ವ್ಯಾಪಾರದಲ್ಲಿ ಲಾಭ ನೀಡುತ್ತೇನೆ ಎಂದು ನಂಬಿಸಿ, ಲಕ್ಷಾಂತರ ರೂ. ಪಡೆದು ಮುಡಿಪು ನಿವಾಸಿ ಸಿದ್ದೀಕ್ ಪರಾರಿ. ದೂರು ದಾಖಲು

ವಿಟ್ಲ: ಬಿಸಿನೆಸ್ ನಲ್ಲಿ ಲಾಭ ನೀಡುತ್ತೇನೆ ಎಂದು ಅಮಾಯಕ ಯುವಕನನ್ನು ನಂಬಿಸಿ ಆತನಿಂತ ಲಕ್ಷಾಂತರ ರೂ. ಪಡೆದು ಇದೀಗ ಅಸಾಮಿ ಪರಾರಿಯಾಗಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಾಲೆತ್ತೂರು ನಿವಾಸಿ ಆಸೀಫ್ ಎಂಬಾತನಿಗೆ ಈ ಹಿಂದೆ ವಿದೇಶದಲ್ಲಿದ್ದ ವೇಳೆ ಸಿದ್ದೀಕ್ ವಿದ್ಯಾನಗರ ಮುಡಿಪು ಎಂಬಾತನ ಪರಿಚಯವಾಗುತ್ತದೆ. ಬಳಿಕ ಆತನ ಜತೆ ಆತ್ಮೀಯತೆಯಿಂದ ಒಡನಾಟ ಇಟ್ಟುಕೊಂಡಿರುತ್ತಾನೆ. ಬಳಿಕ ಆಸೀಫ್ ಊರಿಗೆ ಬಂದಿದ್ದು, ತದ ಬಳಿಕ ಅಸಾಮಿ ಸಿದ್ದೀಕ್ ವಿದ್ಯಾ ನಗರ ಕೂಡ ಊರಿಗೆ ಬಂದು, […]

Continue Reading

ಮಠಂದೂರು ಶಿಷ್ಯ ಫುಲ್ ಟೈಮ್ ರಾಜಕಾರಣಕ್ಕೆ..ಪುತ್ತಿಲ ಪರಿವಾರದಲ್ಲಿ ಶುರುವಾಯ್ತು ಢವ ಢವ..!

ವಿರೋಧಿಗಳ ಸೈಲೆಂಟ್ ಗೇಮ್ ಗೆ ಬಲಿಯಾದ್ರ ಪುತ್ತಿಲ. ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಇಮೇಜ್, ಶಕ್ತಿ ಇರುವುದು ಪುತ್ತೂರಿನಲ್ಲಿ. ಕಾರ್ಯಕರ್ತರ ದೊಡ್ಡ ದಂಡೇ ಇದೆ. ಅಂತಹ ಪುತ್ತೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಕಾಂಗ್ರೆಸ್ ವಿಜಯ ದುಂದುಭಿ ಬಾರಿಸಿತ್ತು. ಅದಕ್ಕೆಲ್ಲ ಕಾರಣವಾಗಿದ್ದು ಒಂದೇ ಒಂದು ಹೆಸರು. ಡೈನಾಮಿಕ್ ಇಮೇಜಿನ ಅರುಣ್ ಕುಮಾರ್ ಪುತ್ತಿಲ. ಒಂದು ಕಾರು ಅಲುಗಾಟದಿಂದ ರಾಜ್ಯಾಧ್ಯಕ್ಷ, ಸಂಸದ ಸ್ಥಾನವೂ ಹೊರಟು ಹೋಗಿತ್ತು. ಪುತ್ತಿಲ ಪರಿವಾರದ ಕಾರ್ಯಕರ್ತರ ಹವಾ ಆ […]

Continue Reading

ತನ್ನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಲೋಕಸೇವಾ ಆಯೋಗ ಯಾವುದೇ ಅಧಿಕಾರವಿಲ್ಲ: ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​

ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಅನರ್ಹಗೊಂಡಿರುವ ವಿವಾದಿತ ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ ಪ್ರಕರಣ ರಾಷ್ಟ್ರವ್ಯಾಪಿ ಸಖತ್​ ಸದ್ದು ಮಾಡಿತ್ತು. ಇದೀಗ ತನ್ನ ಅನರ್ಹತೆಗೆ ಸವಾಲೆಸೆದಿದ್ದು, ಕೇಂದ್ರ ಲೋಕಸೇವಾ ಆಯೋಗಕ್ಕೆ (UPSC) ತನ್ನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಯಾವುದೇ ಅಧಿಕಾರವಿಲ್ಲವೆಂದು ಹೇಳಿದ್ದಾರೆ. ತನ್ನ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ಗೆ ಪೂಜಾ ಉತ್ತರ ನೀಡಿದ್ದು, ತನ್ನನ್ನು ಅನರ್ಹಗೊಳಿಸುವ ಯಾವುದೇ ಅಧಿಕಾರ ಯುಪಿಎಸ್​ಸಿಗೆ ಇಲ್ಲ ಎಂದು ಹೇಳಿದ್ದಾರೆ. ಒಮ್ಮೆ ಪ್ರೊಬೇಷನರ್ […]

Continue Reading

ಎಂ.ಎಲ್.ಸಿ.ಐವನ್ ಡಿಸೋಜಾ ಮನೆಗೆ ಕಲ್ಲುತೂರಾಟ ಪ್ರಕರಣ; ಇಬ್ಬರು ಬಜರಂಗಿಗಳು ಅಂದರ್.

ರಾಜ್ಯಪಾಲರ ಮನೆಗೆ ನುಗ್ಗಿ ಬೇಕಾದೀತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ, ಎಂ.ಎಲ್.ಸಿ.ಐವನ್ ಡಿಸೋಜಾ ಮನೆಗೆ ತಡರಾತ್ರಿ ಕಲ್ಲುತೂರಾಟ ನಡೆಸಿ ಹಾನಿಗೊಳಿಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರಾಯಣ ಕೋಡಿ ನಿವಾಸಿ ರಾಘವ ಭಂಡಾರಿ ಪುತ್ರ ಭರತ್ ಯಾನೆ ರಕ್ಷಿತ್ ಮತ್ತು ಕೊಳ್ನಾಡು ಗ್ರಾಮದ ಕುಡ್ತಮುಗೇರು ಪರ್ತಿಪ್ಪಾಡಿ ನಿವಾಸಿ ಆನಂದ ಪೂಜಾರಿ ಪುತ್ರ ದಿನೇಶ್ ಬಂಧಿತ ಆರೋಪಿಗಳು. ರಾಜ್ಯಪಾಲರ ಮನೆಗೆ ನುಗ್ಗುತ್ತೇವೆಂದು ಐವಾನ್ ನೀಡಿರುವ ಹೇಳಿಕೆಯಿಂದ ಆಕ್ರೋಶಗೊಂಡು ರಾತ್ರಿ […]

Continue Reading

ಪತಿ ಅಂದುಕೊಂಡು ಪರ ಪುರುಷನೊಂದಿಗೆ ಸೆಕ್ಸ್‌.! ಕರೆಂಟ್‌ ಆನ್‌ ಮಾಡಿದಾಗ ಮಹಿಳೆ ಶಾಕ್.! ಪ್ರಕರಣ ದಾಖಲು

ಮಹಿಳೆಯೊಬ್ಬಳು ಮನೆಯಲ್ಲಿ ಮಲಗಿದ್ದಾಗ ವ್ಯಕ್ತಿಯೊಬ್ಬ ಎಂಟ್ರಿಯಾಗಿ ನಿದ್ದೆಯಲ್ಲಿ ಆತನೇ ಪತಿ ಎಂದುಕೊಂಡ ಮಹಿಳೆ ಆತನೊಂದಿಗೆ ಸೆಕ್ಸ್‌ ಮಾಡಿದ್ದಾಳೆ. ಪರ ಪುರುಷನೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ ಮೇಲೆ ಕೊಠಡಿಯಲ್ಲಿ ಕರೆಂಟ್‌ ಆನ್‌ ಮಾಡಿದ್ದು, ಈ ವೇಳೆ ಮಹಿಳೆಗೆ ತಾನು ಮಾಡಿರುವ ತಪ್ಪು ಅರಿವಿಗೆ ಬಂದಿದೆ. ಕೂಡಲೇ ಆಕೆ ಆರೋಪಿ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಿಸಿ ಜೈಲಿಗಟ್ಟಿದ್ದಾಳೆ. ಮುಂಬೈನ ಪೊವಾಯಿ ಎಂಬಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊವಾಯಿಯಲ್ಲಿ ಮಹಿಳೆ ಮನೆಯಲ್ಲಿ ತನ್ನ ಗಂಡನಿಗಾಗಿ […]

