ಉತ್ತಮ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದಾಗ ಟೋಲ್ ವಿಧಿಸುವುದು ಸರಿಯಲ್ಲ. ರಸ್ತೆಗಳು ಉತ್ತಮವಾಗಿಲ್ಲದಿದ್ದರೆ ಜನರು ಸಂತೋಷಪಡುವುದಿಲ್ಲ: ನಿತಿನ್ ಗಡ್ಕರಿ

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವಾಹನ ಸವಾರರು ಸಂಚರಿಸುವ ರಸ್ತೆಗಳು ಕಳಪೆಯಾಗಿರುವ ಪ್ರದೇಶಗಳಲ್ಲಿ ಟೋಲ್ ಶುಲ್ಕ ವಿಧಿಸದಂತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಏಜೆನ್ಸಿಗಳಿಗೆ ಸೂಚಿಸಿದ್ದಾರೆ. ನೀವು ನೀಡುವ ಸೇವೆಗಳು ಉತ್ತಮವಾಗಿಲ್ಲದಿದ್ದಾಗ ಟೋಲ್ ವಿಧಿಸಬೇಡಿ. ರಸ್ತೆಗಳು ಉತ್ತಮವಾಗಿಲ್ಲದಿದ್ದರೆ ಜನರು ಸಂತೋಷಪಡುವುದಿಲ್ಲ. ಅನೇಕರು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದ್ದರಿಂದ ಉತ್ತಮ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದಾಗ ಟೋಲ್ ವಿಧಿಸುವುದು ಸರಿಯಲ್ಲ. ಗುಂಡಿ ಬಿದ್ದ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸಿದರೆ, ರಾಜಕಾರಣಿಗಳಾದ ನಾವು ಜನರ ಕೋಪವನ್ನು […]

Continue Reading

ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಹೊಸ ಕಾನೂನುಗಳ ಅನುಷ್ಠಾನ ಮುಂದೂಡುವಂತೆ ಕೋರಿ ಪಿಯುಸಿಎಲ್ ಮನವಿ

ಬೆಂಗಳೂರು: ಹಿಂದಿನ ವರ್ಷ ದಿಸೆಂಬರ್ ನಲ್ಲಿ ಕೇಂದ್ರ ಸರಕಾರ ಅಂಗೀಕರಿಸಿದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಕಾನೂನಗಳು ಮುಂದಿನ ತಿಂಗಳ ಆರಂಭದಿಂದ ಅನುಷ್ಠಾನ ಗೊಳ್ಳುವುದನ್ನು ಮುಂದೂಡುವಂತೆ ದೇಶದ ಪ್ರಮುಖ ಮಾನವ ಹಕ್ಕು ಸಂಘಟನೆಯಾದ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬೆರ್ಟೀಸ್ ಸಂಸ್ಥೆಯು ಕೇಂದ್ರ ಕಾನೂನು ಮಂತ್ರಿಯಾದ ಶ್ರೀ ಅರುಣ್ ಮೇಘವಾಲ್ ರವರಿಗೆ ಪತ್ರ ಬರೆದು, ಮೂರು ಕಾನೂನುಗಳ ಅನುಷ್ಠಾನದ ಮೊದಲು ಸದ್ರಿ ಕಾನೂನಿನ ಬಗ್ಗೆಗಿನ ಮತ್ತು […]

Continue Reading

ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೆ ಸಿಂಧಿಯಾ ಮತ್ತೆ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ

