ಕೇರಳದಲ್ಲಿ ಮುಸ್ಲಿಂ ವೇಷಧರಿಸಿ ಮರೆಸಿಕೊಂಡಿದ್ದ ಸುಬ್ರಮಣಿ ಆಲಿಯಾಸ್ ಮೌಲ್ವಿ ಹುಸೇನ್ ಸಿಕಂದರ್ ಬಾಷಾ ಅಂದರ್
ಪತ್ನಿ ಸುಧಾ ಅವರನ್ನು ಬೆಂಕಿ ಹಚ್ಚಿ ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಸುಬ್ರಮಣಿ ಆಲಿಯಾಸ್ ಮೌಲ್ವಿ ಹುಸೇನ್ ಸಿಕಂದರ್ ಬಾಷಾ 31 ವರ್ಷಗಳ ಬಳಿಕ ಹೆಬ್ಬಾಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹೆಬ್ಬಾಳ ನಿವಾಸಿ ಸುಬ್ರಮಣಿ, ಪತ್ನಿ ಸುಧಾ ಅವರನ್ನು 1993 ರಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಚಿಕ್ಕಮಗಳೂರಿನ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಈತನನ್ನು ಇತ್ತೀಚೆಗೆ ಬಂಧಿಸಿ ನಗರಕ್ಕೆ ಕರೆ ತರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಬ್ರಮಣಿ ಹಾಗೂ ಸುಧಾ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕೊಲೆ ಮಾಡಲು ತೀರ್ಮಾನಿಸಿದ್ದ ಸುಬ್ರಮಣಿ, ಸುಧಾ ಅವರ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ, ತೀವ್ರ ಗಾಯಗೊಂಡು ಸುಧಾ ಮೃತಪಟ್ಟಿದ್ದರು. ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಪ್ರಕರಣ ದಾಖಲಿಸಿ ಆರೋಪಿ ಸುಬ್ರಮಣಿಯನ್ನು ಬಂಧಿಸಲಾಗಿತ್ತು. ಕೆಲ ದಿನದ ನಂತರ ಈತ ಜಾಮೀನು ಮೇಲೆ ಹೊರಗೆ ಬಂದಿದ್ದ. ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ. ಈತನ ಬಂಧನಕ್ಕಾಗಿ ಜಾಮೀನು ರಹಿತ ವಾರೆಂಟ್ ಸಹ ಜಾರಿಯಾಗಿದ್ದವು ಎಂದು ಹೇಳಿವೆ.
ತಲೆಮರೆಸಿಕೊಂಡು ಬೆಂಗಳೂರು ತೊರೆದು ಕೇರಳ ತಲುಪಿದ್ದ ಸುಬ್ರಮಣಿ ಅಲ್ಲಿ ಯಾರಿಗೂ ಅನುಮಾನ ಬಾರದಂತೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಪೊಲೀಸರು ತನ್ನನ್ನು ಬಂಧಿಸಬಹುದು ಎಂಬ ಭೀತಿಯಿಂದ ತನ್ನ ಹೆಸರನ್ನು ಹುಸೇನ್ ಸಿಕಂದರ್ ಬಾಷಾ ಎಂದು ಬದಲಾಯಿಸಿ ಮುಸ್ಲಿಂ ಆಗಿ ಗುರುತಿಸಿಕೊಂಡಿದ್ದ.
ತಾನೊಬ್ಬ ಮುಸ್ಲಿಂ ಎಂಬುದಾಗಿ ಹೇಳಿ ಸ್ಥಳೀಯರ ಜೊತೆ ಒಡನಾಟ ಬೆಳೆಸಿದ್ದ. ಮುಸ್ಲಿಂ ಧಾರ್ಮಿಕ ಆಚರಣೆ ಕಲಿತುಕೊಂಡು ಅದನ್ನು ಪಾಲಿಸುತ್ತಿದ್ದ. ಈತ ಹಿಂದೂ ಎಂದು ಯಾರಿಗೂ ಅನುಮಾನ ಬಾರದಂತೆ ನೋಡಿಕೊಂಡಿದ್ದ.
ಕೇರಳದಲ್ಲಿ ಇದ್ದುಕೊಂಡು ಮುಸ್ಲಿಂ ಧರ್ಮವನ್ನು ಸಂಪೂರ್ಣವಾಗಿ ಕಲಿತು ಚಿಕ್ಕಮಗಳೂರಿಗೆ ವಾಸ್ತವ್ಯ ಬದಲಿಸಿ ಅಲ್ಲಿನ ಮಸೀದಿಯೊಂದರಲ್ಲಿ ಮೌಲ್ವಿಯಾಗಿ ಕೆಲಸ ಮಾಡಿಕೊಂಡಿದ್ದ. ಆರೋಪಿ ಚಿಕ್ಕಮಗಳೂರಿನಲ್ಲಿ ಇರುವುದಾಗಿ ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರಿಗೆ ತೆರಳಿದ್ದ ಪೊಲೀಸರ ವಿಶೇಷ ತಂಡ ಈತನ ಮೇಲೆ
ವೊಂದನ್ನು ಇಟ್ಟಿದ್ದರು.
ಮೌಲ್ವಿ ಆಗಿರುವ ವ್ಯಕ್ತಿಯೇ ಸುಬ್ರಮಣಿ ಎಂಬುದಾಗಿ ಖಚಿತ ಸುಳಿವು ಸಿಕ್ಕಿದ ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಸುಬ್ರಮಣಿ ಯನ್ನು ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
