ಮಂಗಳೂರು: ಉಚ್ಚ ನ್ಯಾಯಾಲಯದ ಆದೇಶದ ಪ್ರತಿ ಲಭಿಸದ ಕಾರಣ ಮಳಲಿ ಮಸೀದಿ ಪ್ರಕರಣ ಸೋಮವಾರಕ್ಕೆ ಮುಂದೂಡಿಕೆ

ಕರಾವಳಿ

ಮಳಲಿ ಜುಮ್ಮಾ ಮಸೀದಿ ನವೀಕರಣದ ಸಂದರ್ಭದಲ್ಲಿ ನಡೆದ ವಿವಾದ ಹೊಸ ಚರ್ಚೆಗೆ ಗ್ರಾಸವಾಗಿತ್ತು. ಮಳಲಿ ಮಸೀದಿಯ ವಿವಾದವು 2022 ರ ಎಪ್ರಿಲ್ ತಿಂಗಳ 22ರಂದು ಕೋರ್ಟ್ ಮೆಟ್ಟಿಲೇರಿತ್ತು.

ಮಳಲಿ ಮಸೀದಿ ವಿವಾದದಲ್ಲಿ ಉತ್ಖನನ ಮಾಡಿ ಸರ್ವೇ ಮಾಡ ಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದು ವಕ್ಪ್ ಇಲಾಖೆಗೆ ಸಂಬಂಧ ಪಟ್ಟ ಸ್ಥಳ ಅದ್ದರಿಂದ ವಕ್ಪ್ ಟ್ರಿಬ್ಯೂನಲ್ ನಲ್ಲಿಯೇ ವಿಚಾರಣೆ ನಡೆಸಬೇಕು ಎಂದು ಮಸೀದಿ ಪರ ವಾದ ಮಂಡಿಸಿ, ಕೊನೆ ಗಳಿಗೆಯಲ್ಲಿ ಮಸೀದಿ ಪರ ಪಿರ್ಯಾದಿದಾರರು ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಇತ್ತೀಚೆಗೆ ಮಾನ್ಯ ಉಚ್ಚ ನ್ಯಾಯಾಲಯವು ಮಸೀದಿ ಪರ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿ, ಕೆಳಗಿನ ನ್ಯಾಯಾಲಯದಲ್ಲೇ ಮಸೀದಿ ಜಾಗ ವಕ್ಫ್ ಆಸ್ತಿ ಹೌದಾ.? ಅಥವಾ ಅಲ್ಲವಾ ಎಂದು ನಿರ್ಧರಿಸಲು ಹೈಕೋರ್ಟ್ ನಿರ್ದೇಶನ ನೀಡಿ ಮೇಲ್ಮನವಿಯನ್ನು ವಜಾಗೊಳಿಸಿದೆ ಎನ್ನಲಾಗಿದೆ.

ಈ ಕುರಿತು ಪೆಬ್ರವರಿ 17 ರಂದು ಮಂಗಳೂರಿನ ನ್ಯಾಯಾಲಯದಲ್ಲಿ ಮತ್ತೆ ಅರ್ಜಿ ವಿಚಾರಣೆ ಬಂದು, ಉಚ್ಚ ನ್ಯಾಯಾಲಯದ ಆದೇಶದ ಪ್ರತಿ ಲಭ್ಯವಾಗದ ಕಾರಣ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತೆ ಸೋಮವಾರಕ್ಕೆ ಮುಂದೂಡಿದೆ. ವಿವಾದಿತ ಮಳಲಿ ಮಸೀದಿಯ ಸರ್ವೇ ನಡೆಸಲು ಎದುರುದಾರ ದನಂಜಯ ಸಲ್ಲಿಸಿದ್ದ ಅರ್ಜಿಯ ವಿಚಾರವಾಗಿ ಹೈಕೋರ್ಟ್ ತೀರ್ಪಿನ ಪ್ರತಿ ತಲುಪಿದ ಬಳಿಕವೇ ವಾದ ಮಂಡನೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.