ಪುತ್ತೂರು : ನಗರದ ಮಂಜಲಪಡ್ಪು ಎಂಬಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದು ವಿಕಲಚೇತನ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಡ್ಕಿದು ಗ್ರಾಮದ ಏಮಾಜೆ ನಿವಾಸಿ ಶಿವರಾಮ ನಾಯ್ಕ(50)ಮೃತಪಟ್ಟ ಸವಾರ.
ಲಾರಿ ಚಾಲಕ ಸಂತೋಷ್ ಕುಮಾರ್ ಎಂಬವರು KA-05-MG-5926 ನೇ ನೋಂದಣಿ ನಂಬ್ರದ ಲಾರಿಯನ್ನು, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಪುತ್ತೂರು ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಮಂಗಳ ಸ್ಟೋರ್ ಮುಂಭಾಗದಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪುತ್ತೂರು ಕಡೆಗೆ ಹೋಗುತ್ತಿದ್ದ KA-19-EW-9743 ಸಂಖ್ಯೆಯ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಿಕಲಚೇತನ ಸವಾರ ರಸ್ತೆಗೆಸೆಯಲ್ಪಟ್ಟು ಮೃತಪಟ್ಟಿದ್ದಾರೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 89/2024 ಕಲಂ: 281, 106 ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
