ನೀ ಕೊಡೆ.. ನಾ ಬಿಡೆ.!, ಬೆಳಗಾವಿಯಲ್ಲಿ ತಹಶೀಲ್ದಾರ್ ಕುರ್ಚಿಗಾಗಿ ಬೀದಿ ಕಾಳಗ

ಅಪರೂಪದ ರಾದ್ಧಾಂತಕ್ಕೆ ಸಾರ್ವಜನಿಕರು, ಸಿಬ್ಬಂದಿ ಗಲಿಬಿಲಿ.! ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲರಾದ ಆರೋಪದಡಿ ಉಚ್ಚ ನ್ಯಾಯಾಲಯದ ಸೂಚನೆಯಂತೆ ನವೆಂಬರ್ 14 ರಂದು ಖಾನಾಪುರ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆ ಹೊಂದಿದ್ದ ದುಂಡಪ್ಪ ಕೋಮಾರ ಅವರು ಸುಪ್ರೀಂಕೋರ್ಟ್ ಆದೇಶದೊಂದಿಗೆ ಬುಧವಾರ ಕರ್ತವ್ಯಕ್ಕೆ ಹಾಜರಾದರು. ಆದರೆ ಹಾಲಿ ತಹಶೀಲ್ದಾರ್ ಮಂಜುಳಾ ನಾಯಕ್ ಕಚೇರಿಯಲ್ಲಿ ಆಸೀನರಾಗಿದ್ದರು. ಈ ವೇಳೆ ಕೋಮಾರ ಮತ್ತು ಮಂಜುಳಾ ಮಧ್ಯೆ ಕುರ್ಚಿಗಾಗಿ ಮಾತಿನ ಚಕಮಕಿ ನಡೆದು ಸಾರ್ವಜನಿಕರು, ಸಿಬ್ಬಂದಿ ಗಲಿಬಿಲಿಗೊಂಡರು. ಕೂಡಲೇ ಅಧಿಕಾರ ಹಸ್ತಾಂತರಿಸುವಂತೆ ಕೋಮಾರ ಹೇಳಿದಾಗ ಮಂಜುಳಾ […]

Continue Reading

ವ್ಯಕ್ತಿಗಿಂತ ಪಕ್ಷವೇ ದೊಡ್ಡದು. ಎಲ್ಲರೂ ಸೇರಿದರೆ ಮಾತ್ರ ಪಕ್ಷವಾಗುತ್ತದೆ ಹೊರತು, ಒಬ್ಬರಿಂದಲೇ ಅಲ್ಲ: ಪ್ರಿಯಾಂಕ್ ಖರ್ಗೆ

ವ್ಯಕ್ತಿಗಿಂತ ಪಕ್ಷವೇ ದೊಡ್ಡದು. ಸಚಿವ ಪ್ರಿಯಾಂಕ್ ಖರ್ಗೆಯವರ ಒಂದೇ ಒಂದು ಹೇಳಿಕೆ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಆಗುಹೋಗುಗಳ ಬಗ್ಗೆ ಚರ್ಚಿಸಿ ಬಂದಿರುವ ಪ್ರಿಯಾಂಕ್ ಖರ್ಗೆ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಕುರಿತು ಆಡಿರುವ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿವೆ.ವ್ಯಕ್ತಿಗಿಂತ ಪಕ್ಷವೇ ದೊಡ್ಡದು ಎಂಬ ಸಂದೇಶ ದೆಹಲಿ ಪ್ರವಾಸ ಮುಗಿಸಿ ಬಂದ ಸಚಿವ ಪ್ರಿಯಾಂಕ್ […]