Continue Reading

ಮಂಗಳೂರು: ಕಾಂಗ್ರೆಸ್ ಮುಖಂಡ, ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆ ಡರೋಡೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನ; ಚಿನ್ನ, ನಗದು ವಶ

ಬಂಧಿತರ ಸಂಖ್ಯೆ 13 ಕ್ಕೆ ಏರಿಕೆ.. ಇನ್ನು ಮೂವರ ಬಂಧನ ಬಾಕಿಯಿದೆ ಜೂನ್ 21 ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟುವಿನಲ್ಲಿ ನಡೆದ ಕಾಂಗ್ರೆಸ್ ಮುಖಂಡ, ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ರ ಮನೆಗೆ ರಾತ್ರಿ 8 ಗಂಟೆಯ ಸುಮಾರಿಗೆ ಮುಸುಕುಧಾರಿಗಳು ಮನೆಗೆ ನುಗ್ಗಿ ಮನೆ ಮಂದಿಗೆ ಹಲ್ಲೆ ನಡೆಸಿ ನಗದು, ಚಿನ್ನ ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದರೊಂದಿಗೆ ಬಂಧಿತರ ಸಂಖ್ಯೆ 13ಕ್ಕೇರಿದೆ. ಕೇರಳ ತ್ರಿಶೂರ್ ನಿವಾಸಿಗಳಾದ ಡೆವಿನ್, ಗಾಡ್ವಿನ್, […]

Continue Reading

ರೇವತಿ ಸಂಪತ್​ ಎಂಬಿಬಿಎಸ್ ಓದುತ್ತಿದ್ದಾಗ ತನ್ನ ಸಹಪಾಠಿಯ ನಗ್ನ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ ಕಾಲೇಜಿನಿಂದ ಹೊರಹಾಕಲಾಗಿತ್ತು

ಇಂಥವರು ಮಾಡುವ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಯಾವುದೇ ಹುರುಳಿಲ್ಲ; ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆಯಬಾರದು. ಪುರುಷರು ಕೂಡ ಮನುಷ್ಯರೇ. ಕೇರಳದಲ್ಲಿ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಕರಾಳ ಮುಖ ಒಂದೊಂದಾಗಿ ಕಳಚಿಕೊಳ್ಳತ್ತಿದೆ. ಅನೇಕ ನಟಿಯರು ತಾವು ಎದುರಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತಿದ್ದು, ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಇತ್ತೀಚೆಗಷ್ಟೇ ನಟಿ ರೇವತಿ ಸಂಪತ, ನಟ ಸಿದ್ದಿಖ್​ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೀಗ ರೇವತಿ ಆರೋಪಕ್ಕೆ ಮಲಯಾಳಂ ಬಿಗ್​ಬಾಸ್​ ವಿಜೇತ ಅಖಿಲ್​ […]

Continue Reading

ವಿಟ್ಲ: ಮನೆ ಮೇಲೆ ಗುಡ್ಡವೊಂದು ಕುಸಿದು ಬಿದ್ದ ಘಟನೆ; ಮನೆ ಮಂದಿ ಅಪಾಯದಿಂದ ಪಾರು, ತಪ್ಪಿದ ಜೀವ ಹಾನಿ

ಭಾರೀ ಮಳೆಗೆ ಗುಡ್ಡವೊಂದು ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮನೆ ಮಂದಿ ಅಪಾಯದಿಂದ ಪಾರಾಗಿದ್ದು, ಮನೆಗೆ ಹಾನಿಯಾದ ಘಟನೆ ವಿಟ್ಲ ಕಸಬಾ ಗ್ರಾಮದ ಕುರುಂಬಳ ಎಂಬಲ್ಲಿ ನಡೆದಿದೆ. ಕುರುಂಬಳ ನಿವಾಸಿ ಕಲಂದರ್ ಅಲಿ ಅವರ ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ. ಅ ಸಮಯದಲ್ಲಿ ಕಲಂದರ್ ಅಲಿ ಸಹಿತ ಮನೆಯಲ್ಲಿ ಕುಟುಂಬದ ಏಳು ಮಂದಿ ಇದ್ದು, ಅವರು ಮನೆಯೊಳಗಡೆ ಇದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಈ […]

