ರೈಸ್ ಪುಲ್ಲಿಂಗ್ ದಂಧೆ ಆರೋಪಿಗಳ ಬಂಧನ.ರೈಸ್ ಪುಲ್ಲಿಂಗ್ ಯಂತ್ರ, ಬೆಂಝ್, ಫಾರ್ಚುನರ್, ಸ್ಕಾರ್ಪಿಯೋ ಕಾರುಗಳು, 1,332 ಗ್ರಾಂ.ಚಿನ್ನ,28 ಲಕ್ಷ ರೂಪಾಯಿ ನಗದು ಜಪ್ತಿ

ರಾಜ್ಯ

ರೈಸ್ ಪುಲ್ಲಿಂಗ್ ಮೆಷಿನ್ ನೀಡುವುದಾಗಿ ರಾಜ್ಯದ ವಿವಿಧೆಡೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಮಾಜಿ ಪೊಲೀಸ್ ಸೇರಿ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 2.88 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಕಾನ್ ಸ್ಟ್ರೇಬಲ್ ವಿ.ಆರ್. ನಟೇಶ್,ವೆಂಕಟೇಶ್, ಸೋಮಶೇಖರ್ ಬಂಧಿತರು.ಬಂಧಿತರಿಂದ ರೈಸ್ ಪುಲ್ಲಿಂಗ್ ಯಂತ್ರ, ಬೆಂಝ್, ಫಾರ್ಚುನರ್, ಸ್ಕಾರ್ಪಿಯೋ ಕಾರುಗಳು, 1 ಕೆಜಿ 332 ಗ್ರಾಂ.ಚಿನ್ನದ ಆಭರಣಗಳು ಮತ್ತು 28 ಲಕ್ಷ ರೂಪಾಯಿ ನಗದು ಹಣ ಜಪ್ತಿ ಮಾಡಲಾಗಿದೆ.

ಶ್ರೀಮಂತರನ್ನು ಹುಡುಕಿ ಅವರನ್ನು ತಮ್ಮ ಬುಟ್ಟಿಗೆ ಬಿಳಿಸಿ,ತಮ್ಮ ಬಳಿ ರೈಸ್ ಪುಲ್ಲಿಂಗ್ ಯಂತ್ರ ಇರುವುದಾಗಿ ನಂಬಿಸುತ್ತಿದ್ದರು. ಇದು ಕೋಟ್ಯಂತರ ರೂಪಾಯಿ ಬೆಲೆಬಾಳುವ ಯಂತ್ರವಾಗಿದ್ದು, ನಮಗೆ ಹಣದ ಅಗತ್ಯತೆ ಇರುವುದರಿಂದ ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸುತ್ತಿದ್ದರು.

ನೀವು ಸೂಕ್ತ ಗ್ರಾಹಕರನ್ನು ಹುಡುಕಿದರೆ ಕೋಟ್ಯಂತರ ರೂಪಾಯಿಗೆ ಮಾರಾಟ ಈ ಮಿಷನ್ ಮಾರಾಟ ಮಾಡಬಹುದು ಎಂದು ಹೇಳಿ ನಂಬಿಸುತ್ತಿದ್ದರು.ಇವರ ಮಾತನ್ನು ನಂಬಿದ ಹಲವು ಮಂದಿ ಲಕ್ಷಾಂತರ ರೂಪಾಯಿ ಮುಂಗಡವಾಗಿ ಕೊಟ್ಟಿದ್ದರು.ಸಾರ್ವಜನಿಕರಿಂದ ಹಣ ಪಡೆದ ಬಳಿಕ ಯಾವುದೇ ರೈಸ್ ಪುಲ್ಲಿಂಗ್ ಯಂತ್ರ ಕೊಡದೇ ವಂಚಿಸುತ್ತಿದ್ದರು. ಸಾರ್ವಜನಿಕರಿಂದ ಪಡೆದ ಹಣದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿ ಮೋಜು ಮಾಡಿ ದುಂದು ವೆಚ್ಚ ಮಾಡುತ್ತಿದ್ದರು. ವಿಚಾರಣೆ ವೇಳೆ ಆರೋಪಿಗಳು ಇದೇ ರೀತಿ ಹಲವು ಜನರಿಗೆ ವಂಚಿಸಿರುವುದು ಗೊತ್ತಾಗಿದೆ. ಇತ್ತೀಚೆಗೆ ಆರೋಪಿಗಳಿಂದ ವಂಚನೆಯಾದ ವ್ಯಕ್ತಿಯೊಬ್ಬರು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ಕೊಟ್ಟ ಹಿನ್ನಲೆಯಲ್ಲಿ ಅರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.