ಪುತ್ತೂರು: ಕೂರ್ನಡ್ಕ ಜಂಕ್ಷನ್ ನಲ್ಲಿ ಅಪಾಯಕಾರಿ ಮರ; ತೆರವುಗೊಳಿಸಲು ಆಗ್ರಹ

ಕರಾವಳಿ

ಪುತ್ತೂರು: ಕೂರ್ನಡ್ಕ ಜಂಕ್ಷನ್ ಬಳಿ ಇರುವ ಅಪಾಯಕಾರಿ ಮರವೊಂದು ಇವತ್ತೋ, ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿದೆ. ಒಂದು ವೇಳೆ ಇದನ್ನು ತೆರವುಗೊಳಿಸದೇ ಹೋದರೆ ದೊಡ್ಡ ಅನಾಹುತ ಸಂಭವಿಸಬಹುದು ಎಂಬ ಆತಂಕದಲ್ಲಿದ್ದಾರೆ ಸ್ಥಳೀಯರು.

ಕೂಡಲೇ ಈ ಮರವನ್ನು ತೆರವುಗೊಳಿಸಿದ್ದಲ್ಲಿ ಇದೇ ಮಾರ್ಗದಲ್ಲಿ ದಿನನಿತ್ಯ ಹೋಗುವ ಶಾಲಾ ಮತ್ತು ಮದ್ರಸಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ರಸ್ತೆಯಲ್ಲಿ ವಾಹನ ಸಂಚಾರದ ದಟ್ಟಣೆ ಇರುವುದರಿಂದ ವಾಹನದ ಮೇಲೆಯೂ ಮರ ಬೀಳುವ ಅಪಾಯ ಇದೆ. ಮರದ ಬಳಿಯೇ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಮರ ಮುರಿದು ಬಿದ್ದಲ್ಲಿ ಇನ್ನಷ್ಟು ಅನಾಹುತ ಆಗುವ ಸಂಭವ ಇದೆ. ಅದ್ದರಿಂದ ತಕ್ಷಣ ಈ ಮರವನ್ನು ತೆರವುಗೊಳಿಸಿ ಸಂಭವಿಸುವ ದೊಡ್ಡ ದುರಂತವನ್ನು ತಪ್ಪಿಸಬೇಕಾಗಿದೆ. ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