ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾಗಿ ಹಿರಿಯ ಪತ್ರಕರ್ತ, ಪ್ರೈಮ್ ಟಿವಿ ಸಂಪಾದಕ ರೂಪೇಶ್ ಕಲ್ಮಾಡಿ ಆಯ್ಕೆ

ರಾಜ್ಯ

ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾಗಿ ಉಡುಪಿಯ ಹಿರಿಯ ಪತ್ರಕರ್ತ, ಪ್ರೈಮ್ ಟಿವಿ ಸಂಪಾದಕ ರೂಪೇಶ್ ಕಲ್ಮಾಡಿ ಆಯ್ಕೆಗೊಂಡಿರುತ್ತಾರೆ.

ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಸಂಚಾಲಕರಾಗಿ ಹಿರಿಯ ಪತ್ರಕರ್ತ, ಪ್ರೈಮ್ ಟಿ.ವಿ ಉಡುಪಿ ಇದರ ಸಂಪಾದಕರಾದ ಶ್ರೀ ರೂಪೇಶ್ ಕಲ್ಮಾಡಿ ಮಲ್ಪೆ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಪ್ರೆಸ್ಸ್ ಕ್ಲಬ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಯ್ಕ ಭಟ್ಕಳ ಅವರ ಸೂಚನೆಯ ಮೇರೆಗೆ ಕರ್ನಾಟಕ ಪ್ರೆಸ್ ಕ್ಲಬ್ ಇದರ ರಾಜ್ಯ ಅಧ್ಯಕ್ಷ ರಾದ ಶ್ರೀ ದಯಾನಂದ ಎಂ. ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಎಸ್.ಜಿ ರವರ ಶಿಪಾರಸ್ಸಿನ ಮೇರೆಗೆ ಮುಂಡಗೊಂಡದ ಹಿರಿಯ ಪತ್ರಕರ್ತ ಶ್ರೀ ನಾಗರಾಜ ಅರ್ಜುನ್ ದೈವಜ್ಞ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ನ್ಯಾಯ, ನೀತಿ, ಸತ್ಯ ಮತ್ತು ಪತ್ರಿಕಾ ಧರ್ಮವನ್ನು ಪಾಲಿಸಿ ಕಾರ್ಯ ನಿರ್ವಹಿಸುವಂತೆಯೂ, ಸಂಘಟನೆಯನ್ನು ಬೆಳೆಸುವುದರ ಜೊತೆಗೆ, ಪತ್ರಕರ್ತರ ಕಷ್ಟದ ಸಮಯದಲ್ಲಿ ಸಹಾಯ, ಸಹಕಾರ ನೀಡಿ, ಪತ್ರಕರ್ತರ ಪರ ಹೋರಾಟ ಮಾಡುವಂತೆಯೂ, ಸದಾ ಬಡ ಜನರ ಧ್ವನಿಯಾಗಿ ಪತ್ರಕರ್ತರ ದ್ವನಿಯಾಗಿ ಕಾರ್ಯಚರಿಸುವಂತೆ ಆದೇಶದಲ್ಲಿ ತಿಳಿಸಿರುತ್ತಾರೆ.