ್ಮದ್ ಆಲಿ ಕಾರ್ಯ ನಿಮಿತ್ತ ದೆಹಲಿಗೆ ತೆರಳಿದ್ದರು. ಇಂದು ಮುಂಜಾನೆ ಫಜರ್ ನಮಾಜಿಗೆ ಮಸೀದಿಯಲ್ಲಿದ್ದ ಸಂದರ್ಭ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.