Continue Reading

ಹುಬ್ಬಳ್ಳಿ: ಇಡಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಕೇರಳ ಮೂಲದ ಚಿನ್ನಾಭರಣದ ವ್ಯಾಪಾರಿಗಳೇ ದರೋಡೆಕೋರರ ಟಾರ್ಗೆಟ್ ಇಡಿ ಅಧಿಕಾರಿಗಳ ಸೋಗಿನಲ್ಲಿ ಮೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಇಡಿ ಅಧಿಕಾರಿಗಳು ಎಂದು ಹೇಳಿಕೊಂಡ ಐವರ ತಂಡ, ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯನ್ನು ವಿಚಾರಣೆ ನಡೆಸುವ ನೆಪದಲ್ಲಿ, 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ ರೂ.2 ಲಕ್ಷ ನಗದು ದೋಚಿದ ಘಟನೆ ಕಳೆದ ಗುರುವಾರ ನಡೆದಿದೆ. ವ್ಯಾಪಾರಿ ಸುದೀನ್ ಎಂ.ಆರ್ ಅವರು ಚಿನ್ನಾಭರಣ ಅಂಗಡಿಗಳಿಗೆ ಆಭರಣ […]

Continue Reading

ಕಬಡ್ಡಿ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ ಗ್ರಾಮೀಣ ಪ್ರತಿಭೆ ಶಶಿಕಾಂತ್ ಸುಲ್ಕೇರಿ; ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

ರಾಜ್ಯ ಮಟ್ಟದ 17 ವರ್ಷ ವಯೋಮಾನ ವಿಭಾಗದ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ವಿಶೇಷ ಸಾಧನೆ ಮಾಡಿರುವ ಶಶಿಕಾಂತ್ ಸುಲ್ಕೇರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ತಾಲೂಕು , ಜಿಲ್ಲೆ ಸೇರಿದಂತೆ ಮೈಸೂರು ವಿಭಾಗ , ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಸಾಧನೆ ಮಾಡಿದ ಈತ ಈಗ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈತ ಶ್ರೀರಾಮ ಪ್ರೌಢಶಾಲೆ ಸುಲ್ಕೇರಿ ಇಲ್ಲಿ 10 […]

Continue Reading

ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಕೊಟ್ಯಾಂತರ ಮೌಲ್ಯದ ಚಿನ್ನ ದರೋಡೆ ಪ್ರಕರಣ

ಗಡಿ ಜಿಲ್ಲೆಗಳಲ್ಲಿ ನಟೋರಿಯಸ್ ಕೇರಳಿಯನ್ ಗ್ಯಾಂಗ್ ಮತ್ತೆ ಆಕ್ಟಿವ್ ಬೆಂಗಳೂರಲ್ಲಿ ನಡೆದ ಏಳು ಕೋಟಿಗೂ ಅಧಿಕ ಮೊತ್ತದ ದರೋಡೆ ಪ್ರಕರಣದ ನೆನಪು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಕೋಟ್ಯಂತರ ಮೌಲ್ಯದ ಚಿನ್ನದ ಗಟ್ಟಿಯನ್ನು ದರೋಡೆಕೋರರು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಮೈಸೂರಿನ ಚಾಮರಾಜನಗರದ ಬಂಡಿಪುರ ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ಚಿನ್ನದ ವ್ಯಾಪಾರಿಯೊಬ್ಬರು ಕೇರಳಕ್ಕೆ ತೆರಳಿದ್ದರು. ಈ ವೇಳೆ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಮಾರಕಾಸ್ತ್ರ […]

Continue Reading

ಒಬ್ಬರು ಐಟಿ ರಿಟರ್ನ್ಸ್ ಫೈಲ್ ಮಾಡಿದ್ರೂ ಕುಟುಂಬದ BPL ಕಾರ್ಡ್ ರದ್ದು!