Continue Reading

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ; 35 ಡಿವೈಎಸ್ ಪಿ, 88 ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಆದೇಶ

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲಾಗಿದ್ದು, 35 ಡಿವೈಎಸ್ ಪಿ, 88 ಇನ್ಸ್ ಪೆಕ್ಟರ್ ಗಳನ್ನು ಪೊಲೀಸ್ ಇಲಾಖೆ ವರ್ಗಾವಣೆ ಮಾಡಿ ಆದೇಶ ನೀಡಿದೆ.ಎರಡು ವರ್ಷಗಳ ಕಾಲಾವಧಿ ನಿಯಮ ಜಾರಿಯಾದ ನಂತರ ಮೊದಲ ಬಾರಿಗೆ 35 ಡಿವೈಎಸ್ಪಿ ಮತ್ತು 88 ಇನ್ಸ್ಪೆಕ್ಟರ್ ಗಳನ್ನು ಪೊಲೀಸ್ ಇಲಾಖೆ ವರ್ಗಾವಣೆ ಮಾಡಿದೆ. ಇನ್ಸ್ಪೆಕ್ಟರ್ ಮೇಲ್ಪಟ್ಟದ ಅಧಿಕಾರಿಗಳ ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ ಎರಡು ವರ್ಷಗಳ ಕಾಲಾವಧಿ ನಿಗದಿಗೊಳಿಸಿ ನಿಯಮ ಜಾರಿ ಮಾಡಿದೆ. ಈ ನೀತಿಗೆ ಆಕ್ಷೇಪಿಸಿ ಅನೇಕ ಅಧಿಕಾರಿಗಳು ಕೆಎಟಿಗೆ ಅರ್ಜಿ […]

Continue Reading

ಗ್ರಾಮ ಆಡಳಿತ ಅಧಿಕಾರಿ (VA) ಹುದ್ದೆ ಭರ್ತಿಗೆ ಸರಕಾರದ ಮೀನಮೇಷ

ಒಬ್ಬ ಗ್ರಾಮಾಧಿಕಾರಿಗೆ ನಾಲ್ಕೈದು ಗ್ರಾಮದ ಜವಾಬ್ದಾರಿ ವಹಿಸಿಕೊಡುವ ಮೂಲಕ ಸರಕಾರಗಳು ಎಡವಟ್ಟು ಮಾಡಿಕೊಳ್ಳುತ್ತಿದೆ. ಗ್ರಾಮ ಆಡಳಿತ ಅಧಿಕಾರಿ (VA) ಗ್ರಾಮದ ಕಂದಾಯದ ಸಮಸ್ಯೆಗಳಿಗೆ ಜನಸಾಮಾನ್ಯರ ಕೈಗೆ ಸಿಗುವಂತಹ ಕೆಳಹಂತದ ಅಧಿಕಾರಿಗಳು. ಮೇಲಾಧಿಕಾರಿಗಳು ಕಚೇರಿ, ಸಭೆ ಎಂದು ಜನಸಾಮಾನ್ಯರ ಸಮಸ್ಯೆಗಳಿಗೆ ಸಿಗದಿದ್ದರೂ ಗ್ರಾಮ ಆಡಳಿತ ಅಧಿಕಾರಿಗಳು ಅವೆಲ್ಲವನ್ನು ನಿಭಾಯಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಈ ನಡುವೆಯೇ ಗ್ರಾಮ ಆಡಳಿತ ಅಧಿಕಾರಿಗಳನ್ನು ನಾಲ್ಕೈದು ಗ್ರಾಮದ ಜವಾಬ್ದಾರಿ ವಹಿಸಿಕೊಡುವ ಮೂಲಕ ಸರಕಾರಗಳು ಎಡವಟ್ಟು ಮಾಡಿಕೊಳ್ಳುತ್ತಿದೆ. ಜನಸಾಮಾನ್ಯರು ಸರಕಾರಿ ಕೆಲಸಕ್ಕೆ […]

Continue Reading