ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಪ್ಪಾದ ಚಿಕಿತ್ಸೆ, ಬಡ ರೋಗಿಗಳ ಕುರಿತಾದ ನಿರ್ಲಕ್ಷ್ಯಕ್ಕೆ ಕಾಲು ಕಳೆದು ಕೊಂಡ ಯುವಕ.DYFI ಹೋರಾಟಕ್ಕೆ ನಿರ್ಧಾರ

ಕರಾವಳಿ

ಉಳ್ಳಾಲ ತಾಲೂಕಿನ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯೊಂದರಲ್ಲಿ ತಪ್ಪಾದ ಚಿಕಿತ್ಸೆಯಿಂದ ಕಾಲು ಕಳೆದುಕೊಂಡ 27 ರ ಹರೆಯದ ಯುವಕ ನೌಷಾದ್ ಕತೆ ಮನಕಲಕುವಂತಿದೆ. ಭವಿಷ್ಯದ ಕುರಿತು ಅಪಾರ ಕನಸುಗಳನ್ನು ಹೊಂದಿದ್ದ ಸುಂದರ ಯುವಕ ಈಗ ಒಂದು ಕಾಲನ್ನು ಕಳೆದು ಕೊಂಡು ಅಂಗವಿಕಲನಾಗಿದ್ದಾನೆ.

ಒಂದು ವರ್ಷಗಳ ಕಾಲ ಮೆಡಿಕಲ್ ಕಾಲೇಜು ಜೊತೆ ಪರಿಹಾರ ಪಡೆಯಲು ನಡೆಸಿದ ಯತ್ನ ವಿಫಲಗೊಂಡಿದೆ. ಪರಿಹಾರ ಕೊಡುವುದಾಗಿ ನಂಬಿಸಿ ಈಗ ನಡು ನೀರಿನಲ್ಲಿ ಕೈ ಬಿಡಲಾಗಿದೆ. ಇದು ತಪ್ಪಾದ ಚಿಕಿತ್ಸೆಯ ಪ್ರಕರಣ ಮಾತ್ರ ಅಲ್ಲ, ವ್ಯವಸ್ಥೆಯನ್ನೆ ನಿಯಂತ್ರಿಸುವ ಕಾರ್ಪೊರೇಟ್ ಆರೋಗ್ಯ ಲಾಬಿ, ಮೆಡಿಕಲ್ ಕಾಲೇಜು ಆಡಳಿತದ “ತಾಖತ್ತು” ನಾಗರಿಕ ಸಮಾಜಕ್ಕೆ ಗೊತ್ತು ಮಾಡುವ ಪ್ರಕರಣವೂ ಹೌದು. ಪರಿಹಾರ ಪಡೆಯುವ ತಾಳ್ಮೆಯ ಯತ್ನಗಳೆಲ್ಲ ವಿಫಲಗೊಂಡ ನಂತರ ಈಗ ಬೀದಿ ಹೋರಾಟ, ಕಾನೂನು ಸಮರ ನಡೆಸಲು ನಿರ್ಧರಿಸಲಾಗಿದೆ. ನಿಮ್ಮೆಲ್ಲ ಬೆಂಬಲ ನತದೃಷ್ಟ ಯುವಕ ನೌಷದ್ ಗೆ ಇರಲಿ.