ಅಂದು ರಾಜಕೀಯದಲ್ಲಿ ನಿಷ್ಠೆ, ಗೌರವ ಇತ್ತು. ಇಂದು ಮೊದಲು ನಡೆಯಲು ಕಲಿಸಿದವರ ಬೆರಳನ್ನೇ ಕಡಿಯಲು ಬಯಸುತ್ತಿದ್ದಾರೆ: ವಸುಂಧರಾ ರಾಜೇ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೆ ಸಿಂಧಿಯಾ ಮತ್ತೆ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ನೀಡಿದ್ದಾರೆ. ಸುಂದರ್‌ ಸಿಂಗ್‌ ಭಂಡಾರಿ ಚಾರಿಟೇಬಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಾಗವಹಿಸಿ, ನಿಷ್ಠೆ ಮತ್ತು ರಾಜಕೀಯ ಬೆಳವಣಿಗೆ ಕುರಿತು ಅವರು ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ಭಾರೀ ಅಲ್ಲೊಲ್ಲ ಕಲ್ಲೊಲ ಸೃಷ್ಟಿಸಿದೆ. ರಾಜಕೀಯದಲ್ಲಿ ಬಡ್ತಿ ಕೊಡುವ ವ್ಯಕ್ತಿಯನ್ನು ಗೌರವಿಸುತ್ತಿದ್ದ […]

Continue Reading

ರಾಮಲಲ್ಲಾನ ಗರ್ಭಗುಡಿಯಲ್ಲಿ ಸಂಗ್ರಹವಾದ ನೀರು ಹೊರಹೋಗುವ ವ್ಯವಸ್ಥೆಯಲ್ಲಿ ದೋಷ. ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿಗೆ ಆತಂಕ.!

ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಇದು ಅಲ್ಲಿನ ಅರ್ಚಕರಿಗೆ ತಲೆನೋವಾಗಿ ಪರಿಣಮಿಸಿದೆ. ದೇವರಿಗೆ ಜಲಾಭಿಷೇಕ ನಂತರದಲ್ಲಿ ಗರ್ಭಗುಡಿಯಲ್ಲಿ ಸಂಗ್ರಹವಾಗಿರುವ ನೀರು ಹೊರಹೋಗಲು ಒಳಚರಂಡಿ ವ್ಯವಸ್ಥೆಯಲ್ಲಿ ದೋಷಗಳು ಇರುವುದರಿಂದ ನಿತ್ಯದ ಪೂಜಾ ಕೈಂಕರ್ಯಗಳಿಗೆ ಬಳಸುವ ನೀರು ಹರಿದು ಹೋಗದೇ ಇರುವುದು, ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಆತಂಕ ತಂದಿದೆ. ದೇವರ ಅಲಂಕಾರ ಸಮಾರಂಭದ ಮೊದಲು ರಾಮಲಲ್ಲಾನಿಗೆ ಪ್ರತಿದಿನ ಸ್ನಾನ ಮಾಡಿಸಲಾಗುತ್ತದೆ. ಈ ಆಚರಣೆಯಲ್ಲಿ […]

Continue Reading

ಈ ವರ್ಷ ಸಾವಿರಾರು ಮಂದಿ ಕೋಟ್ಯಾಧಿಪತಿಗಳು ಭಾರತವನ್ನೇ ತೊರೆಯಲಿದ್ದಾರೆ

ಒಂದು ದೇಶವು ಹೆಚ್ಚಿನ ಸಂಖ್ಯೆಯ ಮಿಲಿಯನೇರ್‌ಗಳನ್ನು ಕಳೆದುಕೊಳ್ಳುತ್ತಿದ್ದರೆ, ಆ ದೇಶದಲ್ಲಿನ ಗಂಭೀರ ಸಮಸ್ಯೆಗಳಿಂದ ಅದು ಸಂಭವಿಸುತ್ತಿದೆ ಸಾವಿರಾರು ಮಂದಿ ಕೋಟ್ಯಾಧಿಪತಿಗಳು ಭಾರತವನ್ನೇ ತೊರೆಯಲಿದ್ದಾರೆ. ವರದಿಯ ಪ್ರಕಾರ ಈ ವರ್ಷ ಸುಮಾರು 4300 ಮಿಲಿಯನೇರ್‌ಗಳು ದೇಶವನ್ನು ತೊರೆಯುವ ನಿರೀಕ್ಷೆಯಿದೆ. ಪ್ರತಿ ವರ್ಷ ದೇಶದ ಮಿಲಿಯನೇರ್‌ಗಳ ಪಟ್ಟಿಯಲ್ಲಿ ಅನೇಕ ಹೊಸಮುಖಗಳಿರುತ್ತವೆ. ಅದೇ ರೀತಿ ದೇಶ ಬಿಟ್ಟು ಹೋಗುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಆರ್ಥಿಕ ತಜ್ಞರ ಪ್ರಕಾರ ಈ ಮಿಲಿಯನೇರ್‌ಗಳ ಮೂಲಕ ಹೊರಹೋಗುವ ಹಣವು ವಿಶೇಷ ಕಾಳಜಿಯ ವಿಷಯವಲ್ಲ. ಏಕೆಂದರೆ ದೇಶವನ್ನು ತೊರೆಯುವ […]

