ವಿಟ್ಲ: ಬಂಟ್ವಾಳ ನೇರಳಕಟ್ಟೆ ಮನೆಯೊಂದರಲ್ಲಿ MDMA ಪತ್ತೆ; ನಾಲ್ವರು ಆರೋಪಿಗಳ ಬಂಧನ. ಪ್ರಕರಣ ದಾಖಲು

ಬಂಟ್ವಾಳ ನೇರಳಕಟ್ಟೆ ಇಂದಿರಾ ನಗರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಅಶ್ರಪ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತು MDMA ಅನ್ನು ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಬಂಟ್ವಾಳ, ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಎಂಬಲ್ಲಿ, ಬಂಟ್ವಾಳ ನಿವಾಸಿ ಅಶ್ರಫ್‌ ಜಿ ಎಂಬಾತನು ವಾಸವಿದ್ದ ಮನೆಗೆ ತೆರಳಿದಾಗ, ಸದ್ರಿ ಆರೋಪಿಗಳಾದ ಹಫೀಝ್‌ ಯಾನೆ ಅಪ್ಪಿ, ಅಫ್ವಾನ್‌ ಮತ್ತು ಅಶ್ರಫ್‌ರವರೊಂದಿಗೆ […]

Continue Reading

ಇತಿಹಾಸದ ಅತ್ಯಂತ ಮಹತ್ವದ ತೀರ್ಪು; ಮನುಷ್ಯನಿಗೆ ಬದುಕುವ ಹಕ್ಕು ಇರುವಂತೆ, ಘನತೆಯಿಂದ ಸಾಯುವುದು ಮೂಲಭೂತ ಹಕ್ಕು”: ಸುಪ್ರೀಂ ಕೋರ್ಟ್

ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ಮಹತ್ವದ ತೀರ್ಪು. ಕಳೆದ ಹನ್ನೆರಡು ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಉತ್ತರ ಪ್ರದೇಶದ 32 ವರ್ಷದ ಯುವಕನಿಗೆ ‘ದಯಾಮರಣ’ ನೀಡಲು ಸುಪ್ರೀಂ ಕೋರ್ಟ್ ಬುಧವಾರದಂದು ಐತಿಹಾಸಿಕ ಆದೇಶ ಹೊರಡಿಸಿದೆ. ಇದು ಭಾರತದಲ್ಲಿ ಅಧಿಕೃತವಾಗಿ ದಯಾಮರಣಕ್ಕೆ ಅನುಮತಿ ನೀಡಿದ ಮೊದಲ ಪ್ರಕರಣವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಈ ಯುವಕ, 12 ವರ್ಷಗಳ ಹಿಂದೆ ಕಟ್ಟಡವೊಂದರಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ಅಂದಿನಿಂದ ಆತ ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಕೇವಲ ಯಂತ್ರೋಪಕರಣಗಳ ಸಹಾಯದಿಂದ ಜೀವ ಹಿಡಿದಿದ್ದನು. […]

Continue Reading

ಅಮೇರಿಕಾದ ಯುದ್ದಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕ; ಸಾಮ್ರಾಜ್ಯಶಾಹಿ ರಾಷ್ಟಗಳು ತೀವ್ರ ಆರ್ಥಿಕ ಬಿಕ್ಕಟ್ಟಿನ್ನು ಸರಿದೂಗಿಸಲು ಯುದ್ದವನ್ನೇ ಅಸ್ತ್ರವನ್ನಾಗಿಸಿದೆ: ಕೆ. ಮಹಾಂತೇಶ್

