ವಜಾಗೊಂಡ ಪೊಲೀಸಪ್ಪನಿಂದ ಲೋಕಾಯುಕ್ತರ ಹೆಸರಿನಲ್ಲಿ ಹಣ ವಸೂಲಿ.!

ರಾಜ್ಯ

ಅಧಿಕಾರಿಗಳೇ ಎಚ್ಚರ.. ವಸೂಲಿಗಾರ ಬಂದಾನು.

ಕೆಲವು ಅಧಿಕಾರಿಗಳಿಗೆ ದೂರವಾಣಿ ಕರೆಯೊಂದು ಬರುತ್ತಿದ್ದು ಆ ಕರೆಯಲ್ಲಿ ನಾನು ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿ ನೋಡು ನಿನ್ನ ಬಗ್ಗೆ ದೂರು ಬಂದಿದೆ ಕೂಡಲೇ ಬಂದು ನಾನು ತಿಳಿಸಿದ ಅಕೌಂಟಿಗೆ ಹಣ ಹಾಕಿದರೇ ನೀನು ಸೇಫಾಗುತ್ತಿಯಾ. ಇಲ್ಲದಿದ್ದರೆ ಜೈಲಿಗೆ ಹೋಗುತ್ತಿಯಾ ಯಾವುದು ಬೇಕು ನಿನಗೆ ಎಂದು ವ್ಯಕ್ತಿಯೊಬ್ಬನಿಂದ ಪೋನ್ ಬಂದಾಕ್ಷಣ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ಆ ವ್ಯಕ್ತಿ ಹೇಳಿದ ಅಕೌಂಟ್ ಗೆ ಹಣ ಹಾಕಿರುವ ಪ್ರಕರಣ ವರದಿಯಾಗಿದೆ.

ಈ ಹಿಂದೆ ಶೃಂಗೇರಿ ಮತ್ತು ಕಡೂರು ಪೊಲೀಸ್ ಠಾಣೆಗಳಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಅಮಾನತ್ತುಗೊಂಡು ಸೇವೆಯಿಂದ ವಜಾಗೊಂಡಿರುವ ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲ್ಲೂಕಿನ ಸದಲಗ ಹೋಬಳಿಯ ಕುಂಬಾರಗಲ್ಲಿಯ ನಿವಾಸಿಯಾಗಿರುವ ನಿಂಗಪ್ಪನ ಮಗನಾದ ಮುರಿಗೆಪ್ಪ ನಿಂಗಪ್ಪ ಕುಂಬಾರ ಎಂಬಾತನೇ ಲೋಕಾಯುಕ್ತರ ಹೆಸರಿನಲ್ಲಿ ಅಧಿಕಾರಿಗಳಿಗೆ ಮತ್ತು ಇಲಾಖಾ ಸಿಬ್ಬಂದಿಗಳಿಗೆ ದೂರವಾಣಿ ಮೂಲಕ ಹೆದರಿಸಿ ತನ್ನ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದು ವಿಚಾರ ತಿಳಿದ ಲೋಕಾಯುಕ್ತ ಅಧಿಕಾರಿಗಳು ತಮ್ಮಗಳ ಹೆಸರಿನಲ್ಲಿ ಯಾವುದೇ ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ತಕ್ಷಣವೇ ಹತ್ತಿರದ ಪೊಲಿಸ್ ಠಾಣೇಗೆ ದೂರು ನೀಡುವುದರೊಂದಿಗೆ, ತಮ್ಮ ಮೊಬೈಲ್ ನಲ್ಲಿ ಆ ವ್ಯಕ್ತಿಯ ಸಂಭಾಷಣೆ ರೆಕಾರ್ಡ್ ಮಾಡಿಕೊಂಡು ತಮ್ಮ ಇಲಾಖೆಗೆ ಕಳಿಸಿದಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.

ಈ ವ್ಯಕ್ತಿಯು ಹಣ ವಸೂಲಿದಂಧೆ ಎಷ್ಟರ ಮಟ್ಟಿಗೆ ಇದೆ ಎಂದರೇ ಜಿಲ್ಲಾಧಿಕಾರಿ ಪಿ.ಎ., ಲೋಕೋಪಯೋಗಿ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಭ್ರಷ್ಟ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದ್ದಾನೆ. ಹಣ ಕೊಟ್ಟ ಅಧಿಕಾರಿಗಳು ತಮ್ಮ ಇಲಾಖೆಯ ಗಮನಕ್ಕೆ ತರಲು ಹಿಂದೇಟು ಹಾಕುತ್ತಿದ್ದು ತಮ್ಮ ಗಮನಕ್ಕೆ ಬಂದಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಮುರಿಗೆಪ್ಪ ನಿಂಗಪ್ಪ ಕುಂಬಾರನ ಮೇಲೆ ಹಲವು ಪ್ರಕರಣಗಳು ಇದ್ದು ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಒತ್ತಾಯಿಸಬೇಕೆಂದು ಕೆಲವು ಅಧಿಕಾರಿಗಳು ಪತ್ರಕರ್ತರಲ್ಲಿ ಮನವಿಗೊಂಡಿದ್ದಾರೆ.

ವರದಿ: ಎಂ.ಎ.ಸಲಾವುದ್ದೀನ್