Continue Reading

17,840 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ, 21.8 ಕಿ.ಮೀ ಉದ್ದದ ಅಟಲ್ ಸೇತು ಬಿರುಕು, ಭ್ರಷ್ಟಾಚಾರದ ವಾಸನೆ: ಪಟೋಳೆ

ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ಅಟಲ್ ಸೇತು ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆರೋಪಿಸಿದ್ದಾರೆ. ಸೇತುವೆ ಉದ್ಘಾಟನೆಗೊಂಡ ಕೆಲವೇ ತಿಂಗಳೊಳಗೆ ಅದರಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಜನರ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಎಂದು ಪಟೋಳೆ ಆರೋಪಿಸಿದ್ದಾರೆ. ಸೇತುವೆಯನ್ನು ಪರಿಶೀಲಿಸಿದ ಪಟೋಳೆ, ಸೇತುವೆಯ ನಿರ್ಮಾಣ ಗುಣಮಟ್ಟ ಕಳಪೆಯಾಗಿದೆ ಮತ್ತು ರಸ್ತೆಯ ಒಂದು ಭಾಗವು ಒಂದು ಅಡಿಯಷ್ಟು ಕುಸಿದಿದೆ ಎಂದು ಪ್ರತಿಪಾದಿಸಿದರು. ಸೇತುವೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಳೆ, ರಾಜ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲ […]

Continue Reading

ಅವಧಿ ಮೀರಿದ ವಾಹನಗಳನ್ನು ಖಾಸಗಿ ಸ್ಥಳಗಳಲ್ಲಿ ನಿಲ್ಲಿಸಬೇಕು. ಅಥವಾ ಗುಜರಿಗೆ ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುವಂತಿಲ್ಲ: ದೆಹಲಿ ಸರ್ಕಾರ ಆದೇಶ

ಅವಧಿ ಮೀರಿದ ವಾಹನಗಳನ್ನು ಖಾಸಗಿ ಸ್ಥಳಗಳಲ್ಲಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಗುಜರಿಗೆ ಹಾಕಬೇಕು’ ಎಂದು ದೆಹಲಿ ಸರ್ಕಾರವು ಗುರುವಾರ ಆದೇಶ ಹೊರಡಿಸಿದೆ.ಅವಧಿ ಮೀರಿದ ವಾಹನಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದು ಕಂಡುಬಂದಲ್ಲಿ, ಅದನ್ನು ಮಾರ್ಗಸೂಚಿ ಉಲ್ಲಂಘನೆ ಎಂದೇ ಪರಿಗಣಿಸಿ ವಶಕ್ಕೆ ಪಡೆಯುವುದಾಗಿ ನೋಟಿಸ್‌ನಲ್ಲಿ ಹೇಳಲಾಗಿದೆ. ಕಳೆದ ಫೆಬ್ರುವರಿಯಲ್ಲಿ ಈ ಕುರಿತು ಹೊರಡಿಸಿದ್ದ ಮಾರ್ಗಸೂಚಿಯನ್ನು ಪುನುರಚ್ಚರಿಸಿರುವ ಸರ್ಕಾರ, ಮನೆಯ ಮುಂಭಾಗದ ರಸ್ತೆಯನ್ನೂ ಒಳಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅವಧಿ ಮೀರಿದ ವಾಹನಗಳನ್ನು ನಿಲ್ಲಿಸುವುದನ್ನು ಸಾರಿಗೆ ಇಲಾಖೆಯು ನಿರ್ಬಂಧಿಸಿದೆ. ಇಂಥ ವಾಹನಗಳನ್ನು ಅವುಗಳ ಮಾಲೀಕರು […]

