ಗ್ರಾಮ ಪಂಚಾಯಿತಿ ಕಾಯ್ದೆ 1993 ಕ್ಕೆ ತಿದ್ದುಪಡಿ : ರಾಜ್ಯಪಾಲರಿಂದ ಸುಗ್ರೀವಾಜ್ಞೆ

ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿಗಳನ್ನು ಪುನರ್ರಚಿಸುವ ಸಂಬಂಧಕ್ಕೆ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ಕ್ಕೆ ಕೆಲವು ತಿದ್ದುಪಡಿಗಳನ್ನು ಸೂಚಿಸಿ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋತ್ ಅವರು ಭಾನುವಾರ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದಾರೆ.ಈ ಸಂಬಂಧ ರಾಜ್ಯ ಸಚಿವ ಸಂಪುಟ ಸಭೆ ಮಾಡಿದ ಶಿಫಾರಸ್ಸಿಗೆ ಅನುಗುಣವಾಗಿ ರಾಜ್ಯಪಾಲರು ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ)ಗೆ ಸುಗ್ರೀವಾಜ್ಞೆ 1999ಕ್ಕೆ ತಮ್ಮ ಅಂಕಿತ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Continue Reading

ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನಿಂದ ಸರಳ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂರು ನವಜೋಡಿಗಳು

ಬಜ್ಪೆ: ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ (ರಿ) ಬಜ್ಪೆ ಕಾಟಿಪಳ್ಳ ಇದರ ವತಿಯಿಂದ 3 ಜೋಡಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಬಜ್ಪೆ ಎಂಜೆಎಂ ಜುಮಾ ಮಸೀದಿಯ ವಠಾರದಲ್ಲಿ ರವಿವಾರ ನಡೆಯಿತು. ನಿಖಾಹ್‌ಗೆ ನೇತೃತ್ವ ನೀಡಿ ಮಾತನಾಡಿದ ಬಜ್ಪೆ ಎಂಜೆಎಂ ಜುಮಾ ಮಸೀದಿಯ ಖತೀಬ್‌ ಇಸ್ಮಾಯೀಲ್ ಮನ್ಸೂರ್ ಸಅದಿ ಅಲ್ ಕಾಮಿಲ್, ಸಮಾಜದ ಬಡವರ್ಗದ ಜನರು, ಶೋಷಿತರು, ನೊಂದವರನ್ನು ಹುಡುಕಿ ತನು ಮನ ಧನದಿಂದ ಸಹಾಯ ಮಾಡುವವರು ದೇವರಿಗೆ ಪ್ರೀಯರಾದವರು. ಒಬ್ಬ ಬಡವನಿಗೆ ಯಾವುದೇ ರೂಪದಲ್ಲಿ ಸಹಾಯ ಮಾಡಿದರೆ […]

Continue Reading

ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾಗಿ ಹಿರಿಯ ಪತ್ರಕರ್ತ, ಪ್ರೈಮ್ ಟಿವಿ ಸಂಪಾದಕ ರೂಪೇಶ್ ಕಲ್ಮಾಡಿ ಆಯ್ಕೆ

ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾಗಿ ಉಡುಪಿಯ ಹಿರಿಯ ಪತ್ರಕರ್ತ, ಪ್ರೈಮ್ ಟಿವಿ ಸಂಪಾದಕ ರೂಪೇಶ್ ಕಲ್ಮಾಡಿ ಆಯ್ಕೆಗೊಂಡಿರುತ್ತಾರೆ. ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಸಂಚಾಲಕರಾಗಿ ಹಿರಿಯ ಪತ್ರಕರ್ತ, ಪ್ರೈಮ್ ಟಿ.ವಿ ಉಡುಪಿ ಇದರ ಸಂಪಾದಕರಾದ ಶ್ರೀ ರೂಪೇಶ್ ಕಲ್ಮಾಡಿ ಮಲ್ಪೆ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಪ್ರೆಸ್ಸ್ ಕ್ಲಬ್ ನ […]

Continue Reading

ಆಂಧ್ರಪ್ರದೇಶದಿಂದ ಬೆಂಗಳೂರಿಗೆ 65 ಕೆ.ಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಪೊಲೀಸರು

ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಚೌಟುಪ್ಪಲ್ ಪೊಲೀಸರೊಂದಿಗೆ ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ ತಂಡ ಭೇದಿಸಿದ್ದು, ಮೂವರನ್ನು ಬಂಧಿಸಿದ್ದು, ಅವರಿಂದ 64 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಫಯಾಸ್, ಅನಂತ ಮೋಹನ್, ಸೈಯದ್ ಬಂಧಿತ ಆರೋಪಿಗಳು. ಇವರೆಲ್ಲರೂ ಕೇರಳದ ವಿವಿಧ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಅವರಲ್ಲಿ ಒಬ್ಬರು ಬೆಂಗಳೂರು ಮೂಲದ ಪೆಡ್ಲರ್‌ನ ಸಂಪರ್ಕಕ್ಕೆ ಬಂದು ಉಳಿದವರನ್ನು ಪರಿಚಯಿಸಿದರು ಎನ್ನಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕುವಿನಿಂದ ಬೆಂಗಳೂರಿಗೆ ಗಾಂಜಾ ಸಾಗಿಸುವ ವೇಳೆ ಬೆಂಗಳೂರಿನ ಪೆಡ್ಲರ್ ಮೂವರು ಸಾಗಣೆದಾರರಿಗೆ ಭಾರಿ ಹಣ […]

Continue Reading

ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರ ಗಂಗಯ್ಯ ಅಮೀನ್ ಇನ್ನಿಲ್ಲ

ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರೂ, ದುಡಿಯುವ ವರ್ಗದ ಕಣ್ಮಣಿ, CPIM ಗುರುಪುರ ವಲಯ ಸಮಿತಿ ಸದಸ್ಯರಾದ ಕಾಂ.ಗಂಗಯ್ಯ ಅಮೀನ್(73ವರ್ಷ) ರವರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು. ಎಳೆಯ ಪ್ರಾಯದಲ್ಲೇ ದುಡಿಯುವ ವರ್ಗದ ಚಳುವಳಿಯ ಸಂಪರ್ಕಕ್ಕೆ ಬಂದ ಗಂಗಯ್ಯ ಅಮೀನ್ ರವರು, ಸ್ವತಃ ಹೆಂಚು ಕಾರ್ಖಾನೆಯ ಕಾರ್ಮಿಕನಾಗಿ,ಹೆಂಚು ಕಾರ್ಮಿಕರ ಚಳುವಳಿಯ ನಾಯಕರಾಗಿ ಹಲವಾರು ವರ್ಷಗಳ ಕಾಲ ದುಡಿದರು. ಉಳುವವನೇ ಹೊಲದೊಡೆಯ ಕಾನೂನಿನ ಜಾರಿಯ ಹೋರಾಟದಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಗಂಗಯ್ಯರವರು, ವಾಮಂಜೂರು ಆಸುಪಾಸಿನ ಗ್ರಾಮಗಳಲ್ಲಿ ರೈತರಿಗೆ […]

Continue Reading

ಮಂಗಳೂರು ಸಿಸಿಬಿ ಎಸಿಪಿ ಹುದ್ದೆಗೆ ಪೊಲೀಸ್ ಅಧಿಕಾರಿಗಳ ಬಿಗ್ ಫೈಟ್.. ಪ್ರಭಾವಿ ರಾಜಕಾರಣಿಗಳ ಭಗೀರಥ ಪ್ರಯತ್ನ

ರಾಜ್ಯದಲ್ಲಿ ಸರಕಾರ ಬದಲಾವಣೆಯಾಗಿ ಆರು ತಿಂಗಳೇನೂ ಕಳೆದಿವೆ. ಆದರೆ ಪೊಲೀಸ್ ಇಲಾಖೆಯ ಮೇಜರ್ ಹುದ್ದೆಗೆ ಅಂದುಕೊಂಡಂತೆ ಭರ್ಜರಿ ಸರ್ಜರಿ ಏನೂ ನಡೆದಿರಲಿಲ್ಲ. ಕೆಲವೊಂದು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹುದ್ದೆಯಲ್ಲಿ ಹೊಸಬರನ್ನು ನೇಮಿಸಲಾಗಿದೆ. ತಳಮಟ್ಟದ ಪೊಲೀಸರ ಹುದ್ದೆಗಳಲ್ಲಿ ನಿರೀಕ್ಷಿಸಿದಷ್ಟು ದೊಡ್ಡ ಬದಲಾವಣೆಯೇನೂ ಆಗಿಲ್ಲ. ಇನ್ನು ಮಂಗಳೂರಿನ ಪೊಲೀಸ್ ಇಲಾಖೆಯ ಅತ್ಯಂತ ಮಹತ್ವದ ಹುದ್ದೆ ಎಂದು ಬಿಂಬಿಸಲಾಗಿರುವ ಸಿಸಿಬಿಯ ಎಸಿಪಿ ಹುದ್ದೆಯ ಮೇಲೆ ಇದೀಗ ಹಲವಾರು ಮಂದಿ ಕಣ್ಣಿತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಹಿಂದೆ ಎಸಿಪಿಯಾಗಿದ್ದ ಪಿ.ಎ […]

