ಮೂಡಿಗೆರೆ : ಕಣ್ಣಾಮುಚ್ಚೆ ಕಾಡು ಗೋಡು, ಹುಯ್ಯೋ ಹುಯ್ಯೋ ಮಳೆರಾಯ ದಂತಹ ಅದ್ಬುತ ಗಾಯನಗಳು ಪುಸ್ತಕಗಳಿಂದ ಮಸ್ತಕಕ್ಕೆ ತೆಗೆದುಕೊಳ್ಳುವ ಮೂಲಕ ಅದರಿಂದ ಒಳಿತನ್ನು ತೆಗೆದುಕೊಂಡು ಸಮಾಜದಲ್ಲಿ ಉತ್ತಮ ವಾತವರಣ ಸೃಷ್ಠಿಗೆ ಕಾರಣವಾಗಿದ್ದ ಪಾಠಗಳು ಮತ್ತು ಜಾನಪದ ಗೀತೆಗಳು ಇಂದು ಎಳೆ ಮರೆಯಾಗಿ ಸಮಾಜವನ್ನು ಕೆಲವು ಕೀಳು ಸಾಹಿತ್ಯಗಳು ಇಂದಿನ ಯುವ ಪೀಳಿಗೆಯ ದಾರಿಯನ್ನು ತಪ್ಪಿಸುತ್ತಿವೆ ಮತ್ತು ದುರಂತವನ್ನು ತಂದೊಡ್ಡುತ್ತಿದೆ. ಉತ್ತಮ ಸಮಾಜ ಮತ್ತು ಮುಂದಿನ ಪೀಳಿಗೆಗೆ ಜಾನಪದ ಸಾಹಿತ್ಯ, ಬಳಕೆ ಮತ್ತು ಅದರ ಸಂಪೂರ್ಣ ಅರಿವು ಅತ್ಯಗತ್ಯವಾಗಿದೆ ಎಂದು ಲೇಖಕ ಸಾಹಿತಿ ಡಾ.ಸಂಪತ್ ಬೆಟ್ಟಗೆರೆ ಅವರು ಸಂಪೂರ್ಣವಾಗಿ ವಿವರಿಸಿದ್ದಾರೆ ಎಂದು ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಬಿ.ಆರ್.ಯತೀಶ್ ತಿಳಿಸಿದರು.
ಮೂಡಿಗೆರೆ ತಾಲ್ಲೂಕಿನ ಹಳಕೆ ಸ ಹಿ ಪ್ರಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೆನಪಿನ ಓಣಿಯಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಸಾಹಿತಿ ಡಾ.ಸಂಪತ್ ಬೆಟ್ಟಗೆರೆ ಮಾತನಾಡಿ ಡಾ.ತಿನಂಶಂಕರ ನಾರಾಯಣ ಡಾ.ಶ್ರೀಕಂಠ ಕೂಡಿಗೆ , ಡಾ.ರಹಮತ್ ತರಿಕೆರೆ, ವಿದ್ವಾಂಸರ ಜೊತೆಗೆ ಸ್ಥಳಿಯ ಹಳ್ಳಿಗಳಲ್ಲಿ ಜಾನಪದ ಶಿಶು ಪ್ರಶ ಗಳನ್ನು ಒಳಗೊಂಡಿದ್ದು ಇದನ್ನು ಪ್ರತಿಯೊಬ್ಬರು ಓದುವುದರ ಮೂಲಕ ಜಾನಪದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತೆ ಮನವಿಗೊಂಡರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ನೆರವೇರಿಸಿದರು. ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಮಂಜನಾಯ್ಕ ಎಚ್.ಎಲ್. ವಹಿಸಿದ್ದರು., ಪಂಚಾಯತ್ ಅಭಿವೃದ್ದಿ ಅಧಿಕಾರಿ ದರ್ಶನ್, ಉಮೇಶ್ ಪದ್ಮಾಕ್ಷೆ ಗೌಡ, ಎಚ್.ಕೆ.ಶಿವಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಸುರೇಂದ್ರ, ಸೇರಿದಂತೆ ಅನೇಕ ಉಪಸ್ಥಿತರಿದ್ದರು.