Continue Reading

ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ಜೂನ್ 26ಕ್ಕೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮಂಗಳವಾರ ಜೂನ್ 26ಕ್ಕೆ ಮುಂದೂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸಂಬಂಧಪಟ್ಟ ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ಜೂನ್ 26ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ. ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅರ್ಜಿದಾರರ ಪರ […]

Continue Reading

ಅರುಂಧತಿ ಮತ್ತು ಶೌಕತ್ ಹುಸೈನ್ ವಿರುದ್ಧದ ಯುಎಪಿಎ ಪ್ರಕರಣ ಹಿಂಪಡೆಯುವಿಕೆ, ಅಸಂವಿಧಾನಿಕ ಕಾನೂನು ರದ್ದತಿಗೆ ಪಿಯುಸಿಎಲ್ ಆಗ್ರಹ.

ಸೆಕ್ಷನ್ ಅಡಿಯಲ್ಲಿ ಅಪರಾಧಗಳಿಗಾಗಿ 2010 ರ ಪ್ರಕರಣದಲ್ಲಿ ಲೇಖಕಿ ಅರುಂಧತಿ ರಾಯ್ ಮತ್ತು ಶೇಖ್ ಶೋಕತ್ ಹುಸೇನ್ (ಕಾಶ್ಮೀರದ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಅಂತರರಾಷ್ಟ್ರೀಯ ಕಾನೂನಿನ ಮಾಜಿ ಪ್ರೊಫೆಸರ್) ಅವರನ್ನು ಪ್ರಾಸಿಕ್ಯೂಟ್ ಮಾಡಲು ದೆಹಲಿ ಪೋಲೀಸ್ ಅನುಮತಿಯನ್ನು ನೀಡುವ ದೆಹಲಿ ಲೆಫ್ಟಿನೆಂಟ್-ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ನಿರ್ಧಾರವನ್ನು ಪಿಯುಸಿಎಲ್ ಖಂಡಿಸುತ್ತದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ 13. ಲೆಫ್ಟಿನೆಂಟ್ ಗವರ್ನರ್ ರ ಈ ನಿರ್ಧಾರವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A, 153B ಮತ್ತು 505 ರ […]

Continue Reading

ಜುಲೈ 22 ರಿಂದ ಪ್ರತಿದಿನ ಮಂಗಳೂರು-ಅಬುಧಾಬಿ ನಡುವೆ ವಿಮಾನ ಹಾರಾಟ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜುಲೈ 22 ರಿಂದ ಅಬುಧಾಬಿಗೆ ಪ್ರತಿದಿನ ಏರ್ ಇಂಡಿಯಾ ವಿಮಾನ ಹಾರಾಟ ನಡೆಯಲಿದೆ. ಅಬುಧಾಬಿಗೆ ವಾರಕ್ಕೆ 4 ದಿನಗಳ ಕಾಲ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಜುಲೈ 22 ರಿಂದ ಪ್ರತಿದಿನ ಹಾರಾಟ ನಡೆಸಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಹಾರಾಟ ನಡೆಸುತ್ತಿದ್ದು, ಇದೀಗ ಮೂರು ವಿಮಾನಗಳ ಹೆಚ್ಚುವರಿ ಸೇರ್ಪಡೆಯೊಂದಿಗೆ ಪ್ರತಿದಿನ ಹಾರಾಟ […]

Continue Reading