Continue Reading

ಯುವಜನರ ಉದ್ಯೋಗ, ಘನತೆಯ ಬದುಕಿಗಾಗಿ ನಡೆಯಲಿದೆ ಡಿವೈಎಫ್ಐ ರಾಜ್ಯ ಸಮ್ಮೇಳನ: ಮುನೀರ್ ಕಾಟಿಪಳ್ಳ

ದೇಶದಲ್ಲಿಂದು ಯಾವತ್ತೂ ಕಂಡು ಕೇಳರಿಯದಷ್ಟು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಈ ಬಗ್ಗೆ ಚರ್ಚಿಸಬೇಕಾಗಿದ್ದ ಯುವಜನತೆ ಬಿಜೆಪಿಯು ರಾಮ ಮಂದಿರದ ನಿರ್ಮಾಣದ ಹೆಸರಲ್ಲಿ ನಡೆಸುವ ಧರ್ಮರಾಜಕಾರಣದ ಚುನಾವಣೆ ಸಿದ್ದತೆಗೆ ಬಲಿಯಾಗುತ್ತಿದ್ದಾರೆ. ಕೇಂದ್ರ ಸರಕಾರದ ಯುವಜನ ವಿರೋಧಿ ನೀತಿಗಳ ವಿರುದ್ಧ ಡಿವೈಎಫ್ಐ ದೇಶವ್ಯಾಪಿಯಲ್ಲಿ ನಿರುದ್ಯೋಗದ ವಿರುದ್ಧ ಹೋರಾಟ ಸಂಘಟಿಸುತ್ತಿದ್ದು ಕರ್ನಾಟಕ ರಾಜ್ಯದಲ್ಲೂ ಯುವಜನರ ಉದ್ಯೋಗ, ಘನತೆಯ ಬದುಕಿಗಾಗಿ 12 ನೇ ಕರ್ನಾಟಕ ರಾಜ್ಯ ಸಮ್ಮೇಳನವು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ […]

Continue Reading

ಮಹಾರಾಷ್ಟ್ರ ಸರ್ಕಾರವು ಮರಾಠ ಕಾರ್ಯಕರ್ತರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದ ಹಿನ್ನಲೆ ಪ್ರತಿಭಟನೆ ರದ್ದು: ಮರಾಠಾ ಕಾರ್ಯಕರ್ತ ಮನೋಜ್ ಜರಂಜ್

ಮಹಾರಾಷ್ಟ್ರ ಸರ್ಕಾರವು ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದೆ ಎಂದು ಹೇಳುವ ಮೂಲಕ ಮೀಸಲಾತಿ ವಿಚಾರವಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜಾರಂಗೆ ಶನಿವಾರ ಹೇಳಿದ್ದಾರೆ. ಮರಾಠರ ಎಲ್ಲ ಬಂಧುಗಳ ದಾಖಲೆ (ಕುಂಬಿ ಜಾತಿಗೆ ಸಂಬಂಧ) ಪತ್ತೆಯಾದವರಿಗೆ ಕುಂಬಿ ಜಾತಿ ಪ್ರಮಾಣ ಪತ್ರ ನೀಡಲು ಸರಕಾರ ಅಧಿಸೂಚನೆ ಹೊರಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ನೆರೆಯ ನವಿ ಮುಂಬೈನ ವಾಶಿಯಲ್ಲಿ ಅವರು ಘೋಷಣೆ ಮಾಡಿದರು, ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ತಲುಪಿದ ನಂತರ ಸಾವಿರಾರು ಬೆಂಬಲಿಗರೊಂದಿಗೆ ರಾತ್ರಿಯಿಡೀ ಬೀಡುಬಿಟ್ಟರು. […]

