ಸಾಮಾಜಿಕ ಜಾಲತಾಣವಾದ mr_a_titude ಎಂಬ ಇನ್ ಸ್ಟಾ ಗ್ರಾಮ್ ಪೇಜಿನಲ್ಲಿ ಬಜಪೆ ಪೊಲೀಸರಿಂದ ಕೊಲೆ ಆರೋಪಿಗಳಿಗೆ ರಾಜಾತಿಥ್ಯ ಅನ್ನುವ ಅವಹೇಳನಕಾರಿ ಬರಹ ಪ್ರಕಟಿಸಿ ಸಮಾಜದಲ್ಲಿ ದುಷ್ಕೃತ್ಯವನ್ನು ಪ್ರೇರೇಪಿಸುವ ಬರಹ ಪ್ರಕಟಿಸಿದ ಆರೋಪದಲ್ಲಿ ಅಭಿಷೇಕ್ ಅನ್ನುವಾತನನ್ನು ಬಜಪೆ ಪೊಲೀಸರು ಅರೆಸ್ಟ್ ಮಾಡುವಲ್ಲಿ ಸಫಲರಾಗಿದ್ದಾರೆ.
mr_a_titude ಅನ್ನುವ ಇನ್ ಸ್ಟಾ ಗ್ರಾಮ್ ಪೇಜಿನಲ್ಲಿ ಹೋಟೆಲ್ ನಿಸರ್ಗ ಎಂಬ ಪೋಟೋವನ್ನು ಹಾಕಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಆರೋಪಿಗಳಿಗೆ ಬಜಪೆ ಪೊಲೀಸರಿಂದ ರಾಜಾತಿಥ್ಯ..ದಿನಾಲೂ ಹೋಟೆಲ್ ನಿಸರ್ಗ ದಿಂದ ಬೀಫ್ ಊಟವನ್ನು ನೀಡುತ್ತಿದ್ದಾರೆ.. ಜನರನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆ ಅಪರಾಧಿಗಳೊಟ್ಟಿಗೆ ಸೇರಿಕೊಂಡು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ.. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಇಲ್ಲಿ ಪೊಲೀಸ್ ನವರ ಮೇಲೆ ಇಟ್ಟಿರುವ ಭರವಸೆ ಸುಳ್ಳಾಗುತ್ತಿದೆ ಎಂದು ಪ್ರಚೋದನಕಾರಿ ಸಂದೇಶವನ್ನು ಹರಿಯ ಬಿಡಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕಾಟಿಪಳ್ಳ ನಿವಾಸಿ ಅಭಿಷೇಕ್ ಎಂಬಾತನನ್ನು ಬಂಧಿಸಲಾಗಿದೆ. ಈತನ ಮೇಲೆ ಬಜ್ಪೆ ಠಾಣೆಯಲ್ಲಿ ಅ.ಕ್ರ. 84/2025 ಕಲಂ 353(1) (ಸಿ) 353(1) (ಸಿ), 353(2) ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅಭಿಷೇಕ್ ಈ ಹಿಂದೆ ಹಲವಾರು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿದ್ದು ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣ ದಾಖಲಾಗಿದೆ.