ಅಮೇರಿಕಾ ಇಸ್ರೇಲ್ ನ ಯುದ್ದಕೋರ ನೀತಿಗಳಿಂದಾಗಿ ಜಗತ್ತಿನೆಲ್ಲಡೆ ಯುದ್ಧದ ಕಾರ್ಮೋಡ ಕವಿದಿದ್ದು, ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದಾರೆ. ಅಮೇರಿಕನ್ ಸಾಮ್ರಾಜ್ಯಶಾಹಿ ರಾಷ್ಟಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಅದನ್ನು ಸಮದೂಗಿಸಲು ಪ್ರತೀ ಸಂದರ್ಭದಲ್ಲೂ ಯುದ್ದವನ್ನೇ ಅಸ್ತ್ರವನ್ನಾಗಿಸಿದೆ. ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು ದುಡಿಯುವ ವರ್ಗದ ಬದುಕು ಸಂಕಷ್ಟಕ್ಕೀಡಾಗಿದೆ. ಈ ಮೂಲಕ ಅಮೇರಿಕಾದ ಯುದ್ದಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು CITU ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಕೆ. ಮಹಾಂತೇಶ್ ರವರು ಅಭಿಪ್ರಾಯಪಟ್ಟರು. CITU ಕರ್ನಾಟಕ ರಾಜ್ಯ ಮಟ್ಟದ […]

Continue Reading

ಕಾವೂರು ಪೊಲೀಸರ ಕಾರ್ಯಾಚರಣೆ: 24 ಗಂಟೆಯೊಳಗೆ ಮನೆ ಕಳ್ಳತನ ಮಾಡಿದ ಆರೋಪಿಯ ಬಂಧನ. ಕಳವು ಮಾಡಿದ ಎಲ್ಲಾ ಸ್ವತ್ತುಗಳ ವಶ

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಸ್ ನಗರದಲ್ಲಿ ಮನೆಯೊಂದಕ್ಕೆ ದಿನಾಂಕ: 07-03-2026 ರಂದು ಮದ್ಯಾಹ್ನ 12-00 ಗಂಟೆ ಅವಧಿಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ, ಸರಿ ಸುಮಾರು ರೂ 4,80,000 ಸಾವಿರ ಮೌಲ್ಯದ 39 ಗ್ರಾಂ ಚಿನ್ನಾಭರಣ, 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಮನೆ ಕಳ್ಳತನ ಪ್ರಕರಣದ ಪತ್ತೆಯ ಕುರಿತು ಕಾವೂರು ಪೊಲೀಸ್ […]

Continue Reading

ಉಪ್ಪಿನಂಗಡಿ: ಅಕ್ರಮವಾಗಿ ಶೇಖರಿಸಿಟ್ಟಿದ್ದ ಡೀಸೆಲ್ ಪತ್ತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಬೆಳ್ತಂಗಡಿ ಉಪ-ವಿಭಾಗದ ಡಿವೈಎಸ್ಪಿ ರೋಹಿಣಿ. ಸಿ. ಕೆ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಬೆಳ್ತಂಗಡಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಅಕ್ರಮವಾಗಿ ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಶೇಖರಿಸಿಟ್ಟಿದ ಡೀಸೆಲನ್ನು ಉಪ್ಪಿನಂಗಡಿ ವೃತ್ತ ನಿರೀಕ್ಷರು ಮತ್ತು ಉಪ್ಪಿನಂಗಡಿ ಠಾಣಾಧಿಕಾರಿಗಳು ಸ್ಥಳಕ್ಕೆ ತೆರಳಿ‌, ಜಗದೀಶ್ ಎಂಬಾತನ ಮನೆಯ ಸಮೀಪದ ಶೆಡ್ ತಪಾಸಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ ಸರಿ-ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್ ಗಳು ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 05 ಕ್ಯಾನ್ ಗಳಲ್ಲಿ […]

Continue Reading

ಬಂಟ್ವಾಳ: ಚಿನ್ನಾಭರಣ ಕಳವು ಪ್ರಕರಣ: ಅಂತರ್ ರಾಜ್ಯ ಕಳ್ಳನ ಬಂಧನ, 20 ಲಕ್ಷ ರೂಪಾಯಿ ಮೌಲ್ಯ ಚಿನ್ನಾಭರಣಗಳ ವಶ.

