ಅಪ್ರಾಪ್ತ ಬಾಲಕೀಯ ಅತ್ಯಾಚಾರ ಪ್ರಕರಣ: ಗರಿಷ್ಟ ಶಿಕ್ಷೆ ನೀಡಿದ ಜಿಲ್ಲಾ ನ್ಯಾಯಾಲಯ

ರಾಜ್ಯ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಕಲ್ಲು ಕ್ವಾರೆಯಲ್ಲಿ ಅಪ್ರಾಪ್ತ ಬಾಲಕೀಯ ಅತ್ಯಾಚಾರ ಪ್ರಕರಣ ಇಡೀ ದೇಶದಲ್ಲೇ ದೊಡ್ಡ ಕೋಲಾಹಲ ಉಂಟಾಗಿತ್ತು ಕುಂಚೇಬೈಲ್ ಸಮೀಪದ ಗ್ರಾಮವೊಂದರಲ್ಲಿ ವಾಸವಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾ ಚಾರ ನಡೆದಿದೆ ಎಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಜನವರಿ 30, 2021 ರಂದು ಪ್ರಕರಣ ದಾಖಲಾಗಿತ್ತು.

ಅಂದಿನ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಶ್ರುತಿ ರವರು ಸಾಮೂಹಿಕ ಅತ್ಯಾಚಾರಗೈದ ಬಾಲಕೀಯ ತಾಯಿ ಗೀತ ಸೇರಿದಂತೆ 53 ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದರು ತಾಯಿ ಮೊದಲು ನಾನು ಅಪ್ರಾಪ್ತೆಯ ಚಿಕ್ಕಮ್ಮ ಎಂದು ತಿಳಿಸಿದರು ನಂತರ ತನಿಖೆಯಿಂದ ತಾಯಿಯೆಂದು ತಿಳಿದು ಬಂತು ತಾಯಿಯೇ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯವು 49 ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಮಾನಿಸಿ ಉಳಿದ ನಾಲ್ವರು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಿ‌ ತೀರ್ಪು ನೀಡಿದೆ.

ಪ್ರಕರಣದ 1ನೇ ಆರೋಪಿ ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ 22 ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ. ಇನ್ನು ಉಳಿದ ಮೂವರು ಆರೋಪಿಗಳಾದ ಸಂತ್ರಸ್ತ ಬಾಲಕಿ ತಾಯಿ ಗೀತಾ, ಗಿರೀಶ್ ಹಾಗೂ ದೇವಿಶರಣ್ ಇವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ನಾಲ್ವರು ಆರೋಪಿಗಳಿಗೂ ತಲಾ 25 ಸಾವಿರ ದಂಡ ವಿಧಿಸಿ ನ್ಯಾಯಮೂರ್ತಿ ಶಾಂತಣ್ಣ ಆಳ್ವ ತೀರ್ಪು ನೀಡಿದ್ದಾರೆ.

15 ವರ್ಷದ ಬಾಲಕಿ ಮೇಲೆ ಸ್ಮಾಲ್ ಅಭಿ ಮತ್ತು ಆತನ ಸ್ನೇಹಿತರು 2020ರ ಸೆಪ್ಟೆಂಬರ್ ನಿಂದ 2021ರ ಜನವರಿವರೆಗೆ ಬ್ಲ್ಯಾಕ್‌ ಮೇಲ್ ಮಾಡಿ ಅತ್ಯಾಚಾರವೆಸಗಿದ್ದರು.
ಪ್ರಕರಣ ದಾಖಲಾದ ಹಿನ್ನಲೆ ಅಂದಿನ ಹೆಚ್ಚುವರಿ ಎಸ್ಪಿ ಶ್ರುತಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಒಂದೇ ಪ್ರಕರಣದಲ್ಲಿ 38 ವಿವಿಧ ರೀತಿಯ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದಲ್ಲಿ ಒಟ್ಟು 53 ಜನರನ್ನು ಬಂಧಿಸಲಾಗಿತ್ತು. ಸಂತ್ರಸ್ತ ಬಾಲಕಿಯ ತಾಯಿ ಸೇರಿದಂತೆ ನಾಲ್ಕು ಜನರ ಮೇಲಿನ ಅಪರಾಧ ಸಾಬೀತು ಮಾಡಿದ್ದ ಕೋರ್ಟ್, ಮಾರ್ಚ್ 7ರಂದು ಉಳಿದ 49 ಮಂದಿಯನ್ನು ನಿರ್ದೋಷಿಗಳು ಎಂದು ತೀರ್ಮಾನಿಸಿತ್ತು.

ಇದೀಗ ನಾಲ್ವರು ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಮೂರ್ತಿ ಶಾಂತಣ್ಣ ಆಳ್ವ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.