ದಾವಣಗೆರೆ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ಒತ್ತಡ ಹಾಕುತ್ತಿರುವ Shahul Hameed ಅವರು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಬಗ್ಗೆ ಮೌನ ವಹಿಸಿರುವುದು ಇಲ್ಲಿ ಪ್ರಶ್ನಾರ್ಥಕವಾಗಿದೆ ಎಂದು ಸ್ಥಳೀಯ ಅಲ್ಪಸಂಖ್ಯಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಜಿಲ್ಲೆಯಲ್ಲೇ Ullal ಕ್ಷೇತ್ರವನ್ನು ಬಿಟ್ಟರೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರವೆಂದರೆ Bantwal ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.
ಇಂತಹ ಸಂದರ್ಭದಲ್ಲಿ ಬಂಟ್ವಾಳದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಬಗ್ಗೆ ಯಾವುದೇ ಸ್ಪಷ್ಟವಾದ ಹೇಳಿಕೆ ನೀಡದೆ ದೂರದ ಊರಾದ ದಾವಣಗೆರೆ ವಿಷಯದಲ್ಲಿ ಮಾತ್ರ ಕಾಳಜಿ ತೋರುತ್ತಿರುವುದು ಸ್ಥಳೀಯ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ನಿಮ್ಮನ್ನು ಬೆಳೆಸಿದ್ದು ಇಲ್ಲಿನ ಜನರು, ಇಲ್ಲಿನ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಸಮುದಾಯವೇ ಆಗಿರುವಾಗ ಅವರ ಪರವಾಗಿ ಒಂದು ಮಾತು ಮಾತನಾಡಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಬಂಟ್ವಾಳ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಲ ಹಾಗೂ ಬೆಂಬಲ ಸಾಕಷ್ಟು ಇರುವುದರಿಂದ ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಅಲ್ಪಸಂಖ್ಯಾತರ ಬಗ್ಗೆ ಕರುಣೆ ತೋರಿಸುವ ನೀವು ಬಂಟ್ವಾಳದ ಅಲ್ಪಸಂಖ್ಯಾತರ ಸಮಸ್ಯೆ ಹಾಗೂ ಹಕ್ಕಿನ ಬಗ್ಗೆ ಕೂಡ ಧ್ವನಿ ಎತ್ತಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ನಿಮ್ಮ ಹೇಳಿಕೆ ಸ್ವಾಗತವೇ!ನಿಮಗೆ ಸಂಪೂರ್ಣ ಸ್ವಾತಂತ್ರ್ಯವೂ ಇದೆ.ಆದರೆ ಉನ್ನತ ವಿದ್ಯಾಭ್ಯಾಸ ಹೊಂದಿರುವ ನೀವು ದಕ್ಷಿಣ ಕನ್ನಡದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೇಳಿಕೆ ನೀಡಬೇಕಿತ್ತು. ಈತರಹದ ಹೇಳಿಕೆಯಿಂದ ನಮಗೆ ಮುಜುಗರವಾಗಿದೆ.
ಇನ್ನಾದರೂ ಬಂಟ್ವಾಳ ಕ್ಷೇತ್ರದ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕುವಂತೆ ನೀವು ಮುಂಚೂಣಿಯಲ್ಲಿ ನಿಂತು ಟಿಕೆಟ್ ಕೇಳಬೇಕು. “ನೀವು ಬಂಟ್ವಾಳಕ್ಕೆ ಸೀಟ್ ಕೇಳಿದರೆ ನಾವು ನಿಮ್ಮ ಜೊತೆ ಇದ್ದೇವೆ” ಎಂಬ ಸಂದೇಶವನ್ನು ಇಲ್ಲಿನ ಅಲ್ಪಸಂಖ್ಯಾತರು ವ್ಯಕ್ತಪಡಿಸುತ್ತಿದ್ದು, ತಮ್ಮ ಹಕ್ಕಿಗಾಗಿ ಒಂದಾಗಲು ಸಿದ್ಧರಾಗಿದ್ದಾರೆ.ಇದು ಮುಂದೆ ಒಂದು ಹೋರಾಟವಾಗಲಿದೆ…
