ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ರಿ) ಮಂಗಳೂರು ಇದರ ಟ್ರಸ್ಟ್ ಉದ್ಘಾಟನೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ನಗರದ ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ಜರುಗಿತು. ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಮರ್ ಹೂಂ ಹಾಜಿ ಬಿ.ಎ ಮೊಹಿದ್ದೀನ್ ಅವರ ಕೊಡುಗೆಯನ್ನು ಸ್ಮರಿಸಿ ಕಾರ್ಯಕ್ರಮದ ವೇದಿಕೆಗೆ ಇಟ್ಟು ಒಂದು ಮಾದರಿಯುತ ಕಾರ್ಯಕ್ರಮ ನಡೆಸುವಲ್ಲಿ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಸಂಘ ಯಶಸ್ವಿಯಾಗಿದೆ.
ಕರ್ನಾಟಕ ರಾಜ್ಯದಲ್ಲಿ 37 ವಿಶ್ವವಿದ್ಯಾನಿಲಯಗಳಿವೆ. ರಾಜ್ಯದಲ್ಲೇ ಮುಸ್ಲಿಂ ಸಮುದಾಯದ ಏಕೈಕ ಕುಲಪತಿಯಾಗಿರುವವರು ಎ.ಎಂ. ಖಾನ್ ಅವರು. ಪ್ರಸ್ತುತ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾರೆ. ಇವತ್ತು ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೊಂದು ಮೆರುಗು ತಂದಿದ್ದಾರೆ. ಉದ್ಘಾಟನೆ ಕಾರ್ಯಕ್ರಮವೇ ವಿಶೇಷವಾಗಿತ್ತು. ಸಂಸ್ಥೆಯ ಎಲ್ಲಾ ಟ್ರಸ್ಟಿಗಳಿಗೆ ಶಾಲು ಹೊದಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ ಮಾಣಿ ಅವರು ನೂತನ ಶಿಕ್ಷಣ ನೀತಿಯ ಬಿಕ್ಕಟ್ಟು ಕುರಿತು ವಿಚಾರ ಮಂಡಿಸಿದರು. ಇವತ್ತಿನ ಪೀಳಿಗೆಗೆ ಎದುರಾಗಿರುವ ಆಪತ್ತಿನ ಕುರಿತು ಅತ್ಯಂತ ಸ್ಪುಟವಾಗಿ ವಿಚಾರ ಮಂಡಿಸಿದರು. ಬದ್ರುದ್ದೀನ್ ಕೆ ಮಾಣಿ ಅವರು ಮಾಹಿತಿ ಆಯೋಗದ ಆಯುಕ್ತದಂತಹ ದೊಡ್ಡ ಹುದ್ದೆ ಅಲಂಕರಿಸಿದ್ದು, ಈ ಸ್ಥಾನಕ್ಕೆ ಏರಿದ ರಾಜ್ಯದ ಏಕೈಕ ಮುಸ್ಲಿಂ ವ್ಯಕ್ತಿ, ಅದರಲ್ಲೂ ಬ್ಯಾರಿ ಸಮುದಾಯದವರು ಅನ್ನುವುದೇ ವಿಶೇಷ.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ ಮಾಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ ಎ ಗಫೂರ್, ಕರ್ನಾಟಕ ಸರಕಾರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಬಿ.ಎಂ ಹನೀಫ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಉಮರ್ ಯು ಎಚ್, ಮಾಜಿ ರಾಜ್ಯಸಭಾ ಸದಸ್ಯರು, ಯುನೈಟೆಡ್ ಲೀಗಲ್ ರಿಸರ್ಚ್ ಮತ್ತು ಜಸ್ಟಿಸ್ ಟ್ರಸ್ಟ್ ಅಧ್ಯಕ್ಷರಾದ ಬಿ. ಇಬ್ರಾಹಿಂ, ದ.