ಬಂಟ್ವಾಳ: ಬಸ್ಸಿನಲ್ಲಿಟ್ಟಿದ್ದ ಬ್ಯಾಗ್ ನಿಂದ ಸರಿ ಸುಮಾರು 180 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ. ಕ್ರ ಸಂ:132/2025 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿತನಾದ ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆಯ ಸಮದ್ ಖಾನ್ ಎಂಬಾತನನ್ನು ಬಂಟ್ವಾಳ ಪೊಲೀಸರು ದಸ್ತಗಿರಿ ಮಾಡಿ, ಆರೋಪಿತನಿಂದ ಕಳ್ಳತನ ಮಾಡಿದ ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಪತ್ತೆ ಕಾರ್ಯದಲ್ಲಿ ಬಂಟ್ವಾಳ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ […]

Continue Reading

ಆದಿವಾಸಿ ಮಕ್ಕಳೊಂದಿಗೆ ಬೆರೆತು ಊಟ ಮಾಡಿ, ಕಾನೂನಿನ ಪಾಠ ಮಾಡಿದ ಬೆಳ್ತಂಗಡಿ ಡಿವೈಎಸ್ಪಿ. ಸಿ. ಕೆ ರೋಹಿಣಿ

ಬೆಳ್ತಂಗಡಿ ಪೋಲಿಸ್ ಉಪ-ವಿಭಾಗದ ಡಿವೈಎಸ್ಪಿ ಸಿ.ಕೆ ರೋಹಿಣಿ ರವರು ನೆರಿಯ ಗ್ರಾಮದ ಆಲಂಗಾಯಿಯಲ್ಲಿರುವ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಗೆ ಆದಿತ್ಯವಾರ ಭೇಟಿ ನೀಡಿದರು. ಈ ವಸತಿ ಶಾಲೆಯ ಆದಿವಾಸಿ ಮಕ್ಕಳೊಂದಿಗೆ ಬೆರೆತು, ಮಾತುಕತೆ ನಡೆಸಿ, ಮಕ್ಕಳಿಗೆ ಕಾನೂನಿನ ಪಾಠ ಮಾಡಿದರು. ಸರ್ಕಾರದ ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಂಡು, ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಏರಬೇಕು ಆಗ ಸರ್ಕಾರದ ಕಾರ್ಯಕ್ರಮಗಳು ಸಾರ್ಥಕತೆಯಾಗುತ್ತದೆ ಎಂದರು. ಮಧ್ಯಾಹ್ನ ಮಕ್ಕಳ ಜೊತೆಗೆ ಊಟ ಮಾಡಿದ ಡಿವೈಎಸ್ಪಿರವರು ಹಳೆಯ ವಸತಿ ನಿಲಯ ಕಟ್ಟಡವನ್ನು ವೀಕ್ಷಣೆ […]

Continue Reading

ಮುತ್ಯಾನಿಗಿ ಸದ್ಯಕ್ಕೆ ಜೈಲೇ ಗತಿ; ಮುತ್ಯಾ ಮತ್ತು ಆತನ ಭಕ್ತರಿಗೆ ನ್ಯಾಯಾಲಯದ ತೀರ್ಪು ಶಾಕ್ ನೀಡಿದೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯದ ತೀರ್ಪು ನಿರಾಶೆ ತಂದಿದೆ. ಕಳೆದ ಕೆಲವು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಮುತ್ಯಾ, ತನ್ನ ಬಿಡುಗಡೆಗಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಮುತ್ಯಾ ಸದ್ಯಕ್ಕೆ ಜೈಲಿನಲ್ಲೇ ಉಳಿಯುವಂತಾಗಿದೆ.ಜಾಮೀನು ಸಿಗುವ ಭರವಸೆಯಲ್ಲಿದ್ದ ಮುತ್ಯಾ ಮತ್ತು ಆತನ ಭಕ್ತರಿಗೆ ಯಾದಗಿರಿ ಜಿಲ್ಲಾ […]

Continue Reading

ನಾವೂರು: ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಆಗುತ್ತಿರುವ ಕೈಕಂಬ ಸೇತುವೆ.