Continue Reading

ಒಂದೆರಡು ದಿನಗಳು ಅಥವಾ ನಾಲ್ಕು ಗಂಟೆಗಳಲ್ಲಿ ಆದ ಬೆಳವಣಿಗೆ ಅಲ್ಲ; ಕಳೆದ ಐದಾರು ತಿಂಗಳಿಂದಲೂ ಆ ಪ್ರಯತ್ನ ನಡೆದಿತ್ತು: ಜಗದೀಶ್ ಶೆಟ್ಟರ್‌

ನನ್ನನ್ನು ಮತ್ತೆ ವಾಪಾಸು ಬಿಜೆಪಿ ಕರೆತರುವ ಪ್ರಯತ್ನ ಒಂದೆರಡು ದಿನಗಳು ಅಥವಾ ನಾಲ್ಕು ಗಂಟೆಗಳಲ್ಲಿ ಆದ ಬೆಳವಣಿಗೆ ಅಲ್ಲ. ಕಳೆದ ಐದಾರು ತಿಂಗಳಿಂದಲೂ ಆ ಪ್ರಯತ್ನ ನಡೆದಿತ್ತು ಎಂದ ಜಗದೀಶ ಶೆಟ್ಟರ್‌. ಬಿಜೆಪಿಗೆ ಮತ್ತೆ ಕರೆತರಬೇಕು ಎಂಬ ಒತ್ತಡ ಕಾರ್ಯಕರ್ತರಿಂದಲೂ ಇತ್ತು.ಲನನ್ನನ್ನೂ ಭೇಟಿ ಮಾಡಿ ಬಿಜೆಪಿಗೆ ಮರಳುವಂತೆ ಒತ್ತಾಯಿಸಿದ್ದರು. ಕಾರ್ಯಕರ್ತರ ಆಶಯ, ಧ್ವನಿ, ರಾಜ್ಯ ನಾಯಕರು ಮತ್ತು ರಾಷ್ಟ್ರೀಯ ನಾಯಕರ ಕರೆಗೆ ಸ್ಪಂದಿಸಿ ಮರಳಿದ್ದೇನೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಹಿರಿಯರು ಹೇಳಿದ್ದಾರೆ’ ಎಂದು ಶುಕ್ರವಾರ ಕರೆದ […]

Continue Reading

ಪತ್ನಿಯ ಹೊಂದಾಣಿಕೆಯಾಗದ ವರ್ತನೆಯಿಂದಾಗಿ ಮಾನಸಿಕ ಕ್ರೌರ್ಯವನ್ನು ಅನುಭವಿಸಿದ ವ್ಯಕ್ತಿಯ ಪರವಾಗಿ ದೆಹಲಿ ಹೈಕೋರ್ಟ್ ತೀರ್ಪು

ಪತ್ನಿಯ ಹೊಂದಾಣಿಕೆಯಾಗದ ವರ್ತನೆಯಿಂದಾಗಿ ಮಾನಸಿಕ ಕ್ರೌರ್ಯವನ್ನು ಅನುಭವಿಸಿದ ವ್ಯಕ್ತಿಯ ಪರವಾಗಿ ದೆಹಲಿ ಹೈಕೋರ್ಟ್ ವಿಚ್ಛೇದನ ನೀಡಿದೆ. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನೇತೃತ್ವದ ನ್ಯಾಯಪೀಠ ಮಂಗಳವಾರ ನೀಡಿದ ತೀರ್ಪಿನಲ್ಲಿ, ಪತಿಯ ಮನವಿಯ ಮೇರೆಗೆ ವಿಚ್ಛೇದನವನ್ನು ನಿರಾಕರಿಸಿದ ಕುಟುಂಬ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದೆ. ಪತಿಯ ಮೇಲ್ಮನವಿಗೆ ಅನುಮತಿ ನೀಡಿದ ನ್ಯಾಯಾಲಯ, “ಸಂಗಾತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನುಚಿತ ಮತ್ತು ಮಾನಹಾನಿಕರ ನಡವಳಿಕೆಯು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ” ಎಂದು ಹೇಳಿದೆ. ಈ ಪೀಠದಲ್ಲಿ ನ್ಯಾಯಮೂರ್ತಿ […]

Continue Reading