ಕ ಮೀಫ್ ಕೇಂದ್ರ ಸಮಿತಿ ಅಧ್ಯಕ್ಷರಾದ ಮೂಸಬ್ಬ ಪಿ ಬ್ಯಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪತ್ರಕರ್ತ, ಟ್ರಸ್ಟ್ ಗೌರವಾಧ್ಯಕ್ಷರಾದ ಬಿ ಎಂ ಹನೀಫ್ ಬ್ಯಾರಿ ಭಾಷೆಯ ಸಂಶೋಧನಾ ಕ್ಷೇತ್ರದಲ್ಲಿ ಈವರೆಗೂ ಗಣನೀಯ ಸಾಧನೆ ಮಾಡಲು ಸಾಧ್ಯವಾಗಿಲ್ಲ. ತುಳು, ಕೊಂಕಣಿ ಭಾಷೆಗಳು ಸಂಶೋಧನೆ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದೆ. ಬ್ಯಾರಿ ಭಾಷೆಯ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಈ ಟ್ರಸ್ಟ್ ಇನ್ನಷ್ಟು ಪ್ರೇರಣೆಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಅಧ್ಯಕ್ಷರಾದ ಬಿ.ಎ ಮುಹಮ್ಮದ್ ಹನೀಫ್ ಬ್ಯಾರಿ ಸಂಶೋಧನಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯಲು ಟ್ರಸ್ಟ್ ರಚಿಸಲಾಗಿದೆ. ಇದು ಯಾವುದೇ ಪ್ರಚಾರಕ್ಕಾಗಿ ಸಂಘಟಿಸಿದ ಟ್ರಸ್ಟ್ ಅಲ್ಲ. ಯುವ ಸಮುದಾಯ ಟ್ರಸ್ಟ್ ನ ಭಾಗವಾಗಿ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ನೆರವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಎಂ.ಎಚ್. ಮಯ್ಯದ್ದಿ ಬ್ಯಾರಿ ಅಡ್ಡೂರು, ಬಾವಾ ಪದರಂಗಿ, ಬಶೀರ್ ಬೈಕಂಪಾಡಿ, ಬಿ.ಎ.ಮಹಮ್ಮದಾಲಿ, ಶಂಶುದ್ದೀನ್ ಮಡಿಕೇರಿ, ಎಮ್ ಬಿ ಅಬ್ದುಲ್ ನಝೀರ್ ಮಠ, ಅಬ್ದುಲ್ ಮಜೀದ್ ಕಣ್ಣೂರು, ರಿಯಾಝ್ ಹುಸೈನ್ ಬಂಟ್ವಾಳ, ಅಬ್ದುಲ್ ಸಲಾಂ ಅಬೂಬಕರ್ ತೋಡಾರ್, ಎಸ್ ಅಬ್ದುಲ್ ರಝಾಕ್ ಸೂರಿಂಜೆ, ಎನ್ ಇ ಮುಹಮ್ಮದ್ ಮಲ್ಲೂರು, ಅಬ್ದುಲ್ ಬಷೀರ್ ಮೊಂಟೇಪದವು, ಎಸ್ ಎ ಮುಹಮ್ಮದ್ ಕುಂಞಿ ಉಪ್ಪಿನಂಗಡಿ, ಮುಹಮ್ಮದ್ ಜಾಬೀರ್ ಜೋಕಟ್ಟೆ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಅತ್ಯಂತ ಗೌರವಪೂರ್ವಕವಾಗಿ ನಿರೂಪಿಸುವ ಮೂಲಕ ಮಾತಿನ ಮಲ್ಲ ಬಿ.ಎ ಮುಹಮ್ಮದಾಲಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಬಿ.ಎ ಸಂಶುದ್ದೀನ್ ಮಡಿಕೇರಿ ಸ್ವಾಗತಿಸಿದರು. ರಿಯಾಝ್ ಹುಸೈನ್ ವಕೀಲರು ಬಂಟ್ವಾಳ ಧನ್ಯವಾದಗೈದರು.