ದ.ಕ ಜಿಲ್ಲೆಯ ಜನರು ವಿದ್ಯಾವಂತರು, ಬುದ್ದಿವಂತರು ಆದಷ್ಟು ನಾಗರಿಕ ಸಮಾಜದಲ್ಲಿ ಅನಾಗರಿಕತೆಯ ವರ್ತನೆ ಹೆಚ್ಚುತ್ತಿದೆ ಎಂಬುದಕ್ಕೆ ಉತ್ತಮ ಉದಾಹರಣೆ ನಾವೂರು ಗ್ರಾಮದ ಕೈಕಂಬ ಸೇತುವೆ. ದಿನನಿತ್ಯ ಬಳಕೆಯ ತ್ಯಾಜ್ಯಗಳನ್ನು ತಂದು ಸೇತುವೆ ಕೆಳಗೆ ಹರಿಯುವ ನದಿ ಸುರಿದು ಹೋಗುವುದು ಇಲ್ಲಿ ಮಾಮೂಲು ಆಗಿ ಬಿಟ್ಟಿದೆ. ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮದಲ್ಲಿ ಉಪಯೋಗಿಸುವ ಪ್ಲಾಸ್ಟಿಕ್, ಹಾಳೆ ತಟ್ಟೆಗಳು, ಪ್ಲಾಸ್ಟಿಕ್ ಚೀಲಗಳು, ಬಾಟಲ್ ಗಳು, ಲೋಟಗಳು, ಬಿಯರ್ ಬಾಟಲ್ ಗಳು, ಮಹಿಳೆಯರು ಬಳಸುವ ಪ್ಯಾಡ್, ಮಕ್ಕಳು ಮತ್ತು ಹಾಸಿಗೆ ಹಿಡಿದಿರುವವರ ಪ್ಯಾಂಪರ್ಸ್ […]

Continue Reading

ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ. ಕೈಗೆ ಯಡಿಯೂರಪ್ಪ ಟಾನಿಕ್?

ರಾಜೀನಾಮೆಗೆ ರೆಡಿ ಅನ್ನಲಿದ್ದಾರೆ; ಸಿದ್ದರಾಮಯ್ಯ ಪಾಳಯದಿಂದ ಟಫ್ ಸಂದೇಶಗಳು ✍️. ಆರ್.ಟಿ.ವಿಠ್ಠಲಮೂರ್ತಿ ದಿಲ್ಲಿಯ ಬಿಜೆಪಿ ಪಾಳಯದಿಂದ ಕೇಳಿ ಬಂದ ಸುದ್ದಿ ರಾಜ್ಯ ಬಿಜೆಪಿಯ ನಾಯಕರಲ್ಲಿ ವಿಸ್ಮಯ ಮೂಡಿಸಿದೆ. ಅವರಿಗೆ ತಲುಪಿರುವ ಸುದ್ದಿಯ ಪ್ರಕಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟರಾದ ಹೆಚ್.ಡಿ.ದೇವೇಗೌಡರು ಪುನ: ರಾಜ್ಯಸಭೆಗೆ ಹೋಗಲಿದ್ದಾರೆ.ಹೀಗೆ ದೇವೇಗೌಡರು ಮರಳಿ ರಾಜ್ಯಸಭೆಗೆ ಹೋದರೆ ರಾಜ್ಯ ಬಿಜೆಪಿ ನಾಯಕರಿಗೇಕೆ ವಿಸ್ಮಯ ಎಂದರೆ ಅವರನ್ನು ಮರಳಿ ರಾಜ್ಯಸಭೆಗೆ ಕಳಿಸುವ ವಿಷಯದಲ್ಲಿ ಖುದ್ದು ನರೇಂದ್ರ ಮೋದಿಯವರೇ ಉತ್ಸುಕತೆ ತೋರಿಸಿರುವುದು. ಈ ವರ್ಷದ ಜೂನ್ ಹೊತ್ತಿಗೆ […]

Continue Reading