ವಾಹನ ಅಪಘಾತದ ಪ್ರಕರಣ ಆರೋಪಿ ದೋಷಮುಕ್ತ; ಆರೋಪಿ ಪರ ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ

ರಾಜ್ಯ

ಸುಮಾರು ಆರು ವರ್ಷಗಳ ಹಿಂದೆ ಗಣೇಶ್ ರೈ ಎಂಬವರು ದ್ವಿಚಕ್ರ ವಾಹನವನ್ನು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಿರುವಾಗ ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಪೆಟ್ರೋಲ್ ಪಂಪ್ ಬಳಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸೊಂದನ್ನು ಆಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಓವರ್ ಟೇಕ್ ಮಾಡಿದ ಪರಿಣಾಮ, ದ್ವಿಚಕ್ರದ ವಾಹನ ಸವಾರ ಹತೋಟಿ ತಪ್ಪಿ ಸ್ಕಿಡ್ ಆಗಿ ಸವಾರನ ಸಹಿತ ಸ್ಕೂಟರ್ ರಸ್ತೆಗೆ ಬಿದ್ದು, ಸವಾರನು ರಸ್ತೆಗೆ ಎಸೆಯಲ್ಪಟ್ಟು, ದ್ವಿಚಕ್ರ ವಾಹನ ಜಖಂಗೊಳ್ಳಲು ಕಾರಣವಾಗಿರುತ್ತಾರೆ. ಅಪಘಾತದಿಂದ ಸ್ವತಹ ಆರೋಪಿ ಗಣೇಶ್ ರೈ ರವರು ತೀವ್ರ ಸ್ವರೂಪದ ಗಾಯಗೊಂಡಿರುತ್ತಾರೆ ಆದುದರಿಂದ ಆರೋಪಿಯು ಕಲಂ 279 ಐಪಿಸಿ ಅನ್ವಯ ತಪ್ಪು ಎಸಗಿದ್ದಾರೆ ಎಂದು ಆರೋಪಿಸಿ ಗಣೇಶ್ ರೈ ರವರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಕುತೂಹಲದ ಈ ಪ್ರಕರಣದ ಆರಂಭದಲ್ಲಿ ಶ್ರೀಯುತ ಗಣೇಶ್ ಅವರ ದೂರನ್ನು ಸ್ವೀಕರಿಸಿ ಬಸ್ಸು ಚಾಲಕನ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲು ಮಾಡಿಕೊಳ್ಳಲಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ತದನಂತರ ಬಸ್ಸು ಚಾಲಕನ ದೂರನ್ನು ಸ್ವಲ್ಪ ವಿಳಂಬವಾಗಿ ಸ್ವೀಕರಿಸಿ, ಆ ಆಧಾರದಲ್ಲಿ ತನಿಖೆ ನಡೆಸಿ ತದನಂತರ ಗಣೇಶ್ ರೈ ಅವರು ಆರೋಪಿ ಎಂದು ಅಂತಿಮ ವರದಿ ಸಲ್ಲಿಸಲಾಗಿತ್ತು.

ಸದ್ರಿ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು 10 ಸಾಕ್ಷಿಗಳ ಪೈಕಿ 8 ಸಾಕ್ಷಿಗಳನ್ನು ತನಿಖೆ ನಡೆಸಿ, ಸುಮಾರು 22 ದಾಖಲೆಗಳನ್ನು ಆಭಿಯೋಜನ ಪರ ಗುರುತಿಸಲ್ಪಟ್ಟಿತು. ಸರಕಾರಿ ಅಭಿಯೋಜಕರು ಮತ್ತು ಆರೋಪಿಯ ಪರ ವಕೀಲರಾದ ಕಜೆ ಲಾ ಚೇಂಬರ್ಸ್ ನ ಶ್ರೀಯುತ ಮಹೇಶ್ ಕಜೆ ಇವರ ವಾದವಿವಾದಗಳನ್ನು ಆಲಿಸಿದ ನಂತರ ಸದ್ರಿ ಅಭಿಯೋಜನ ಪರ ದಾಖಲೆಗಳನ್ನು ಪರಿಶೀಲಿಸಿ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ತೀರ್ಮಾನಿಸಿ, ಮಾನ್ಯ ಪ್ರಧಾನಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯ ದಂಡಾಧಿಕಾರಿಯವರ ನ್ಯಾಯಾಲಯ ಪುತ್ತೂರು ಇವರು ಆರೋಪಿಯನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿ ಆದೇಶಿಸಿರುತ್ತಾರೆ.