ಆಧಾರ್ -ಫ್ಯಾನ್-ಐಟಿ ಡೇಟಾಬೇಸ್ ಗಳು ಲಿಂಕ್ ಆಗಿರುವುದರಿಂದ ಸ್ವಯಂ ಚಾಲಿತವಾಗಿ ರದ್ದಾಗುತ್ತಿದೆ ರೇಷನ್ ಕಾರ್ಡ್ ಗಳು ಒಂದು ಕಡೆ ಗ್ಯಾರಂಟಿ ಕೊಟ್ಟು, ಇನ್ನೊಂದು ಕಡೆ ಕಸಿದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಬಿಪಿಎಲ್‌ ಹಾಗೂ ಅಂತ್ಯೋದಯ ರೇಷನ್‌ ಕಾರ್ಡ್‌ಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಜೀವನಾಡಿ. ಆದರೆ ಈಗ ಹೊಸ ಸಮಸ್ಯೆ ತಲೆದೋರಿದೆ. ಕುಟುಂಬದ ಒಬ್ಬರು ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿದರೂ ಸಾಕು ಇಡೀ ಕುಟುಂಬದ ರೇಷನ್ ಕಾರ್ಡ್‌ನ್ನು ಸಾಫ್ಟ್‌ವೇ‌ರ್ ‘ಅನರ್ಹ’ ಎಂದು ಗುರುತಿಸಿ ರದ್ದುಗೊಳಿಸುತ್ತಿದೆ. ಆಧಾರ್-ಪ್ಯಾನ್- ಐಟಿ ಡೇಟಾಬೇಸ್‌ಗಳು […]

Continue Reading

ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ: ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್​​ಗೆ ಬೀಗ ಜಡಿದ ಅಧಿಕಾರಿಗಳು

ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬೆಂಗಳೂರಿ ಪ್ರತಿಷ್ಠಿತ ಮಾಲ್​ಗಳಲ್ಲಿ ಒಂದಾದ ಮಂತ್ರಿಮಾಲ್​​ಗೆ ಅಧಿಕಾರಿಗಳು ಮತ್ತೆ ಬೀಗ ಜಡಿದಿದ್ದಾರೆ.ಈ ಹಿಂದೆಯೂ ಕೋಟ್ಯಾಂತರ ತೆರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಮಾಲ್ ನ್ನು ಸೀಜ್ ಮಾಡಲಾಗಿತ್ತು. ಈ ಬಾರಿಯೂ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೀಗ ಜಡಿದಿದ್ದಾರೆ. ಬರೋಬ್ಬರಿ 30,81,45,600 ರೂ. ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಮಾಲ್​ ಅನ್ನು ಸೀಜ್ ಮಾಡಿ ನೋಟಿಸ್ ಕಳುಹಿಸಿದ್ದಾರೆಂದು ತಿಳಿದುಬಂದಿದೆ. ಮಂತ್ರಿ ಮಾಲ್’ಗೆ ಬೀಗ ಹಾಕಿದ್ದರಿಂದ ಮಾಲ್ ಸಿಬ್ಬಂದಿಗಳು ಕಂಗಾಲಾಗಿದ್ದಾರೆ. […]

Continue Reading

ಪತ್ನಿಗೆ ಜೀವನಾಂಶ ನೀಡಲು ಲುಕ್ ಔಟ್ ನೋಟಿಸ್ ಆದೇಶ ಹೊರಡಿಸಿದ್ದ ಮಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ರದ್ದುಪಡಿಸಿದ ಹೈಕೋರ್ಟ್

ಸಿ ಆರ್ ಪಿಸಿ ಸೆಕ್ಷನ್ 125ರಡಿ ಪತ್ನಿಗೆ ಜೀವನಾಂಶ ನೀಡಿದ್ದ ಆದೇಶ ಪಾಲನೆ ಮಾಡದ ಪತಿ ವಿರುದ್ಧ ಮಂಗಳೂರು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಲುಕ್ ಔಟ್ ನೋಟಿಸ್ ಅನ್ನು ರದ್ದುಗೊಳಿಸಿರುವ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯಕ್ಕೆ ಆ ರೀತಿ ಲುಕ್ ಔಟ್ ನೋಟಿಸ್ ನೀಡುವ ಯಾವುದೇ ಅಧಿಕಾರವಿಲ್ಲವೆಂದು ಮಹತ್ವದ ತೀರ್ಪು ನೀಡಿದೆ. ಮಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಲಲಿತಾ ಕನ್ನೆಂಗಟ್ಟಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ಅರ್ಜಿಯನ್ನು […]

Continue Reading

ಸಿದ್ಧು ಸೇಫ್ ಆಗಿದ್ದೇ ಬಿಜೆಪಿಗೆ ಚಿಂತೆ…, ವಿಜಯೇಂದ್ರ ಅವರೇ ಇರಲಪ್ಪೋ..

ಕರ್ನಾಟಕದಲ್ಲೂ ಬಿಹಾರ ಮಾಡೆಲ್, ಸಂಪುಟ ಪುನರ್ರಚನೆ ನಿಜಕ್ಕೂ ಕಷ್ಟ ✍️. ಆರ್.ಟಿ. ವಿಠ್ಠಲಮೂರ್ತಿ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜ್ಯ ಬಿಜೆಪಿಯ ಹಲ ನಾಯಕರಿಗೆ ನಿರಾಸೆ ಉಂಟು ಮಾಡಿದೆ. ಹಾಗಂತ ಈ ಫಲಿತಾಂಶ, ಪಕ್ಷಕ್ಕೆ ವ್ಯತಿರಿಕ್ತವಾಗಿರಲಿ ಅಂತೇನೂ ಅವರು ಬಯಸಿರಲಿಲ್ಲ.ಆದರೆ, ಬಿಹಾರ ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ಒಂದಷ್ಟು ಬಲಿಷ್ಟವಾಗಲಿ ಅಂತ ಅವರು ನಿರೀಕ್ಷಿಸುತ್ತಿದ್ಧರು. ಕಾರಣ? ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಉತ್ತಮವಾದರೆ, ಆ ಮೂಲಕ ಅದಕ್ಕೆ ಶಕ್ತಿ ಬಂದರೆ ಕರ್ನಾಟಕದ ರಾಜಕಾರಣದಲ್ಲಿ […]

Continue Reading

ನವೆಂಬರ್ ಕ್ರಾಂತಿಗೆ ಬ್ರೇಕ್, ಬಿಹಾರ ಪಲಿತಾಂಶ ಹೈಕಮಾಂಡ್ ಶಕ್ತಿ ಕುಗ್ಗಿಸಿದೆ, ನಾಯಕತ್ವ ಚರ್ಚೆಗೆ ತಾತ್ಕಾಲಿಕ ತೆರೆ

ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಅನುಭವಿಸಿದ ಹೀನಾಯ ಸೋಲು, ದೆಹಲಿಯ ಹೈಕಮಾಂಡ್‌ನ ಶಕ್ತಿಯನ್ನು ಕುಗ್ಗಿಸಿದ್ದು, ಇದರ ನೇರ ಲಾಭ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊರೆತಿದೆ. ಈ ಮೂಲಕ ಅವರ ನಾಯಕತ್ವ ಇನ್ನಷ್ಟು ಬಲಿಷ್ಠಗೊಂಡು, ನಾಯಕತ್ವ ಚರ್ಚೆ ತಾತ್ಕಾಲಿಕ ತೆರೆ ಕಂಡಿದೆ. ಬಿಹಾರ ಚುನಾವಣೆ ಕೇವಲ ಒಂದು ರಾಜ್ಯದ ಫಲಿತಾಂಶವಾಗಿರಲಿಲ್ಲ, ಅದು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವಕ್ಕೆ, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ ಅವರ ವರ್ಚಸ್ಸಿಗೆ ಒಂದು ಅಗ್ನಿಪರೀಕ್ಷೆಯಾಗಿತ್ತು. ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಅಬ್ಬರದ ಪ್ರಚಾರ ಕೈಗೊಂಡು, ಸರಣಿ […]

Continue Reading